/newsfirstlive-kannada/media/post_attachments/wp-content/uploads/2024/04/Elephant.jpg)
ಬೆಂಗಳೂರು: ರಾಜ್ಯದಲ್ಲಿ ಪದೇ ಪದೇ ಕರೆಂಟ್ ಶಾಕ್ನಿಂದ ಆನೆಗಳು ಸಾವನ್ನಪ್ಪುತ್ತಿವೆ. ಮೊನ್ನೆ ಮೊನ್ನೆಯಷ್ಟೇ ಮೈಸೂರಿನಲ್ಲಿ ಎರಡು ಬಾರಿ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಭಾಗವಹಿಸಿದ್ದ ಅಶ್ವತ್ಥಾಮ ಆನೆ ವಿದ್ಯುತ್ ಸ್ವರ್ಶದಿಂದ ಮೃತಪಟ್ಟಿತ್ತು. ಇದೀಗ ಹೈಕೋರ್ಟ್ ಈ ರೀತಿಯ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿದೆ.
ಕರ್ನಾಟಕ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಆನೆಗಳು ಸಾವನ್ನಪ್ಪುತ್ತಿರೋ ಪ್ರಕರಣ ಸಂಬಂಧ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ಕೇಸ್ ದಾಖಲಿಸಿದೆ. ಈ ಬಗ್ಗೆ ಸಿಜೆ ಎನ್‌ವಿ ಅಂಜಾರಿಯಾ ಮತ್ತು ನ್ಯಾ. ಕೆ ವಿ ಅರವಿಂದ್ರ ಪೀಠ ಮಹತ್ವದ ನಿರ್ಧಾರ ಮಾಡಿದೆ.
ಇದನ್ನೂ ಓದಿ: ಮೈಸೂರು ದಸರಾ ಉತ್ಸವದಲ್ಲಿದ್ದ ಅಶ್ವತ್ಥಾಮ ಆನೆ ಅನುಮಾನಾಸ್ಪದ ಸಾವು; ಆಗಿದ್ದೇನು?
ಇನ್ನು, ಕರೆಂಟ್ ಶಾಕ್ಗೆ ಮೈಸೂರಿನಲ್ಲಿ ಅಶ್ವಥ್ಥಾಮ ಆನೆಯ ಸಾವನ್ನಪ್ಪಿದ್ದು ಸಿಬ್ಬಂದಿ ನಿರ್ಲಕ್ಷ್ಯದಿಂದ ಎಂಬ ವರದಿ ಇದೆ. ಅಲ್ಲದೇ ಚಿಕ್ಕಮಗಳೂರಿನಲ್ಲಿ ಒಂದು ಆನೆ ಹಾಗೂ ಮಡಿಕೇರಿಯಲ್ಲಿ ಕರೆಂಟ್ ಶಾಕ್ಗೆ 2 ಆನೆ ಮೃತಪಟ್ಟಿವೆ. ಹೀಗಾಗಿ ಮೈಸೂರು ಅಶ್ವತ್ಥಾಮ ಕೇಸ್ ಅನ್ನು ಆಧಾರವನ್ನಾಗಿ ಇಟ್ಟುಕೊಂಡ ಹೈಕೋರ್ಟ್ ಸುಮೊಟೋ ಕೇಸ್ ದಾಖಲಿಸಿದೆ. ಆರ್ಟಿಕಲ್ 226 ಅಡಿಯಲ್ಲಿ ಸುಮೊಟೋ ಕೇಸ್ ದಾಖಲಿಸಿದೆ.
ಕರ್ನಾಟಕ ರಾಜ್ಯ ಮತ್ತು ಇತರ ವನ್ಯ ಜೀವಿಗಳ ರಕ್ಷಣೆಗೆ ಏನು ಕ್ರಮ ಇದೆ. ಅವುಗಳ ಸುರಕ್ಷತೆ ಖಾತರಿಗೆ ಯಾವ ಕ್ರಮಗಳಿವೆ. ಆನೆಗಳ ಈ ಸಾವು ಪ್ರಕರಣಗಳ ಬಳಿಕ ಯಾವ ಕ್ರಮ ಆಗಿದೆ. ಅಂತಹ ಸಾವುಗಳ ತಡೆಗೆ ಆಗಿರುವ ಕ್ರಮಗಳು ಏನೇನು? ಯಾವ ಹಂತದಲ್ಲಿ ಕ್ರಮಕ್ಕೆ ಮುಂದಾಗಿದ್ದೀರಾ? ಯಾವ ಅಧಿಕೃತ ಇಲಾಖೆ ಮತ್ತು ಅಧಿಕಾರಿಗಳು ಇದರಲ್ಲಿ ಕೆಲಸ ಮಾಡ್ತಾ ಇದ್ದಾರೆ? ಇದಕ್ಕೆ ಸಂಬಂಧ ಉತ್ತರ ನೀಡಲು ಪ್ರತಿವಾದಿಗಳಿಗೆ ಹೈಕೋರ್ಟ್ ನೊಟೀಸ್ ಜಾರಿ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ