/newsfirstlive-kannada/media/post_attachments/wp-content/uploads/2025/04/rishabh_pant-3.jpg)
ಮಿಲಿಯನ್​ ಡಾಲರ್​ ಟೂರ್ನಿ ಐಪಿಎಲ್​ನಲ್ಲಿ ಸ್ಟಾರ್​​ಗಳಿಗೆ ಕೋಟಿ-ಕೋಟಿ ಹರಿದು ಬರುತ್ತೆ. ಮೆಗಾ ಆಕ್ಷನ್​​ನಲ್ಲಿ​ ಜಿದ್ದಿಗೆ ಬಿದ್ದು ತಂಡಕ್ಕೆ ಬೇಕಾದ ಆಟಗಾರನನ್ನ ಫ್ರಾಂಚೈಸಿಗಳು ಖರೀದಿಸುತ್ತಿವೆ. ಈ ಸೀಸನ್​ನಲ್ಲಿ ರಿಷಭ್ ಪಂತ್- ವೆಂಕಟೇಶ್ ಅಯ್ಯರ್ ಕೂಡ ಬಿಗ್​ ಅಮೌಂಟ್​ ಬಾಚಿಕೊಂಡರು. ಆದ್ರೆ, ಈ ಕೋಟಿ ವೀರರು, ಈಗ ಫ್ಲಾಫ್ ಸ್ಟಾರ್ಸ್ ಆಗಿದ್ದಾರೆ.
ಸೀಸನ್​​-18ರ ಐಪಿಎಲ್​​ ದಿನೇ ದಿನೇ ಸಖತ್ ಕಿಕ್ ನೀಡ್ತಿದೆ. ಕೆಲ ಯುವ ಆಟಗಾರರು ನಿರೀಕ್ಷೆಗೂ ಮೀರಿದ ಪ್ರದರ್ಶನದಿಂದ ಸಪ್ರೈಸ್ ನೀಡ್ತಿದ್ದಾರೆ. ಮೂಲ ಬೆಲೆಗೆ ಸೇಲಾದ ಆಟಗಾರರು ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್​ ನೀಡಿ ತಮ್ಮ ಸಾಮರ್ಥ್ಯ ಫ್ರೂವ್ ಮಾಡ್ತಿದ್ದಾರೆ. ಆದ್ರೆ, ಕೋಟಿ ಕೋಟಿ ಲೆಕ್ಕದಲ್ಲಿ ಜೇಬಿಗಿಳಿಸಿದ ಆಟಗಾರರು ಮಾತ್ರ, ಐಪಿಎಲ್ ಅಖಾಡದಲ್ಲಿ ಠುಸ್ ಆಗಿದ್ದಾರೆ.
ಇದು ಪರಾಕ್ರಮಿ, ಗೇಮ್ ಚೇಂಜರ್​, IPLನ ಮೋಸ್ಟ್ ಎಕ್ಸಪೆನ್ಸೀವ್ ಪ್ಲೇಯರ್​​ ರಿಷಭ್​​ ಪಂತ್​​ ಆಡಿರೋ ಆಟ. ಎದುರಾಳಿಗಳಿಂದ ಡೇಂಜರಸ್, ಡೇರ್​ ಡೆವಿಲ್​​ ಅಂತಾನೇ ಕರೆಸಿಕೊಳ್ಳುತ್ತಿದ್ದ ಪಂತ್​, ಇದೀಗ ತನ್ನ ತಂಡಕ್ಕೆ ಡೆವಿಲ್​ ಆಗ್ಬಿಟ್ಟಿದ್ದಾರೆ.
27 ಕೋಟಿ ಒಡೆಯ.. 3 ಮ್ಯಾಚ್​.. 17 ರನ್..!
ಒಂದಲ್ಲ, ಎರಡಲ್ಲ ಬರೋಬ್ಬರಿ 27 ಕೋಟಿ ಹಣ. ಲಕ್ನೋ ಸೂಪರ್ ಜೈಂಟ್ಸ್​ ಮೆಗಾ ಹರಾಜಿನಲ್ಲಿ ಪಂತ್ ಮೇಲೆ ಸುರಿದ ಹಣ.. ದಾಖಲೆಯ 27 ಕೋಟಿ ಹಣ ಪಡೆದ ರಿಷಭ್ ಪಂತ್ ನೀಡ್ತಿರುವುದು ಅಟ್ಟರ್ ಫ್ಲಾಫ್ ಪರ್ಫಾಮೆನ್ಸ್​. ಕಳೆದ 3 ಪಂದ್ಯಗಳಿಂದ ಪಂತ್ ಗಳಿಸಿದ ರನ್. ಜಸ್ಟ್​ 17. ಈ ಪೈಕಿ ಸನ್ ರೈಸರ್ಸ್​ ಎದುರು 15 ರನ್​ಗಳಿಸಿದ್ದು ಬಿಟ್ರೆ, ಉಳಿದೆರೆಡು ಪಂದ್ಯಗಳಿಂದ ಬಂದ ರನ್ 0 ಮತ್ತು 2 ಮಾತ್ರ.
ಪಂತ್​ ಬಗ್ಗೆ ಭಾರೀ ನಿರೀಕ್ಷೆಯನ್ನೇ ಇಟ್ಟುಕೊಂಡಿದ್ದ ಲಕ್ನೋ ಮಾಲೀಕರು. ಪಂತ್​ನ ಕೊಂಡಾಡಿದ್ದರು. ಮಾಹಿ, ರೋಹಿತ್, ವಿರಾಟ್​​ರಂಥೆಯೇ ಲೆಜೆಂಡ್ ಆಗ್ತಾರೆ ಅಂತಾನೇ ಗುಣಗಾನ ಮಾಡಿದ್ದರು. ಆದ್ರೀಗ ಪಂತ್​​​​​​ ಆ ನಿರೀಕ್ಷೆಯನ್ನ ಹುಸಿಗೊಳಿಸಿದ್ದಾರೆ.
ಕೆಕೆಆರ್ ನಂಬಿಕೆ ಉಳಿಸಿಕೊಳ್ಳಲಿಲ್ಲ ಅಯ್ಯರ್..!
ಐಪಿಎಲ್​ನ ಮೆಗಾ ಹರಾಜಿನ ಮೋಸ್ಟ್​ ಸರ್​ಪ್ರೈಸ್ ಪಿಕ್ ಅಂದ್ರೆ, ವೆಂಕಟೇಶ್ ಅಯ್ಯರ್. ಈತನಿಗಾಗಿ ಬರೋಬ್ಬರಿ 23.75 ಕೋಟಿ ಖರ್ಚು ಮಾಡಿದ್ದ ಕೆಕೆಆರ್​, ಉಪ ನಾಯಕನ ಪಟ್ಟವನ್ನು ಕಟ್ಟಿತ್ತು. ಆದ್ರೆ, ಉಪನಾಯಕನಾಗಿ ವೆಂಕಟೇಶ್ ಅಯ್ಯರ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರಿನ ಪಂದ್ಯದಲ್ಲಿ 7 ಎಸೆತಗಳಿಂದ 6 ರನ್​ ಗಳಿಸಲಷ್ಟೇ ಶಕ್ತರಾದ್ರೆ, ಮುಂಬೈ ಎದುರು ಜಸ್ಟ್​ ಮೂರೇ 3 ರನ್​ಗೆ ವಿಕೆಟ್ ಒಪ್ಪಿಸಿ ಹೊರ ನಡೆದಿದ್ರು.
ಇನ್ನಾದ್ರು ನ್ಯಾಯ ಒದಗಿಸ್ತಾರಾ ಪಂತ್​.. ವೆಂಕಟೇಶ್..?
ಕೋಟಿ ಕೋಟಿ ಜೇಬಿಗಿಳಿಸಿರುವ ಪಂತ್, ವೆಂಕಟೇಶ್ ಅಯ್ಯರ್ ಆರಂಭದಲ್ಲೇ ವೈಫಲ್ಯ ಅನುಭವಿಸಿದ್ದಾರೆ. ಆದ್ರೆ, ಟೂರ್ನಿ ಸಾಗ್ತಾ ಸಾಗ್ತಾ ಮತ್ತಷ್ಟು ಫ್ರೆಷರ್ ಕ್ರಿಯೇಟ್ ಆಗುತ್ತೆ. ಡು ಆರ್ ಡೈ ಸ್ಥಿತಿಗಳು ತಂಡಕ್ಕೆ ಎದುರಾಗ್ತಾವೆ. ಹೀಗಾಗಿ ಮುಂದಿನ ಪಂದ್ಯಗಳಿಂದಲೇ ಪಂತ್ ಹಾಗೂ ವೆಂಕಟೇಶ್ ಮ್ಯಾಚ್ ವಿನ್ನಿಂಗ್ ಆಟವಾಡಬೇಕಿದೆ. ತಾವು ತೆಗೆದುಕೊಂಡ ಹಣಕ್ಕೆ ನ್ಯಾಯ ಒದಗಿಸಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ