Advertisment

ಭಾರೀ ಅನಾಹುತ.. ಅಂಕೋಲದಲ್ಲಿ ಒಂದೇ ಕುಟುಂಬದ ಐವರು ಗುಡ್ಡ ಕುಸಿತದಲ್ಲಿ ಸಿಲುಕಿರುವ ಶಂಕೆ..

author-image
Ganesh
Updated On
ಭಾರೀ ಅನಾಹುತ.. ಅಂಕೋಲದಲ್ಲಿ ಒಂದೇ ಕುಟುಂಬದ ಐವರು ಗುಡ್ಡ ಕುಸಿತದಲ್ಲಿ ಸಿಲುಕಿರುವ ಶಂಕೆ..
Advertisment
  • ಉತ್ತರ ಕನ್ನಡ ಜಿಲ್ಲೆಯಲ್ಲಿ ರಣ ಭೀಕರ ಮಳೆ
  • ಅಂಕೋಲದ ಶಿರೂರು ಬಳಿ ಸಂಭವಿಸಿದ ಗುಡ್ಡ ಕುಸಿತ
  • ಅನಾಹುತದಲ್ಲಿ ಇಬ್ಬರು ಮಕ್ಕಳು ಸಿಲುಕಿರುವ ಶಂಕೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ರಣ ಭೀಕರ ಮಳೆಯಾಗುತ್ತಿದ್ದು, ಹೆದ್ದಾರಿಯಲ್ಲಿ ಭಾರೀ ಗುಡ್ಡಕುಸಿತ ಸಂಭವಿಸಿದೆ. ಅಂಕೋಲಾ ತಾಲೂಕಿನ ಶಿರೂರು ಬಳಿ ಸಂಭವಿಸಿದ ಗುಡ್ಡ ಕುಸಿತದಲ್ಲಿ ಒಂದೇ ಕುಟುಂಬದ ಐವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

Advertisment

publive-image

ಲಕ್ಷ್ಮಣ ನಾಯ್ಕ (47), ಶಾಂತಿ ನಾಯ್ಕ (36), ರೋಶನ್ (11), ಅವಾಂತಿಕಾ (6), ಜಗನ್ನಾಥ(55 ) ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸರು, ಐಆರ್​ಬಿ ಅಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಗುಡ್ಡ ಕುಸಿತದಲ್ಲಿ ಸಿಲುಕಿರುವ ಕುಟುಂಬದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ: ಕೊಚ್ಚಿ ಹೋದ ಯುವಕ.. 2 ದಿನದ ಮಳೆಗೆ 8 ಸಾವು.. ವರುಣದೇವ ಕರುಣೆ ತೋರು ಅಂತಿದ್ದಾರೆ ಜನ..!

publive-image

ಹೆದ್ದಾರಿ ಬಳಿಯೇ ಮನೆ ಇತ್ತಾ? ಅಥವಾ ಹೆದ್ದಾರಿಯಲ್ಲಿ ಕುಟುಂಬ ವಾಹನದಲ್ಲಿ ಪ್ರಯಾಣ ಮಾಡ್ತಿತ್ತಾ ಅನ್ನೋದ್ರ ಬಗ್ಗೆ ಮಾಹಿತಿ ತಿಳಿದುಬರಬೇಕಿದೆ. ಹೆದ್ದಾರಿ ಮೇಲೆ ಬಿದ್ದಿರುವ ಮಣ್ಣು ತೆಗೆಯಲು ಹರಸಾಹಸ ಮಾಡಲಾಗುತ್ತಿದೆ. ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ.

Advertisment

ಇದನ್ನೂ ಓದಿ:ಕಾರವಾರ ಜಲಾವೃತ.. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕುಸಿದ ಗುಡ್ಡ.. ಮಳೆಗೆ ಭಾರೀ ಅನಾಹುತ -Photos

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment