newsfirstkannada.com

ಭೀಕರ ದುರಂತ.. ಚಲಿಸುತ್ತಿದ್ದ ಬಸ್​ ಮೇಲೆ ಹೈಟೆನ್ಷನ್ ವೈರ್​ ಬಿದ್ದು 10 ಮಂದಿ ಸಾವು

Share :

Published March 11, 2024 at 3:35pm

    ದುರಂತದಲ್ಲಿ ಮತ್ತಷ್ಟು ಸಾವು, ನೋವುಗಳು ಸಂಭವಿಸುವ ಆತಂಕ

    ಬಸ್ಸಿನಲ್ಲಿ ಮದುವೆಗೆ ಹೋಗ್ತಿದ್ದ ಅತಿಥಿಗಳೇ ಹೆಚ್ಚಿದ್ದರು

    ಬಸ್ಸಿನಲ್ಲಿ ಒಟ್ಟು 38 ಪ್ರಯಾಣಿಕರಿದ್ದು, ಸ್ಥಳದಲ್ಲಿ ಉದ್ವಿಘ್ನದ ವಾತಾವರಣ

ಉತ್ತರ ಪ್ರದೇಶದ ಘಾಜಿಪುರದಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ವಿದ್ಯುತ್ ಅವಘಡ ಸಂಭವಿಸಿ 10 ಮಂದಿ ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಆಗಿದ್ದೇನು..?
ಮರ್ದಾಹ್ ಪೊಲೀಸ್ ಠಾಣೆ ವ್ಯಾಪ್ತಿಯ ಮಹಾಹರ್ ಧಾಮ್ ಬಳಿ ಖಾಸಗಿ ಬಸ್ ಪ್ರಯಾಣಿಸುತ್ತಿತ್ತು. ಬಸ್ಸಿನಲ್ಲಿ ಮದುವೆಗೆ ಹೊರಟಿದ್ದ ಅತಿಥಿಗಳು ಹೆಚ್ಚಾಗಿದ್ದರು ಎನ್ನಲಾಗಿದೆ. ಒಟ್ಟು 38 ಪ್ರಯಾಣಿಕರು ಸಂಚಾರ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಸ್ಪಷ್ಟತೆ ಇಲ್ಲ. ಅಪಘಾತದ ಬೆನ್ನಲ್ಲೇ ಸ್ಥಳದಲ್ಲಿ ಉದ್ವಿಘ್ನದ ವಾತಾವರಣ ನಿರ್ಮಾಣ ಆಗಿದೆ. ದುರ್ಘಟನೆಯನ್ನು ಖಂಡಿಸಿ ಸ್ಥಳೀಯರು ಕಲ್ಲು ತೂರಾಟ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭೀಕರ ದುರಂತ.. ಚಲಿಸುತ್ತಿದ್ದ ಬಸ್​ ಮೇಲೆ ಹೈಟೆನ್ಷನ್ ವೈರ್​ ಬಿದ್ದು 10 ಮಂದಿ ಸಾವು

https://newsfirstlive.com/wp-content/uploads/2024/03/UP-BUS.jpg

Load More