/newsfirstlive-kannada/media/post_attachments/wp-content/uploads/2025/02/NIRMALA-SITARAMAN.jpg)
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2025ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ. ಸತತ 8ನೇ ಬಾರಿಗೆ ಬಜೆಟ್ ಮಂಡಿಸುತ್ತಿರುವ ಸೀತಾರಾಮನ್ ಬಜೆಟ್ ಆರಂಭದಲ್ಲೇ ಕೃಷಿಗೆ ಕೇಂದ್ರ ಸರ್ಕಾರ ನೀಡಲಿರುವ ಬಜೆಟ್ ಬಗ್ಗೆ ಮಾಹಿತಿ ನೀಡಿದರು.
ಸೀತಾರಾಮನ್ ಅವರು ಬಜೆಟ್ ಮಂಡನೆ ವೇಳೆ ಪಿಎಂ ಧನ ಧಾನ್ಯ ಕೃಷಿ ಯೋಜನೆ (PM Dhan Dhanya Krishi Yojana) ಜಾರಿ ಬಗ್ಗೆ ಘೋಷಣೆ ಮಾಡಿದ್ದಾರೆ. ಈ ಯೋಜನೆಯಿಂದ 1.7 ಕೋಟಿ ರೈತರಿಗೆ ಲಾಭ ಸಿಗಲಿದೆ. 100 ಜಿಲ್ಲೆಗಳಲ್ಲಿ ಪಿಎಂ ಧನ್‌ಧಾನ್ಯ ಯೋಜನೆ ಜಾರಿ ಆಗಲಿದೆ.
ಇದನ್ನೂ ಓದಿ: ಮಧ್ಯಮ ವರ್ಗಕ್ಕೆ ತೆರಿಗೆಯಿಂದ ಬಿಗ್ ರಿಲೀಫ್..? ಚರ್ಚೆ ಹುಟ್ಟು ಹಾಕಿದ ಮೋದಿಯ ಈ ಹೇಳಿಕೆ
ತರಕಾರಿ, ಹಣ್ಣುಗಳಿಗೆ ಸಮಗ್ರ ಯೋಜನೆ ಜಾರಿ ತರುವುದು ಹಾಗೂ ಬಿಹಾರದಲ್ಲಿ ಮಕಾನ ಬೋರ್ಡ್ ಸ್ಥಾಪನೆ ಮಾಡೋದಾಗಿ ಘೋಷಣೆ ಮಾಡಿದ್ದಾರೆ. ಮಕಾನ ರೈತರಿಗೆ ಪ್ರೋತ್ಸಾಹ ನೀಡಲು ಬೋರ್ಡ್ ಸ್ಥಾಪನೆ ಮಾಡಲಾಗುತ್ತಿದೆ. ಇದರಿಂದ ಹೆಚ್ಚು ಇಳುವರಿಗೆ ನಿರೀಕ್ಷೆ ಮಾಡಲಾಗುತ್ತಿದೆ. ಗ್ರಾಮೀಣ ರೈತರು, ಮಹಿಳೆಯರನ್ನ ಒಳಗೊಂಡ ಅಭಿವೃದ್ಧಿಗೆ ಯೋಜನೆಗೆ ಒತ್ತು ನೀಡಲಾಗುತ್ತದೆ. ಅಲ್ಪಾವಧಿ ಸಾಲದಿಂದ ಅಭಿವೃದ್ಧಿ ಹೊಂದುವ ಗುರಿಯನ್ನು ಹೊಂದಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: Union Budget 2025; ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟಾಪ್- 10 ಫೋಟೋಸ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ