/newsfirstlive-kannada/media/post_attachments/wp-content/uploads/2025/03/MOST-DEBT-COUNTRIES.jpg)
ನಮಗೆಲ್ಲರಿಗೂ ಗೊತ್ತಿರುವ ವಿಚಾರ ಒಂದಿದೆ. ಒಂದು ದೇಶ ತನ್ನ ಅಭಿವೃದ್ಧಿಗಾಗಿ, ಮೂಲಸೌಕರ್ಯಗಳ ಸೃಷ್ಟಿಗಾಗಿ ಸಾಲಾ ಮಾಡುವುದು ಸಾಮಾನ್ಯ ಅಂತ. ಜಗತ್ತಿನ ಯಾವುದೇ ದೇಶವಿರಲಿ, ಅದು ಸಾಲ ಮಾಡಿಯೇ ತನ್ನ ದೇಶದ ಅಭಿವೃದ್ಧಿಗೆ ಅದನ್ನು ವ್ಯಯಿಸಿ. ಅದರಿಂದ ಬಂದ ಲಾಭದಿಂದ ಸಾಲವನ್ನು ತೀರಿಸುವ ಕಾರ್ಯವನ್ನು ಮಾಡುತ್ತವೆ. ಆದರೆ ಸಾಲವೇ ಮುಳುವಾಗುವಷ್ಟು ಇನ್ನೊಬ್ಬರಿಂದ ಹಣ ಪಡೆಯುವುದು, ಜನರಿಗೆ ಮಾತ್ರವಲ್ಲ ದೇಕ್ಕೂ ಕೂಡ ಒಳ್ಳೆಯದಲ್ಲ. ನಿಮಗೆ ಗೊತ್ತಾ ಜಗತ್ತಿನಲ್ಲಿ ಅತಿಹೆಚ್ಚು ಸಾಲದಲ್ಲಿ ಮುಳುಗಿರುವ ದೇಶಗಳು ಯಾವವು ಅಂತ.
ನಿಮಗೆ ಈ ವಿಷಯ ತಿಳಿದು ಗಾಬರಿ ಆಗಬಹುದು. ಈಗಾಗಲೇ ಹೇಳಿದಂತೆ ವಿಕಾಸಕ್ಕಾಗಿ ಎಲ್ಲಾ ದೇಶಗಳು ಸಾಲ ಮಾಡುತ್ತವೆ. ಆದರೆ ಸಾಲ ಮಾಡಿಯೂ ಕೂಡ ಅಭಿವೃದ್ಧಿ ಬಿಡಿ ಅದನ್ನು ವಾಪಸ್ ತೀರಿಸಲಾರದಷ್ಟು ಆರ್ಥಿಕ ಸಂಕಷ್ಟಕ್ಕೆ ಬಿದ್ದ ದೇಶಗಳಿವೆ. ಅವುಗಳು ಯಾವುವು ಎಂಬುದನ್ನು ನೋಡೋಣ.
ಸುಡಾನ್: ಸುಡಾನ್ ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಸಾಲದಲ್ಲಿ ಮುಳುಗಿರುವಂತ ದೇಶ. ಇದು ವಿಶ್ವದ ನಾನಾ ದೇಶ ಹಾಗೂ ವಿಶ್ವಬ್ಯಾಂಕ್ನಲ್ಲಿ ಪಡೆದುಕೊಂಡಿರುವ ಸಾಲ ಸುಮಾರು 102 ಬಿಲಿಯನ್ ಡಾಲರ್. ಅಂದ್ರೆ ಇದು ಯಾವ ಮಟ್ಟದಲ್ಲಿ ಸಾಲದಲ್ಲಿ ಮುಳುಗಿ ಹೋಗಿದೆ ಅಂದ್ರೆ. ಈ ದೇಶದ ಜಿಡಿಪಿಗಿಂತ ಸುಮಾರು ಶೇಕಡಾ 344.4 ರಷ್ಟು ಸಾಲವನ್ನು ಹೊಂದಿದ ದೇಶ ಇದು ಎಂದು ಹೇಳಲಾಗುತ್ತದೆ. ಹೀಗಾಗಿ ಈ ದೇಶವನ್ನು ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ಸಾಲದಲ್ಲಿ ಮುಳುಗಿರುವ ದೇಶ ಎಂದು ಗುರುತಿಸುತ್ತಾರೆ.
ಜಪಾನ್: ದೇಶದ ಹೆಸರು ಕೇಳಿಯೇ ನಿಮಗೆ ಆಶ್ಚರ್ಯವಾಗಬಹುದು. ವಿಶ್ವದಲ್ಲಿಯೇ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಜಪಾನ್ನನ್ನು ಕೂಡ ಗುರುತಿಸಲಾಗುತ್ತದೆ. ಈ ದೇಶ ಸಾಲದಲ್ಲಿ ಮುಳುಗಿದೆಯಾ ಅಂದ್ರೆ ಅದು ಹೌದು. ಇದು ಸುಮಾರು 10,224 ಬಿಲಿಯನ್ ಡಾಲರ್ನಷ್ಟು ಸಾಲವನ್ನು ಹೊಂದಿದೆ. ಆದ್ರೆ ಜಪಾನ್ ಅದನ್ನು ಸಮರ್ಪಕವಾಗಿ ದೇಶದ ಅಭಿವೃದ್ಧಿಗೆ ಬಳಸುತ್ತಾ ಬಂದಿದೆ. ಆದರೂ ಕೂಡ ದೇಶದ ಜಿಡಿಪಿಗಿಂತ ಶೇಕಡಾ 251 ರಷ್ಟು ಸಾಲವನ್ನು ಈ ದೇಶ ಹೊಂದಿದೆ.
ಸಿಂಗಾಪುರ್: ಸಿಂಗಾಪುರ್ ಕೂಡ ಅಭಿವೃದ್ಧಿಗೆ ಮಾದರಿಯಾಗಿ ನಿಂತಿರುವ ದೇಶ. ತಂತ್ರಜ್ಞಾನ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ತನ್ನನ್ನು ತಾನು ಗುರುತಿಸಿಕೊಂಡ ದೇಶ. ಆದರೂ ಕೂಡ ಈ ದೇಶವು ತನ್ನ ಜಿಡಿಪಿಗಿಂತ ಸುಮಾರು 175 % ನಷ್ಟು ಸಾಲವನ್ನು ಹೊಂದಿದೆ.
ಅಮೆರಿಕಾ: ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರ, ಮುಂದುವರಿದ ರಾಷ್ಟ್ರ, ಯಾವ ದೇಶಗಳ ಮೇಲೆಯೂ ಕೂಡ ತೆರಿಗೆ ಯುದ್ಧವನ್ನು ಸಾರಬಲ್ಲಂತ ರಾಷ್ಟ್ರ. ವಿಶ್ವದ ದೊಡ್ಡಣ್ಣ ಎಂದು ನೂರಾರು ಬಿರುದು ಬಾವಲಿಗಳನ್ನು ಪಡೆದಿದ್ದರು ಕೂಡ, ಅಮೆರಿಕಾ ಸಾಲ ಎಂಬ ಕೂಪದಲ್ಲಿಯೇ ಇದೆ. ಇದು ಮಾಡಿರುವ ಒಟ್ಟು ಸಾಲ 35, 293 ಬಿಲಿಯನ್ ಡಾಲರ್ ಅಂದ್ರೆ ನೀವು ನಂಬಲೇಬೇಕು. ಅಮೆರಿಕಾದ ಜಿಡಿಪಿಗಿಂತ ಇದರ ಸಾಲ ಶೇಕಡಾ 121ರಷ್ಟಿದೆ.
ಬೂತಾನ್: ಇನ್ನು ನಮ್ಮ ನೆರೆಯ ರಾಷ್ಟ್ರವಾದ ಬೂತಾನ್ ಕೂಡ ಸಾಲದ ಕೂಪದಲ್ಲಿಯೇ ಇದೆ. ಇದರ ಒಟ್ಟು ಸಾಲ ಸುಮಾರು 3.6 ಬಿಲಿಯನ್ ಡಾಲರ್ನಷ್ಟು. ಇದು ಸಣ್ಣ ಮೊತ್ತ ಎನಿಸಿದರು ಕೂಡ ಬೂತಾನ್ನಂತಹ ಪುಟ್ಟ ರಾಷ್ಟ್ರಗಳಿಗೆ. ಹೆಚ್ಚು ಆದಾಯದ ಮೂಲಗಳಿಲ್ಲದಂತ ರಾಷ್ಟ್ರಕ್ಕೆ ಇದು ಭಾರೀ ಪ್ರಮಾಣದ ಸಾಲವೇ. ತನ್ನ ಜಿಡಿಪಿಗಿಂತ ಇದರ ಸಾಲ ಶೇಕಡಾ 113.8ರಷ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ