newsfirstkannada.com

Good News: ಮೈಸೂರು-ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ಹೈಸ್ಪೀಡ್‌ ಬುಲೆಟ್ ರೈಲು; ಲೇಟೆಸ್ಟ್‌ ಅಪ್ಡೇಟ್‌ ಇಲ್ಲಿದೆ!

Share :

Published January 15, 2024 at 12:33pm

Update January 15, 2024 at 12:34pm

    ಮೈಸೂರು, ಮಂಡ್ಯ, ಬೆಂಗಳೂರು, ಚನ್ನಪಟ್ಟಣದಲ್ಲಿ ಬುಲೆಟ್ ರೈಲು ನಿಲ್ದಾಣ

    ಗುಜರಾತ್, ಮುಂಬೈನಲ್ಲಿ ಬುಲೆಟ್‌ ರೈಲಿಗೆ ಭೂಸ್ವಾಧೀನ ಪ್ರಕ್ರಿಯೆ

    ಅಹ್ಮದಾಬಾದ್‌-ಮುಂಬೈ ಮಾರ್ಗದಲ್ಲಿ ಮೊದಲ ಬುಲೆಟ್ ಟ್ರೈನ್‌

ದೇಶದಲ್ಲಿ ಹೈಸ್ಪೀಡ್ ಬುಲೆಟ್ ರೈಲು ಓಡಾಡುವ ಸಮಯ ಹತ್ತಿರವಾಗುತ್ತಿದೆ. ಅಹ್ಮದಾಬಾದ್‌-ಮುಂಬೈ ಮಾರ್ಗದಲ್ಲಿ ಮೊದಲ ಬುಲೆಟ್ ಟ್ರೈನ್‌ ದೇಶದಲ್ಲಿ ಸಂಚರಿಸಲಿದ್ದು, ರೈಲ್ವೇ ಇಲಾಖೆಯ ಕಾಮಗಾರಿ ಭರದಿಂದ ಸಾಗಿದೆ. ಗುಜರಾತ್, ಮುಂಬೈನಲ್ಲಿ ಬುಲೆಟ್‌ ರೈಲಿಗೆ ಭೂಸ್ವಾಧೀನ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ. ಈ ಮಧ್ಯೆ ಚೆನ್ನೈ- ಬೆಂಗಳೂರು-ಮೈಸೂರು ಮಾರ್ಗದಲ್ಲಿ ಬುಲೆಟ್ ರೈಲಿನ ಮಾರ್ಗ ನಿರ್ಮಾಣಕ್ಕಾಗಿ ಸರ್ವೆ ಕಾರ್ಯ ಕೂಡ ಶುರುವಾಗಿದೆ.

ಭಾರತೀಯ ರೈಲ್ವೆ ಇಲಾಖೆಯು ಬುಲೆಟ್ ಟ್ರೇನ್ ಕಾರಿಡಾರ್ ನಿರ್ಮಾಣಕ್ಕಾಗಿ ಸರ್ವೇ ನಡೆಸುತ್ತಿದೆ. ಚೆನ್ನೈ, ಪೊನ್ನಮಲ್ಲೇ, ಅರಕೋಣಂ, ಚಿಟ್ಟೂರು, ಬಂಗಾರಪೇಟೆ, ಬೆಂಗಳೂರು, ಚನ್ನಪಟ್ಟಣದಲ್ಲಿ ಬುಲೆಟ್ ರೈಲಿನ ನಿಲ್ದಾಣ ಸ್ಥಾಪನೆ ಮಾಡಲಾಗುತ್ತಿದೆ. ಇದರ ಲೇಟೆಸ್ಟ್ ಸರ್ವೇ ಮ್ಯಾಪ್ ಲಭ್ಯವಾಗಿದೆ.

ಸದ್ಯದ ಮಾಹಿತಿ ಪ್ರಕಾರ ಮಂಡ್ಯ, ಮೈಸೂರಿನಲ್ಲೂ ಹೈಸ್ಪೀಡ್ ಬುಲೆಟ್ ಟ್ರೇನ್ ನಿಲ್ದಾಣ ನಿರ್ಮಾಣ ಆಗಲಿದೆ. ಮೈಸೂರಿನಿಂದ ಹೊರಡುವ ಬುಲೆಟ್ ರೈಲಿಗೆ ಮಂಡ್ಯ, ಚನ್ನಪಟ್ಟಣದ ಬಳಿಕ ಬೆಂಗಳೂರಲ್ಲಿ ನಿಲ್ದಾಣ ಇರಲಿದೆ. ಚಿತ್ತೂರು ಮಾರ್ಗವಾಗಿ ಹೈಸ್ಪೀಡ್ ಬುಲೆಟ್ ರೈಲು ಚೆನ್ನೈ ಅನ್ನು ತಲುಪುವ ಯೋಜನೆ ರೂಪಿಸಲಾಗುತ್ತಿದೆ.

ಇದನ್ನೂ ಓದಿ: ಪೈಲೆಟ್​​ ಮುಖಕ್ಕೆ ಗುದ್ದಿದ ಪ್ರಯಾಣಿಕ.. ವಿಮಾನದಲ್ಲೇ ಖ್ಯಾತೆ ತೆಗೆದು ಪಂಚ್ ಕೊಟ್ಟ ಕಿರಾತಕ..!

ರೈಲ್ವೆ ಇಲಾಖೆಯ ಕಾಮಾಗಾರಿ ಅಂದುಕೊಂಡಂತೆ ಆದರೆ 2025 ರ ಅಂತ್ಯಕ್ಕೆ ಸೂರತ್-ಬಿಲ್ಲಮೋರ್ ನಡುವೆ ಮೊದಲ ಬುಲೆಟ್ ಟ್ರೇನ್ ಸಂಚರಿಸಲಿದೆ. ಇದರ ಜೊತೆಗೆ ಮೈಸೂರು-ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ಹೈಸ್ಪೀಡ್‌ ಬುಲೆಟ್ ರೈಲು ನಿಲ್ದಾಣಕ್ಕೆ ಸರ್ವೇ ಕಾರ್ಯ ಆರಂಭಿಸಿರುವುದು ಸಂತಸದ ಸುದ್ದಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Good News: ಮೈಸೂರು-ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ಹೈಸ್ಪೀಡ್‌ ಬುಲೆಟ್ ರೈಲು; ಲೇಟೆಸ್ಟ್‌ ಅಪ್ಡೇಟ್‌ ಇಲ್ಲಿದೆ!

https://newsfirstlive.com/wp-content/uploads/2024/01/Bullet-Train-Chennai.jpg

Load More