/newsfirstlive-kannada/media/post_attachments/wp-content/uploads/2024/11/SAMOSA_CM_NEW.jpg)
ಅಡಿಕೆಗೆ ಹೋದ ಮಾನ ಆನೆ ಕೊಟ್ರು ಬರಲ್ಲ. ಸಾರಿ.. ಸಾರಿ ಸಮೋಸಾಗೆ ಹೋದ ಮಾನ ಸಿಐಡಿ ತನಿಗೆ ಕೊಟ್ಟರು ಬರಲ್ಲ. ಸಿಎಂಗಾಗಿ ತಂದಿದ್ದ ಸಮೋಸಾ, ಕೇಕ್​ಗಳು ಎಲ್ಲ ನಾಪತ್ತೆಯಾಗಿವೆ. ಇದೇನ್ ಮಹಾ ಅನ್ಕೋ ಬೇಡಿ. ಆ ಸಮೋಸಾ, ಕೇಕ್​ಗಳೆಲ್ಲ ಸಿಎಂಗಾಗಿ ತರಿಸಿದ್ದ ಸ್ನ್ಯಾಕ್ಸ್​.
/newsfirstlive-kannada/media/post_attachments/wp-content/uploads/2024/11/SAMOSA_CM-1.jpg)
ಮುಖ್ಯಮಂತ್ರಿಗಾಗಿ ತರಿಸಿದ್ದ ಸಮೋಸಾ, ಕೇಕ್​ಗಳು ನಾಪತ್ತೆ!
ಸಿಐಡಿ ಅಂದರೆ ಕ್ರೈಂ ಇನ್ವೆಸ್ಟಿಗೇಷನ್ ಡಿಪಾರ್ಟ್​ಮೆಂಟ್ ₹500 ಕೋಟಿ, ಸಾವಿರ ಕೋಟಿ ಹಗರಣ, ಇಲಾಖೆಯಲ್ಲಿ ಭ್ರಷ್ಟಾಚಾರ. ಐಎಎಸ್​, ಐಪಿಎಲ್​, ಸಚಿವರು, ಸ್ಟ್ರಾಂಗ್​ ಲೀಡರ್ಸ್​ ಇಂಥವ್ರನ್ನೆಲ್ಲಾ ಇನ್ವೆಸ್ಟಿಗೇಷನ್ ಮಾಡೋ ಟೀಂಗೆ ಇದೀಗ ಸಮೋಸಾ ನಾಪತ್ತೆ ಪ್ರಕರಣ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಒಂದು ಸಮೋಸಾ ಇದೀಗ ದೇಶಾದ್ಯಂತ ಭಾರಿ ಬಿಸಿ ಬಿಸಿ ಸುದ್ದಿಯಲ್ಲಿದೆ. ಸರ್ಕಾರ, ಪೊಲೀಸರು, ಅಧಿಕಾರಿಗಳು ಈ ಸಮೋಸಾ ಹಿಂದೆ ಬಿದ್ದಿದ್ದಾರೆ. ನಾಪತ್ತೆಯಾದ ಸಮೋಸಾಗಾಗಿ ಸಿಐಡಿ ತನಿಖೆ ನಡೆಯುತ್ತಿರುವ ಮೊದಲ ಹಾಗೂ ವಿಶೇಷ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ.
ಹಿಮಾಚಲ ಪ್ರದೇಶದ ಸಿಎಂ ಸುಖ್ವಿಂದರ್ ಸಿಂಗ್ ಸುಖುಗಾಗಿ ಶಿಮ್ಲಾದ ಪ್ರಸಿದ್ಧ ಹೋಟೆಲ್​ನಿಂದ ಆರ್ಡರ್ ಮಾಡಿ ಸಮೋಸಾ, ಕೇಕ್​ಗಳನ್ನು ತರಿಸಲಾಗಿತ್ತು. ಆದರೆ ಇವುಗಳನ್ನು ಸಿಎಂ ಭದ್ರತಾ ಸಿಬ್ಬಂದಿಗೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಇವುಗಳನ್ನ ಯಾರು ತಿಂದಿದ್ದಾರೆ ಎಂಬುದರ ಬಗ್ಗೆ ತನಿಖೆ ಸಿಐಡಿ ವರದಿಯನ್ನ ಕೇಂದ್ರ ಕಚೇರಿಗೆ ಕಳುಹಿಸಿದೆ. ಆದರೆ, ವರದಿ ಸೋರಿಕೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸರ್ಕಾರದ ಮಾನ ಹರಾಜು ಆಗಿದೆ ಅಂತ ಬಿಜೆಪಿ ಈ ವಿಚಾರವನ್ನು ಇಟ್ಟುಕೊಂಡು ಟೀಕಾಪ್ರಹಾರ ನಡೆಸುತ್ತಿದೆ.
ಒಂದು ಸಮೋಸಾ ಕತೆ!
- ಅಕ್ಟೋಬರ್​ 21 ರಂದು ಹಿಮಾಚಲ ಸಿಎಂ ಚಹಾ ಕೂಟ
- ಬಜಾರ್ ಬಳಿಯ ಹೋಟೆಲ್​ನಿಂದ ಸಮೋಸಾ ಆರ್ಡರ್​
- ಮೂರು ಬಾಕ್ಸ್​ಗಳಲ್ಲಿ ಸಮೋಸಾ ಮತ್ತು ಕೇಕ್​ ತರಿಸಿದ್ದರು
- ರಿಸೆಪ್ಷನ್​ನಲ್ಲಿದ್ದ ಇನ್ಸ್‌ಪೆಕ್ಟರ್‌ಗೆ ಸಮೋಸಾ ತಂದ ಮಾಹಿತಿ
- 3 ಬಾಕ್ಸ್‌ಗಳಲ್ಲಿದ್ದ ಸಮೋಸಾಗಳು ಚಹಾ ಕೂಟಕ್ಕೆ ತಲುಪಿಲ್ಲ
ಸಮೋಸಾ, ಕೇಕ್​ಗಳ ಕುರಿತು ತನಿಖೆ ಚುರುಕುಗೊಂಡಿದೆ. ಸಿಸಿಟಿವಿ ಪರಿಶೀಲನೆ ಆರಂಭಗೊಂಡಿದೆ. ಮುಖ್ಯಮಂತ್ರಿಗೆ ತಂದಿದ್ದ ಸಮೋಸವನ್ನು ಭದ್ರತಾ ಸಿಬ್ಬಂದಿಗೆ ನೀಡಿರುವುದು ಈಗ ಸಿಐಡಿ ತನಿಖೆವರೆಗೂ ಹೋಗಿದೆ. ಸಿಎಂಗೆ ತಂದಿದ್ದ ಸಮೋಸಾ ಸಿಎಂ ಭದ್ರತಾ ಸಿಬ್ಬಂದಿಗೆ ಬಡಿಸಲಾಗಿದೆ ಅನ್ನೋ ವಿಚಾರ ಬೆಳಕಿಗೆ ಬಂದಿದೆ. ಸಿಐಡಿ ಕೂಡ ಈ ಘಟನೆಯನ್ನ ಸರ್ಕಾರಿ ವಿರೋಧಿ ಕೃತ್ಯ ಎಂದು ಹೇಳಿ ಮತ್ತಷ್ಟು ಅಚ್ಚರಿ ಮೂಡಿಸಿದೆ. ಇಂತಹ ಕ್ಷುಲ್ಲಕ ವಿಚಾರದತ್ತ ಸರ್ಕಾರ ಗಮನ ಹರಿಸುತ್ತಿದೆ ಎಂದು ಬಿಜೆಪಿ ಮುಖಂಡರು ಟೀಕಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/11/HIMACHALA_CM.jpg)
ಅಂತಹದ್ದೇನೂ ಇಲ್ಲ.. ಅದು ಸಿಐಡಿ ಅನುಚಿತ ವರ್ತನೆಯ ವಿಷಯದಲ್ಲಿ ತೊಡಗಿಸಿಕೊಂಡಿದೆ
ಸುಖ್ವಿಂದರ್ ಸಿಂಗ್, ಹಿಮಚಲ ಪ್ರದೇಶ ಸಿಎಂ
ಸಿಎಂಗೆ ತಲುಪಬೇಕಿದ್ದ ಸಮೋಸಾ, ಕೇಕ್​ಗೆ ಕನ್ನ ಹಾಕಿರೋದು. ಸರ್ಕಾರದ ಮಾನ ಮರ್ಯಾದೆ ಮೂರು ಕಾಸಿಗೆ ಹರಾಜಾಗುವಂತೆ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us