ಶತಾಬ್ದಿಯೂ ಅಲ್ಲ, ವಂದೇ ಭಾರತ್ ಅಲ್ಲ.. ಭಾರತದಲ್ಲಿಯೇ ಅತಿಹೆಚ್ಚು ಆದಾಯ ಗಳಿಸುವ ಟ್ರೈನ್​​ಗಳು ಇವು

author-image
Gopal Kulkarni
Updated On
1 ಲೀಟರ್​ ಡಿಸೇಲ್​ಗೆ ಎಷ್ಟು ಕಿಮೀ ಓಡುತ್ತವೆ ಭಾರತೀಯ ರೈಲುಗಳು.. ಮಾಹಿತಿ ಬಿಚ್ಚಿಟ್ಟ ಇಲಾಖೆ
Advertisment
  • ದೇಶದಲ್ಲಿ ಅತಿಹೆಚ್ಚು ಆದಾಯ ಗಳಿಸುವ ರೈಲುಗಳು ಯಾವುವು?
  • 2022-23ರಲ್ಲಿ ಈ ಟ್ರೈನ್​ಗಳಲ್ಲಿ ಪ್ರಯಾಣಿಸಿದ ಪ್ರಯಾಣಿಕರು ಎಷ್ಟು ?
  • ಆದಾಯ ಗಳಿಕೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಟ್ರೈನ್ ಯಾವುದು?

ದೇಶದಲ್ಲಿ ನಿತ್ಯ ಅದೆಷ್ಟೋ ರೈಲುಗಳು ಓಡಾಡುತ್ತವೆ. ಪ್ರತಿ ರೈಲುಗಳು ಲಕ್ಷಾಂತರ ಜನರನ್ನು ಅವರ ಗಮ್ಯಕ್ಕೆ ತಲುಪಿಸುವ ಕಾರ್ಯಗಳನ್ನು ಮಾಡುತ್ತವೆ. ಭಾರತದಲ್ಲಿ ರೈಲುಗಳೇ ಜನರ ಪ್ರಯಾಣದ ಜೀವನಾಡಿಯಾಗಿ ಗುರುತಿಸಿಕೊಂಡಿವೆ. ರೈಲುಗಳು ತಮ್ಮ ಈ ಸೇವೆಯಿಂದಲೇ ಕೋಟ್ಯಾಂತರ ರೂಪಾಯಿ ಆದಾಯ ಗಳಿಸುತ್ತವೆ. ಆದರೆ ನಿಮಗೆ ಗೊತ್ತಾ ಭಾರತದಲ್ಲಿ ಅತಿಹೆಚ್ಚು ಆದಾಯ ಗಳಿಸುವ ಟ್ರೈನ್​ಗಳು ಯಾವುವು ಅಂತ. ಜನಶತಾಬ್ದಿಯೂ ಅಲ್ಲ, ವಂದೇ ಭಾರತ್ ಟ್ರೈನ್​ ಕೂಡ ಅಲ್ಲ ಈ ಕೆಲವು ಟ್ರೈನ್​​ಗಳು ಭಾರತದ ಶ್ರೀಮಂತ ರೈಲುಗಳು ಎಂಬ ಹೆಸರನ್ನು ಪಡೆದಿವೆ.

ಇದನ್ನೂ ಓದಿ:ಇದು ಭಾರತದ ಏಕೈಕ ರೈಲ್ವೆ ನಿಲ್ದಾಣ.. ಇಲ್ಲಿಂದ ನೀವು ದೇಶದ ಪ್ರತಿ ನಗರಗಳಿಗೂ ಪ್ರಯಾಣ ಬೆಳೆಸಬಹುದು

ಇಂದು ಆ ರೈಲುಗಳ ಪರಿಚಯವನ್ನು ನಾವು ಇಂದಿನ ಈ ಲೇಖನದಲ್ಲಿ ಮಾಡಿಕೊಡಲಿದ್ದೇವೆ.ಸುದೀರ್ಘ ಪ್ರಯಾಣ ಬೆಳೆಸುವ ಹಲವು ರೈಲುಗಳು, ರೈಲ್ವೆ ಇಲಾಖೆಗೆ ಅತಿಹೆಚ್ಚು ಆದಾಯವನ್ನು ತಂದು ಕೊಡುತ್ತವೆ. ಅಂತಹ ಟಾಪ್ 4 ರೈಲುಗಳು ಬಗ್ಗೆ ಇಲ್ಲಿದೆ ಮಾಹಿತಿ

publive-image

ಇದನ್ನೂ ಓದಿ:ಭಾರತದ ಅತ್ಯಂತ ಸ್ವಚ್ಛ ಗ್ರಾಮ ಎಂಬ ಹೆಗ್ಗಳಿಕೆ ಪಡೆದ 5 ಹಳ್ಳಿಗಳು ಇವು! ಇದನ್ನು ಸಾಧಿಸಿದ್ದು ಹೇಗೆ?

ಬೆಂಗಳೂರು ರಾಜಧಾನಿ ಎಕ್ಸ್​ಪ್ರೆಸ್​: ಟ್ರೈನ್ ಸಂಖ್ಯೆ 22692, ಹಜರತ್​ ನಿಜಾಮುದ್ದೀನ್​ನಿಂದ ಬೆಂಗಳೂರಿನ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್​ವರೆಗೂ ಇದು ಪ್ರಯಾಣ ಬೆಳೆಸುತ್ತದೆ.2022-23ರ ಸಾಲಿನಲ್ಲಿ ಈ ರೈಲು ಒಟ್ಟು 5 ಲಕ್ಷ 9 ಸಾವಿರದ 510 ಜನರು ಈ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದಾರೆ. ಈ ಒಂದು ವರ್ಷದಲ್ಲಿ ಈ ರೈಲು ಗಳಿಸಿರುವ ಆದಾಯ ಬರೋಬ್ಬರಿ 176 ಕೋಟಿ, 6 ಲಕ್ಷ 66 ಸಾವಿರದ 339 ರೂಪಾಯಿ. ಅತಿಹೆಚ್ಚು ಆದಾಯ ಗಳಿಸಿದ ನಂಬರ್ ಒನ್ ರೈಲು ಹಾಗೂ ಶ್ರೀಮಂತ ರೈಲು ಎಂಬ ಹೆಸರನ್ನು ರಾಜಧಾನಿ ಎಕ್ಸ್​ಪ್ರೆಸ್ ಪಡೆದುಕೊಂಡಿದೆ.

publive-image

ಸೀಯಾಲದಹ್ ರಾಜಧಾನಿ ಎಕ್ಸ್​ಪ್ರೆಸ್​: ಇನ್ನು ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾದಿಂದ ದೆಹಲಿಯನ್ನು ಸಂಪರ್ಕಿಸುವ ಸಿಯಾಲದಹ್ ರಾಜಧಾನಿ ಎಕ್ಸ್​ಪ್ರೆಸ್​ ಅತ್ಯಂತ ಹೆಚ್ಚು ಆದಾಯ ಗಳಿಸುವ ರೈಲುಗಳಲ್ಲಿ ಎರಡನೇ ಸ್ಥಾನ ಪಡೆದಿದೆ. 2022-23ರ ಸಾಲಿನಲ್ಲಿ 5 ಲಕ್ಷ 9 ಸಾವಿರದ 164 ಜನರು ಈ ರೈಲಿನಲ್ಲಿ ಪ್ರಯಾಣ ಮಾಡಿದ್ದಾರೆ. ಈ ವರ್ಷದ ಸಾಲಿನಲ್ಲಿ ಈ ರೈಲು ಗಳಿಸಿದ ಒಟ್ಟು ಆದಾಯ 128 ಕೋಟಿ 81 ಲಕ್ಷ, 69 ಸಾವಿರದ 274 ರೂಪಾಯಿ ಎಂದು ಹೇಳಲಾಗುತ್ತದೆ.

publive-image

ಡಿಬ್ರುಗಢ ರಾಜಧಾನಿ ಎಕ್ಸ್​ಪ್ರೆಸ್​: ಇನ್ನು ಮೂರನೇ ಸ್ಥಾನದಲ್ಲಿ ದೆಹಲಿಯಿಂದ ಡಿಬ್ರುಗಢಗೆ ಸಂಪರ್ಕ ಕಲ್ಪಿಸುವ ಡಿಬ್ರುಗಢ ರಾಜಧಾನಿ ಎಕ್ಸ್​ಪ್ರೆಸ್ ಬರುತ್ತದೆ. ಇದು ಕಳೆದ ವರ್ಷ 4 ಲಕ್ಷ 74 ಸಾವಿರದ 605 ಪ್ರಯಾಣಿಕರಿಗೆ ಅವರ ಗಮ್ಯವನ್ನು ತಲುಪಿಸಿದೆ. ಮತ್ತು ಬರೋಬ್ಬರಿ 126 ಕೋಟಿ 29 ಲಕ್ಷ 9 ಸಾವಿರದ 697 ರೂಪಾಯಿ ಗಳಿಕೆ ಮಾಡಿ. ಅತಿಹೆಚ್ಚು ಆದಾಯ ಗಳಿಸುವ ರೈಲುಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದೆ.

publive-image

ಮುಂಬೈ ರಾಜಧಾನಿ ಎಕ್ಸ್​ಪ್ರೆಸ್​: ನಾಲ್ಕನೇ ಸ್ಥಾನದಲ್ಲಿ ಮುಂಬೈ ರಾಜಧಾನಿ ಎಕ್ಸ್​ಪ್ರೆಸ್ ಬರುತ್ತದೆ. 2022-23ರ ಸಾಲಿನಲ್ಲಿ ಸುಮಾರು 4,85,794 ಪ್ರಯಾಣಿಕರು ಈ ರೈಲಿನಲ್ಲಿ ಪ್ರಯಾಣ ಮಾಡಿದ್ದಾರೆ. ಈ ವರ್ಷದಲ್ಲಿ ಈ ಟ್ರೈನ್ ಗಳಿಸಿದ ಆದಾಯ ಬರೋಬ್ಬರಿ 122 ಕೋಟಿ 84 ಲಕ್ಷ 51 ಸಾವಿರದ 554 ರೂಪಾಯಿ ಎಂದು ರೈಲ್ವೆ ಇಲಾಖೆ ಹೇಳಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment