‘ಹೆದ್ದಾರಿ ಕಳ್ಳರ’ ಕೈಚಳಕ.. ಕಾರು ಅಡ್ಡಗಟ್ಟಿ 1 ಕೋಟಿ ನಗದು, 350KG ಬೆಳ್ಳಿ ಗಟ್ಟಿ ದೋಚಿ ಪರಾರಿ

author-image
AS Harshith
Updated On
‘ಹೆದ್ದಾರಿ ಕಳ್ಳರ’ ಕೈಚಳಕ.. ಕಾರು ಅಡ್ಡಗಟ್ಟಿ 1 ಕೋಟಿ ನಗದು, 350KG ಬೆಳ್ಳಿ ಗಟ್ಟಿ ದೋಚಿ ಪರಾರಿ
Advertisment
  • ರಾಷ್ಟ್ರೀಯ ಹೆದ್ದಾರಿಯಲ್ಲಿ ಖತರ್ನಾಕ್​ ಕಳ್ಳರ ಕೈಚಳಕ
  • ದಿನದಿಂದ ದಿನಕ್ಕೆ ಹೆಚ್ಚಾಗಿದೆ ದರೋಡೆಕೋರರ ಹಾವಳಿ
  • ಇನ್ನೋವಾ ಕಾರಿನಲ್ಲಿ ಬಂದ ಏಳೆಂಟು ಮಂದಿ ಕಳ್ಳರು

ಯಾರೋ ಒಂದಿಬ್ಬರು ಕಾರಿನಲ್ಲಿ ಕೋಟಿ ಕೋಟಿ ಹಣವನ್ನ ಸಾಗಿಸ್ತಾ ಇರ್ತಾರೆ. ಈ ವೇಳೆ ಮೂರ್ನಾಲ್ಕು ಕಾರಿನಲ್ಲಿ ಬರೋ ಖದೀಮರು ಆ ಕಾರನ್ನ ಅಡ್ಡಗಟ್ಟಿ, ಅವರನ್ನ ಹೆದರಿಸಿ ಬೆದರಿಸಿ ಕಾರಿನಲ್ಲಿದ್ದ ಹಣವನ್ನೆಲ್ಲ ಲೂಟಿ ಮಾಡಿ ಪರಾರಿಯಾಗಿಬಿಡ್ತಾರೆ. ಈ ತರಹದ ದೃಶ್ಯಗಳನ್ನ ನಾವೆಲ್ಲಾ ಸಿನಿಮಾದಲ್ಲಿ ನೋಡಿರ್ತೀವಿ. ಆದ್ರೆ ಇದೇ ರೀತಿ ತುಮಕೂರಿನಲ್ಲಿ ಚಿನ್ನದ ವ್ಯಾಪಾರಿಯ ಕಾರನ್ನ ಅಡ್ಡಗಟ್ಟಿದ ಕಳ್ಳರು ಕೋಟಿ ರೂ ನಗದು ಹಾಗೂ 350KG ಬೆಳ್ಳಿ ಗಟ್ಟಿಯನ್ನ ದೋಚಿ ಪರಾರಿಯಾಗಿದ್ದಾರೆ.

ಇತ್ತೀಚಿಗೆ ಕಳ್ಳರು, ದರೋಡೆಕೋರರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಪೊಲೀಸರಿಗೂ ಚಳ್ಳೆಹಣ್ಣು ತಿನ್ನಿಸುವ ಖತರ್ನಾಕ್ ಕಳ್ಳರು ಹಾಡಹಗಲೇ ಕೋಟಿ ಕೋಟಿ ಲೂಟಿ ಮಾಡಿ ಪರಾರಿಯಾಗ್ತಿದ್ದಾರೆ. ಕಳೆದ ಮೂರು ದಿನಗಳ ಹಿಂದಷ್ಟೇ ಕೇರಳದಲ್ಲಿ ಹನ್ನೆರಡು ಮಂದಿಯ ತಂಡವೊಂದು ಚಿನ್ನದ ವ್ಯಾಪಾರಿಗಳಿದ್ದ ಕಾರನ್ನು ಅಡ್ಡಗಟ್ಟಿ, 2.5 ಕೆಜಿ ಚಿನ್ನಾಭರಣ ದೋಚಿದ್ದ ಘಟನೆ ನಡೆದಿತ್ತು ಈ ಇಂಥದ್ದೇ ಘಟನೆಯೊಂದು ಕರ್ನಾಟಕದಲ್ಲೂ ನಡೆದಿದೆ.

publive-image

ಕಾರು ಅಡ್ಡಗಟ್ಟಿ ದರೋಡೆ

ತುಮಕೂರಿನ ನೆಲಹಾಳ್‌ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಿನಿಮಾ ಸ್ಟೈಲ್​ನಲ್ಲಿ ದರೋಡೆ ನಡೆದಿದೆ. ಚಿನ್ನದ ವ್ಯಾಪಾರಿಯೊಬ್ಬರ ಕಾರು ಅಡ್ಡಗಟ್ಟಿ ಖತರ್ನಾಕ್​ ಕಳ್ಳರು ಅಪಾರ ಪ್ರಮಾಣದ ನಗದು. ಬೆಳ್ಳಿಯ ಗಟ್ಟಿ ದೋಚಿದ್ದಾರೆ.

ಇದನ್ನೂ ಓದಿ: ಐಶ್ವರ್ಯ ರೈ ಮತ್ತೊಂದು ವಿಡಿಯೋ ವೈರಲ್, ಐಫಾ ಅವಾರ್ಡ್ ಪಡೆದುಕೊಂಡ ಐಶ್ ಮಾಡಿದ್ದೇನು?

publive-image

₹1 ಕೋಟಿ ನಗದು, 350 ಕೆಜಿ ಬೆಳ್ಳಿ ಗಟ್ಟಿ

ತಮಿಳುನಾಡು ಮೂಲದ ಚಿನ್ನದ ವ್ಯಾಪಾರಿಯ ಅನಿಲ್‌ ಮಹದೇವ್‌, ಮಹಾರಾಷ್ಟ್ರದ ಬೆಳ್ಳಿ ಗಟ್ಟಿ ಖರೀದಿಸಿ ಸೇಲಂಗೆ ಕೊಂಡೊಯ್ಯುತ್ತಿದ್ದರು. ಅನಿಲ್​ ಅವರ ಜೊತೆ ಅವರ ಮಗ ಬಾಲಾಜಿ, ಸ್ನೇಹಿತರಾದ ಗಣೇಶ್‌, ವಿನೋದ್‌ ಇದ್ದರು. ಇವರ ಕಾರು ತುಮಕೂರು ತಾಲೂಕಿನ ನೆಲಹಾಳ್ ಬಳಿ ಬರುತ್ತಿದ್ದಂತೆ ಇನ್ನೋವಾ ಕಾರಿನಲ್ಲಿ ಬಂದ ಏಳೆಂಟು ಮಂದಿ ಕಳ್ಳರು, ಕಾರನ್ನ ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ಆಗ ಬಾಲಾಜಿ, ಗಣೇಶ್‌ ವಿನೋದ್‌ ಕಾರಿನಿಂದ ಇಳಿದು ಕಳ್ಳರಿಂದ ತಪ್ಪಿಸಿಕೊಂಡಿದ್ದಾರೆ. ಬಳಿಕ ಅನಿಲ್‌ ಅವರನ್ನು ಅಪಹರಿಸಿಕೊಂಡು ಸ್ವಲ್ಪ ದೂರದವರೆಗೂ ಕರೆದೊಯ್ದು ಕಳ್ಳರು ಅಜ್ಜೇನಹಳ್ಳಿ ಬಳಿ ಕಾರನ್ನು ಬಿಟ್ಟು, ಅವರ ಬಳಿ ಇದ್ದ ₹1 ಕೋಟಿ ನಗದು ಹಾಗೂ 350 ಕೆಜಿ ಬೆಳ್ಳಿ ಗಟ್ಟಿಗಳನ್ನ ದೋಚಿ ಪರಾರಿಯಾಗಿದ್ದಾರೆ.. ಇನ್ನು ಈ ಘಟನೆ ಸಂಬಂಧ ತುಮಕೂರಿನ ಕೊರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ

publive-image

ಹೆದ್ದಾರಿ ದರೋಡೆಕೋರರಿಗಾಗಿ ಬಲೆ ಬೀಸಿದ ಪೊಲೀಸರು

ಇನ್ನು ಪ್ರಕರಣ ದಾಖಲಿಸಿಕೊಂಡಿರುವ ತುಮಕೂರು ಪೊಲೀಸರು ಹೆದ್ದಾರಿ ಕಳ್ಳರಿಗಾಗಿ ಬಲೆ ಬೀಸಿದ್ದಾರೆ. ಆದ್ರೆ ಈ ದರೋಡೆ ಬಗ್ಗೆ ಪೊಲೀಸರಿಗೂ ಹಲವು ಅನುಮಾನ ಮೂಡಿದೆ. ಯಾಕಂದ್ರೆ ಚಿನ್ನದ ವ್ಯಾಪಾರಿಗಳು ಬಹಳ ಎಚ್ಚರಿಕೆಯಿಂದ ಯಾರಿಗೂ ಸುಳಿವು ನೀಡದೇ ಚಿನ್ನ, ಬೆಳ್ಳಿಯನ್ನು ತರುತ್ತಾರೆ. ಆದ್ರಿಲ್ಲಿ ಕಳ್ಳರು ಎಲ್ಲಿಂದ ಬಂದ್ರು. ಬೆಳ್ಳಿ ಗಟ್ಟಿ ಸಾಗಿಸುತ್ತಿರುವ ಮಾಹಿತಿ ಅವರಿಗೆ ಸಿಕ್ಕಿದ್ದೇಗೆ ಅನ್ನು ಪ್ರಶ್ನೆ ಮೂಡಿದೆ. ಸದ್ಯ 48 ಗಂಟೆಯಲ್ಲಿ ಆರೋಪಿಗಳನ್ನು ಹಿಡಿದು ಅಸಲಿ ರಹಸ್ಯವನ್ನು ಬಯಲಿಗೆಳೆಯಲು ಪಣತೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment