/newsfirstlive-kannada/media/post_attachments/wp-content/uploads/2025/05/gold-coins-treassure.jpg)
ಕೆಲವರು ಅದೃಷ್ಟದ ಬಲೆಗೆ ಸಿಲುಕುತ್ತಾರೆ. ಕೆಲವರಿಗೆ ಲಕ್ಷ್ಮಿ ದೇವಿಯೇ ಮನೆ ಬಾಗಿಲು ತಟ್ಟುತ್ತಾಳೆ. ಲಕ್ಷ್ಮಿ ಒಲಿದರೆ ಭಿಕ್ಷಾಧಿಪತಿ ಕೂಡ ಕೋಟ್ಯಾಧಿಪತಿ ಆಗುತ್ತಾನೆ. ಜೆಕ್ ಗಣರಾಜ್ಯದಲ್ಲಿ ಪರ್ವತ ಪ್ರದೇಶದಲ್ಲಿ ಅಡ್ಡಾಡುತ್ತಿದ್ದವರಿಗೆ ಅದೃಷ್ಟವೇ ಕಾಲಿಗೆ ಸಿಲುಕಿದೆ.
ಇದು ಫೆಬ್ರವರಿಯಲ್ಲಿ ನಡೆದ ಘಟನೆ ಈಗ ಬೆಳಕಿಗೆ ಬಂದಿದೆ. ಜೆಕ್ ಗಣರಾಜ್ಯದ ಪೊಡ್ಕರ್ಪ್ಯಾಕಿ ಪರ್ವತಗಳಲ್ಲಿ ಪ್ರಕೃತಿ ಸೌಂದರ್ಯ ಸವಿಯಲು ಇಬ್ಬರು ಪ್ರವಾಸಿಗರು ಪಾದಯಾತ್ರೆ ಹೋಗಿದ್ದಾರೆ. ಅವರು ಅಲ್ಲಿನ ಪರ್ವತದ ಪ್ರಕೃತಿಯ ಸೌಂದರ್ಯ ಸವಿಯುವಾಗ ಚಿನ್ನದ ನಿಕ್ಷೇಪವೇ ಅವರ ಕಾಲಿಗೆ ಸಿಲುಕಿದೆ.
598 ಚಿನ್ನದ ನಾಣ್ಯಗಳು, ಆಭರಣಗಳು, ತಂಬಾಕು ಚೀಲಗಳಿರುವ ಪೆಟ್ಟಿಗೆ ಪತ್ತೆಯಾಗಿದೆ. ಅನಿರೀಕ್ಷಿತವಾಗಿ ಸಿಕ್ಕ ನಿಧಿಯನ್ನು ಪ್ರವಾಸಿಗರು ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.
ಸಂಶೋಧಕರ ಪ್ರಕಾರ ಇದು 1808ರ ಹಿಂದಿನವು ಎಂಬ ಮಾಹಿತಿ ಲಭ್ಯವಾಗಿದೆ. ತಜ್ಞರ ಪ್ರಕಾರ ಫ್ರೆಂಚ್, ಬೆಲ್ಜಿಯಂ, ಒಟ್ಟೋಮನ್ ಸಾಮ್ರಾಜ್ಯದ ಅವಧಿಯಲ್ಲಿ ಯಾರೋ ಈ ಚಿನ್ನದ ನಾಣ್ಯಗಳನ್ನು ನೆಲದಲ್ಲಿ ಹುದುಗಿಸಿ ಇಟ್ಟಿರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಅಂದರೆ ಸುಮಾರು 200 ವರ್ಷಗಳ ಹಿಂದೆಯೇ ಚೀಲಗಳಲ್ಲಿ ಹಾಕಿ ನೆಲದಲ್ಲಿ ಇಟ್ಟಿರುವ ಸಾಧ್ಯತೆ ಇದೆ.
Hikers Discover Historic Treasure in Czech Mountains
An iron box and aluminum can filled with gold coins, jewelry, and ornaments from 1808–1915 were unearthed, possibly tied to the Austro-Hungarian Empire.
Nearly 600 gold coins and valuables were found, now worth over $340,000.… pic.twitter.com/Jgfhv4RZiR
— Danos (@DanosNephew)
Hikers Discover Historic Treasure in Czech Mountains
An iron box and aluminum can filled with gold coins, jewelry, and ornaments from 1808–1915 were unearthed, possibly tied to the Austro-Hungarian Empire.
Nearly 600 gold coins and valuables were found, now worth over $340,000.… pic.twitter.com/Jgfhv4RZiR— Danos (@DanosNephew) May 2, 2025
">May 2, 2025
ಈ ಚಿನ್ನದ ನಾಣ್ಯಗಳ ಮೌಲ್ಯ $3.40 ಲಕ್ಷ ಡಾಲರ್ ಅಂದರೆ ಭಾರತೀಯ ರೂಪಾಯಿಯಲ್ಲಿ 2.87 ಕೋಟಿ ಎಂದು ಅಂದಾಜಿಸಲಾಗಿದೆ. ಪ್ರಾಚೀನ ಚಿನ್ನದ ನಾಣ್ಯಗಳ ಮೌಲ್ಯ ಇನ್ನಷ್ಟು ಹೆಚ್ಚಿರುವ ಸಾಧ್ಯತೆ ಇದೆ. ಸದ್ಯ ಇದನ್ನು ಪೂರ್ವ ಬೋಹಿಮಿಯನ್ ವಸ್ತು ಸಂಗ್ರಹಾಲಯಕ್ಕೆ ಸ್ಥಳಾಂತರಿಸಿ ಇಡಲಾಗಿದೆ. ಇದರ ನಿರ್ದಿಷ್ಟ ಮೌಲ್ಯವನ್ನು ಅನಂತರ ನಿರ್ಧರಿಸಲಾಗುತ್ತದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಚೀನ ಕಾಲದಲ್ಲಿ ಅಮೂಲ್ಯ ವಸ್ತುಗಳನ್ನು ನಿಧಿಗಳ ರೂಪದಲ್ಲಿ ಸಂಗ್ರಹಿಸುವುದು ಒಂದು ಪದ್ಧತಿಯಾಗಿತ್ತು. ಅದನ್ನು ನೆಲದಲ್ಲಿ ಅಡಗಿಸಿ ಇಟ್ಟು ಅನಿಶ್ಚಿತ ಸಂದರ್ಭಗಳು ಎದುರಾದಾಗ ಮರಳಿ ಪಡೆಯುವ ಉದ್ದೇಶ ಇರಬಹುದು ಅಂತಾರೆ ಸಂಶೋಧಕರು.
ಇದನ್ನೂ ಓದಿ: ಮೈಸೂರಲ್ಲಿ 1000 ವರ್ಷದ ಪುರಾತನ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ದರ್ಶನ; ಎಲ್ಲಿ? ಯಾವಾಗ?
ಮತ್ತೊಂದೆಡೆ ಇದು 2ನೇ ಮಹಾಯುದ್ಧದ ಅವಧಿಯಲ್ಲಿ ನಾಜಿಗಳು ಈ ನಿಧಿಯನ್ನು ಹುದುಗಿಸಿ ಇಟ್ಟಿದ್ದಾರೆ ಎಂದು ವಾದಿಸಲಾಗುತ್ತಿದೆ.
ಅದೃಷ್ಟವಂತರಿಗೆ ಕೈ ತುಂಬಾ ಬಹುಮಾನ!
ಇಂಥ ಸಿಕ್ಕ ನಿಧಿಯನ್ನು ಒಪ್ಪಿಸಿದವರಿಗೂ ಲಾಭವಿದೆ. ಜೆಕ್ ಗಣರಾಜ್ಯದ ಕಾನೂನುಗಳ ಪ್ರಕಾರ ಪ್ರಾಚೀನ ನಿಧಿ ಪತ್ತೆ ಹಚ್ಚಿದವರಿಗೆ ನಿಧಿಯ ನಿರ್ದಿಷ್ಟ ಮೌಲ್ಯದ ಶೇ.10ರಷ್ಟು ಪಡೆಯಲು ಅರ್ಹರಾಗಿರುತ್ತಾರೆ. ಸದ್ಯ ಅಂದಾಜಿನ ಪ್ರಕಾರ ಪ್ರವಾಸಿಗರಿಗೆ ಸಿಕ್ಕ ನಿಧಿಯಿಂದ 28 ಲಕ್ಷ ಸಿಗಬಹುದು ಎಂದು ಲೆಕ್ಕಾಚಾರವಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ