newsfirstkannada.com

ಸೈಬರ್​ ಖದೀಮರೇ ಎಚ್ಚರ! ಸ್ಕ್ಯಾಮ್​​ ಮಾಡಿ ಸಿಕ್ಕಿಬಿದ್ರೆ ಅಂತಿಂಥಾ ಶಿಕ್ಷೆ ಅಲ್ಲ! ಸೀದಾ ಜೈಲೇ!

Share :

Published January 21, 2024 at 5:52am

    ವ್ಯಕ್ತಿಯ ಆಧಾರ್ ಅಧಿಕೃತತೆ ಪರಿಶೀಲಿಸಬೇಕೆಂದು ಆದೇಶ

    ವಂಚನೆ ಮಾಡಿದ್ದ ನಾಲ್ವರು ಪೊಲೀಸ್​​ ಅಧಿಕಾರಿಗಳ ವಶಕ್ಕೆ

    ಆಸ್ತಿ ಮಾರಾಟ, ನೋಂದಣಿಗೆ ಆಧಾರ್ ಅಧಿಕೃತತೆ ಕಡ್ಡಾಯ

ಸರ್ಕಾರದ ವೆಬ್​ಸೈಟ್​ಗಳಿಗೆ ಲಗ್ಗೆ ಇಟ್ಟು ಸಾರ್ವಜನಿಕರ ಹಣವನ್ನ ಲೂಟಿ ಹೊಡೆಯುತ್ತಿದ್ದ ಆನ್​ಲೈನ್​ ಖದೀಮರಿಗೆ ಪಾಠ ಕಲಿಸಲು ಹೈಕೋರ್ಟ್​​ ಮುಂದಾಗಿದೆ. ನೋಂದಣಿ, ಮುದ್ರಾಂಕ ಇಲಾಖೆಯ ಆಯುಕ್ತರಿಗೆ ಖಡಕ್​​ ಆದೇಶ ಹೊರಡಿಸಿದೆ.
ಇದು ಸೋಶಿಯಲ್​ ಮೀಡಿಯಾ ಜಮಾನ. ಕೂತಲ್ಲೇ ಬೆರಳಂಚಿಗೆ ಜಗತ್ತಿನ ಎಲ್ಲಾ ಸೇವೆಗಳು ಸಿಗುತ್ತೆ. ಮೊಬೈಲ್​ ರಿಚಾರ್ಜ್​ನಿಂದ ಹಿಡಿದು, ಸೈಟ್​ ರಿಜಿಸ್ಟ್ರೇಷನ್​ವರೆಗೂ ಎಲ್ಲವೂ ಆನ್​ಲೈನ್​ನಲ್ಲೇ ಸಿಗುತ್ತೆ. ಹಾಗಂತ ಆನ್​ಲೈನ್​ ಲೂಟಿಕೋರರ ಬಗ್ಗೆ ನಾವು ನೆಗ್​ಲೆಕ್ಟ್​ ಮಾಡೋ ಹಾಗಿಲ್ಲ. ನಾವು ಚಾಪೆ ಕೆಳಗೆ ನುಗ್ಗಿದರೆ ಸೈಬರ್​ ಖದೀಮರು ರಂಗೋಲಿ ಕೆಳಗೆ ನುಸುಳಿ ಬಿಡ್ತಾರೆ.

ಸರ್ಕಾರದ ವೆಬ್​ಸೈಟ್​ ಅನ್ನೇ ದಾಳವನ್ನಾಗಿ ಮಾಡಿಕೊಂಡಿದ್ದ ಕೆಲ ವಂಚಕರು, ಆಸ್ತಿ ರಿಜಿಸ್ಟ್ರೇಶನ್​ ವೆಬ್​ಸೈಟ್ ಸೇವೆಯನ್ನೇ ​ದುರ್ಬಳಕೆ ಮಾಡಿಕೊಳ್ಳುತ್ತಿದ್ದರು. ಆಧಾರ್ ಹಾಗೂ ಬಯೋಮೆಟ್ರಿಕ್ ಸೇವೆ ಮೂಲಕ ಹಣ ವರ್ಗಾವಣೆ ಮಾಡಿ, AePS ಮೂಲಕ ಸಾರ್ವಜನಿಕರ ಹಣವನ್ನ ಲೂಟಿ ಹೊಡೆದಿದ್ದರು. ಇದೀಗ ಕೊನೆಗೂ ಸೈಬರ್​​ ಖದೀಮರಿಗೆ ಕಡಿವಾಣ ಹಾಕಲು ಹೈಕೋರ್ಟ್​​ ಮಹತ್ವದ ತೀರ್ಪನ್ನ ಹೊರಡಿಸಿದೆ.

ಹೈಕೋರ್ಟ್ ತೀರ್ಪಿನಲ್ಲಿ ಏನಿದೆ?

ಇನ್ಮುಂದೆ ಆಸ್ತಿ ಮಾರಾಟ ಹಾಗೂ ನೋಂದಣಿಗೆ ಆಧಾರ್ ಅಧಿಕೃತತೆಯನ್ನ ಕಡ್ಡಾಯವಾಗಿ ಪರಿಶೀಲನೆ ಮಾಡಬೇಕು. ಮಾರಾಟ ಮಾಡುವ ವ್ಯಕ್ತಿಯ ಆಧಾರ್ ಅಧಿಕೃತತೆಯನ್ನ ಪರಿಶೀಲಿಸಬೇಕೆಂದು ನೋಂದಣಿ ಹಾಗೂ ಮುದ್ರಾಂಕ ಇಲಾಖೆಯ ಆಯುಕ್ತರಿಗೆ ಹೈಕೋರ್ಟ್​​ ಆದೇಶ ಹೊರಡಿಸಿದೆ. ಯಾವ ವ್ಯಕ್ತಿ ಆಸ್ತಿಯನ್ನ ಮಾರಾಟ ಮಾಡಲು ಮುಂದಾಗ್ತಾರೋ ಆ ವ್ಯಕ್ತಿಯ ಆಧಾರ್​ಗೆ ಲಿಂಕ್​ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ಆಧರಿಸಿ ಅಧಿಕೃತತೆ ಪರಿಶೀಲನೆ ಮಾಡಲಾಗುತ್ತೆ. ಪರಿಶೀಲನೆ ನಂತರವೇ ನೋಂದಣಿ ಮಾಡಿಕೊಳ್ಳಬೇಕು ಅಂತ ಕಡ್ಡಾಯ ಮಾಡಲಾಗಿದೆ.

ಇದೇ ರೀತಿ ವಂಚನೆ ಮಾಡಿದ್ದ ನಾಲ್ವರನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಅಷ್ಟೇ ಅಲ್ಲದೆ ಸೈಬರ್‌ ವಂಚಕರಿಂದ ಮೋಸ ಹೋಗುವುದನ್ನು ತಪ್ಪಿಸಲು ಜನರು ತಮ್ಮ ಆಧಾರ್-ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆಯನ್ನು (ಎಇಪಿಎಸ್) ಬಳಸದೆ ನಿಷ್ಕ್ರಿಯಗೊಳಿಸುವಂತೆ ಪೊಲೀಸರು ಸಲಹೆ ನೀಡಿದ್ದಾರೆ. ಸರ್ಕಾರದ ಆನ್​ಲೈನ್​ ಸೇವೆಗಳನ್ನೇ ಖದೀಮರು ಟಾರ್ಗೆಟ್​ ಮಾಡಿದ್ದು, ಇನ್ನಾದರೂ ಈ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೈಬರ್​ ಖದೀಮರೇ ಎಚ್ಚರ! ಸ್ಕ್ಯಾಮ್​​ ಮಾಡಿ ಸಿಕ್ಕಿಬಿದ್ರೆ ಅಂತಿಂಥಾ ಶಿಕ್ಷೆ ಅಲ್ಲ! ಸೀದಾ ಜೈಲೇ!

https://newsfirstlive.com/wp-content/uploads/2023/12/CYBER_CRIME.jpg

Load More