newsfirstkannada.com

ಹಿಮಾಚಲ ಪ್ರದೇಶದ ಉಪಮುಖ್ಯಮಂತ್ರಿ ಮುಖೇಶ್ ಅಗ್ನಿಹೋತ್ರಿ ಅವರ ಪತ್ನಿ ಹಠಾತ್ ನಿಧನ

Share :

Published February 10, 2024 at 10:56am

Update February 10, 2024 at 10:57am

    ಆರೋಗ್ಯದಲ್ಲಿ ದಿಢೀರ್ ಏರುಪೇರು ಸಂಭವಿಸಿ ನಿಧನ

    ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಆಗಿದ್ದ ಸಿಮ್ಮಿ ಅಗ್ನಿಹೋತ್ರಿ

    ಇಂದು ಮಧ್ಯಾಹ್ನ 2 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ

ಹಿಮಾಚಲ ಪ್ರದೇಶದ ಉಪಮುಖ್ಯಮಂತ್ರಿ ಮುಖೇಶ್ ಅಗ್ನಿಹೋತ್ರಿ ಅವರ ಪತ್ನಿ ಡಾ.ಸಿಮ್ಮಿ ಅಗ್ನಿಹೋತ್ರಿ ನಿಧನರಾಗಿದ್ದಾರೆ. ಸಿಮ್ಮಿ ಅಗ್ನಿಹೋತ್ರಿ ತಡರಾತ್ರಿ ಹಠಾತ್ ನಿಧನರಾಗಿದ್ದಾರೆ.

ವರದಿಗಳ ಪ್ರಕಾರ ಸಿಮ್ಮಿ ಅಗ್ನಿಹೋತ್ರಿ ಅವರ ಆರೋಗ್ಯವು ನಿನ್ನೆ ಡಿಢೀರ್ ಹದಗೆಟ್ಟಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಪ್ರೊಫೆಸರ್ ಆಗಿದ್ದ ಸಿಮ್ಮಿ ಅಗ್ನಿಹೋತ್ರಿ, ಹಿಮಾಚಲ ಪ್ರದೇಶ ವಿಶ್ವವಿದ್ಯಾಲಯದ ಸಾರ್ವಜನಿಕ ಆಡಳಿತ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಇಂದು ಮಧ್ಯಾಹ್ನ 2 ಗಂಟೆಗೆ ಅಂತ್ಯಕ್ರಿಯೆ
ಮಧ್ಯಾಹ್ನ 2 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ. ಮುಕೇಶ್ ಅಗ್ನಿಹೋತ್ರಿ ರಾಜಕೀಯಕ್ಕೆ ಸೇರುವ ಮೊದಲು ಪತ್ರಕರ್ತರಾಗಿದ್ದರು. ಸಿಮ್ಮಿ ಅಗ್ನಿಹೋತ್ರಿ ಅವರನ್ನು 8 ಏಪ್ರಿಲ್ 1992 ರಂದು ಮದುವೆಯಾಗಿದ್ದರು. ಮುಖೇಶ್ ಅಗ್ನಿಹೋತ್ರಿ ಮತ್ತು ಸಿಮ್ಮಿ ಅಗ್ನಿಹೋತ್ರಿ ಅವರದ್ದು ಪ್ರೇಮ ವಿವಾಹ. ಸಿಮ್ಮಿ ಅಗ್ನಿಹೋತ್ರಿ ಪತಿಯ ಹೋರಾಟದಲ್ಲಿ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದರು. 2003ರಲ್ಲಿ ಮುಕೇಶ್ ಅಗ್ನಿಹೋತ್ರಿ ಪತ್ರಿಕೋದ್ಯಮ ತೊರೆದು ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದಾಗ ಸಂಪೂರ್ಣ ಬೆಂಬಲ ನೀಡಿದ್ದರು. ಅಂದಿನಿಂದ ಮುಕೇಶ್ ಅಗ್ನಿಹೋತ್ರಿ ಸತತವಾಗಿ ಚುನಾವಣೆಯಲ್ಲಿ ಗೆಲ್ಲುತ್ತಲೇ ಬಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಿಮಾಚಲ ಪ್ರದೇಶದ ಉಪಮುಖ್ಯಮಂತ್ರಿ ಮುಖೇಶ್ ಅಗ್ನಿಹೋತ್ರಿ ಅವರ ಪತ್ನಿ ಹಠಾತ್ ನಿಧನ

https://newsfirstlive.com/wp-content/uploads/2024/02/HIMACHAL.jpg

Load More