/newsfirstlive-kannada/media/post_attachments/wp-content/uploads/2025/06/DHONI-KOHLI-ROHIT.jpg)
ಐಪಿಎಲ್ 2025ಕ್ಕೆ ತೆರೆ ಬಿದ್ದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ಸೋಲಿಸುವ ಮೂಲಕ ಮೊದಲ ಪ್ರಶಸ್ತಿಯನ್ನು ಗೆದ್ದಿದೆ. ಈ ಬಾರಿಯ ಐಪಿಎಲ್ ಅನೇಕ ಯುವ ಆಟಗಾರರಿಗೆ ಹೊಸ ಬದುಕು ಕಟ್ಟಿಕೊಟ್ಟಿದೆ. ಇನ್ನು, ಐಪಿಎಲ್ನಿಂದ ಹೆಚ್ಚು ಹಣ ಗಳಿಸಿದ ಐದು ಸ್ಟಾರ್ ಆಟಗಾರರ ಪಟ್ಟಿ ಇಲ್ಲಿದೆ. ಐದು ಆಟಗಾರರಲ್ಲಿ ಒಬ್ಬರು ಮಾತ್ರ ವಿದೇಶಿ ಆಟಗಾರ. ಉಳಿದವರೆಲ್ಲ ಭಾರತೀಯರೇ ಆಗಿದ್ದಾರೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ 2008 ರಿಂದ ಆರ್ಸಿಬಿ ಪರ ಆಡುತ್ತಿದ್ದಾರೆ. ಐಪಿಎಲ್ನಿಂದ ಹೆಚ್ಚು ಗಳಿಸಿದ ಆಟಗಾರರಲ್ಲಿ ಇವರು ಮೊದಲ ಸ್ಥಾನದಲ್ಲಿದ್ದಾರೆ. ಈ ಬಾರಿ ಆರ್ಸಿಬಿ ಕೊಹ್ಲಿಯನ್ನು 21 ಕೋಟಿಗೆ ಉಳಿಸಿಕೊಂಡಿತ್ತು. ಇಲ್ಲಿಯವರೆಗೆ ಅವರು 207.96 ಕೋಟಿ ರೂಪಾಯಿ ಹಣವನ್ನು ಗಳಿಸಿದ್ದಾರೆ.
ಇದನ್ನೂ ಓದಿ: ಕಾಲ್ತುಳಿತ ಬಗ್ಗೆ ಗಂಭೀರ್ ಮೊದಲ ಪ್ರತಿಕ್ರಿಯೆ.. ಮುಖ್ಯ ಕೋಚ್ರಿಂದ ದೊಡ್ಡ ಹೇಳಿಕೆ..!
ಎಂಎಸ್ ಧೋನಿ
ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 5 ಐಪಿಎಲ್ ಪ್ರಶಸ್ತಿಗಳನ್ನ ಗೆದ್ದುಕೊಂಡಿದೆ. ಅತೀ ಹೆಚ್ಚು ಹಣ ಗಳಿಸಿದವರಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 2025ರಲ್ಲಿ ಸಿಎಸ್‌ಕೆ ಅವರನ್ನು 4 ಕೋಟಿ ರೂಪಾಯಿಗೆ ಉಳಿಸಿಕೊಂಡಿತ್ತು. ಇಲ್ಲಿಯವರೆಗೆ ಧೋನಿ 205.34 ಕೋಟಿ ರೂಪಾಯಿ ಗಳಿಸಿದ್ದಾರೆ.
ರೋಹಿತ್ ಶರ್ಮಾ
ರೋಹಿತ್ ಶರ್ಮಾ ಇಲ್ಲಿಯವರೆಗೆ ಒಟ್ಟು ಗಳಿಸಿರೋ ಹಣ 204.90 ರೂಪಾಯಿ. ರೋಹಿತ್ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ 5 ಐಪಿಎಲ್ ಪ್ರಶಸ್ತಿ ಗೆದ್ದಿದೆ. ಐಪಿಎಲ್-2025ಕ್ಕಾಗಿ ಮುಂಬೈ ಅವರನ್ನು 16.30 ಕೋಟಿ ರೂಗೆ ಉಳಿಸಿಕೊಂಡಿತ್ತು.
ರವೀಂದ್ರ ಜಡೇಜಾ
ಇಲ್ಲಿಯವರೆಗೆ ಜಡೇಜಾ 127 ಕೋಟಿ ರೂಪಾಯಿ ಗಳಿಸಿದ್ದಾರೆ. 2012 ರಿಂದ ಚೆನ್ನೈ ಸೂಪರ್ ಕಿಂಗ್ಸ್ ಪರ ಅವರು ಆಡುತ್ತಿದ್ದಾರೆ. ಐಪಿಎಲ್ 2025ಕ್ಕೆ ಸಿಎಸ್‌ಕೆ ಅವರನ್ನು 18 ಕೋಟಿ ರೂಪಾಯಿಗೆ ಉಳಿಸಿಕೊಂಡಿತ್ತು.
ಸುನಿಲ್ ನರೈನ್
ನರೈನ್ ಇಲ್ಲಿಯವರೆಗೆ 119.02 ಕೋಟಿ ರೂಪಾಯಿ ಹಣ ಸಂಪಾದಿಸಿದ್ದಾರೆ. ಟಾಪ್ 5 ರಲ್ಲಿರುವ ಏಕೈಕ ವಿದೇಶಿ ಆಟಗಾರ. ವೆಸ್ಟ್ ಇಂಡೀಸ್‌ನ ಸುನಿಲ್ ನರೈನ್, ಕೋಲ್ಕತ್ತಾ ನೈಟ್ ರೈಡರ್ಸ್‌ನ ಪ್ರಮುಖ ಆಟಗಾರ. ಐಪಿಎಲ್‌ನಲ್ಲಿ ಇದುವರೆಗೆ ಅತಿ ಹೆಚ್ಚು ಗಳಿಸಿದ ವಿದೇಶಿ ಆಟಗಾರ ಇವರು.
ಇದನ್ನೂ ಓದಿ: ಕೆಎಸ್ಸಿಎ 9 ನಿರ್ಲಕ್ಷ್ಯಗಳು.. ಇದೇ ಕಾಲ್ತುಳಿತಕ್ಕೆ ಕಾರಣವಾಯ್ತಾ..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ