newsfirstkannada.com

VIDEO: ಹಿಮಪಾತಕ್ಕೆ ಮುಳುಗಿ ಹೋದ ಹಿಮಾಚಲ ಪ್ರದೇಶ; ರಸ್ತೆ ಸಂಚಾರ ಬಂದ್‌; ಜನಜೀವನ ಅಸ್ತವ್ಯಸ್ತ!

Share :

Published February 2, 2024 at 8:27pm

Update February 2, 2024 at 8:25pm

    ಉತ್ತರಾಖಂಡ್‌, ಹಿಮಾಚಲ ಪ್ರದೇಶ, ಕಾಶ್ಮೀರದಲ್ಲಿ ಹಿಮಪಾತ

    ಜನವರಿ ತಿಂಗಳಲ್ಲಿ ಹಿಮ ಬೀಳದೇ ಪ್ರವಾಸಿಗರಿಗೆ ಭಾರೀ ನಿರಾಸೆ

    ರಸ್ತೆಗಳಲ್ಲಿ ವಾಹನಗಳು ಸಂಚರಿಸಲಾಗದ ಪರಿಸ್ಥಿತಿ ನಿರ್ಮಾಣ

ಉತ್ತರ ಭಾರತದ ಹಲವೆಡೆ ಒಂದು ತಿಂಗಳು ತಡವಾದ್ರೂ ಹಿಮಪಾತ ಲೇಟೆಸ್ಟ್ ಆಗಿ ಎಂಟ್ರಿಯಾಗಿದೆ. ಉತ್ತರಾಖಂಡ್‌, ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ, ಪಂಜಾಬ್‌ನಲ್ಲಿ ಭಾರೀ ಹಿಮ ಬೀಳುತ್ತಾ ಇರೋದ್ರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆಗಳಲ್ಲಿ ವಾಹನಗಳು ಸಂಚರಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಕಳೆದ ಜನವರಿ ತಿಂಗಳಲ್ಲಿ ಹಿಮ ಬೀಳದೇ ಹಿಮಾಚಲ ಪ್ರದೇಶ, ಕಾಶ್ಮೀರಕ್ಕೆ ಭೇಟಿ ಕೊಟ್ಟ ಪ್ರವಾಸಿಗರು ನಿರಾಶರಾಗಿದ್ದರು. ಇದೀಗ ಹಿಮಾಚಲ ಪ್ರದೇಶ, ಕಾಶ್ಮೀರದಲ್ಲಿ ಹಿಮಪಾತದಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಕ್ಕಿದೆ. ಉತ್ತರಾಖಂಡ್‌ ರಾಜ್ಯದ ಬದರಿನಾಥ ಹಿಮಚ್ಛಾದಿತದಲ್ಲಿ ಸಂಪೂರ್ಣ ಮುಳುಗಡೆಯಾಗುತ್ತಿದೆ. ಹಿಮಾಚಲ ಪ್ರದೇಶದ ಅನೇಕ ಪ್ರದೇಶಗಳಲ್ಲಿ ಹಿಮ ಮಳೆ ಬೀಳುತ್ತಾ ಇದೆ.

ಇದನ್ನೂ ಓದಿ:

ಹಿಮಾಚಲ ಪ್ರದೇಶದಲ್ಲಿ ರಸ್ತೆ ಸಂಚಾರ ಬಂದ್‌!
ಎರಡು ವರ್ಷಗಳ ಬಳಿಕ ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತ ಕಾಣಿಸಿಕೊಂಡಿದೆ. ಕಳೆದ ಎರಡು ದಿನಗಳಿಂದ ಹಿಮಪಾತ ಬೀಳುತ್ತಿದ್ದು, 500ಕ್ಕೂ ಹೆಚ್ಚು ರಸ್ತೆಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಹಿಮಪಾತ ಪ್ರವಾಸಿಗರಿಗೆ ಸಂತಸ ತಂದಿದ್ರೆ ಶಿಮ್ಲಾ, ಲಾಹೌಲ್‌ ಸೇರಿದಂತೆ ಹಲವು ಕಡೆಗಳಲ್ಲಿ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ.

ಶಿಮ್ಲಾದಲ್ಲಿ ಈ ಋತುವಿನ ಮತ್ತು ಹೊಸ ವರ್ಷದ ಮೊದಲ ಹಿಮಪಾತವಾಗಿದೆ. ರಿಡ್ಜ್ ಮತ್ತು ಮಾಲ್ ರಸ್ತೆಯಲ್ಲಿದ್ದ ಪ್ರವಾಸಿಗರು ಸ್ನೋಫ್ಲೇಕ್‌ಗಳು ಬೀಳುವುದನ್ನು ಕಂಡು ಪುಳಕಿತರಾದರು. ಚಂಬಾದ ಖಜ್ಜಿಯಾರ್ ಋತುವಿನ ಮೊದಲ ಹಿಮಪಾತವನ್ನು ಪಡೆದಿದೆ. ಬುಡಕಟ್ಟು ಪ್ರದೇಶ ಪಾಂಗಿ ಇತರ ಭಾಗಗಳಿಂದ ಸಂಪರ್ಕ ಕಡಿತಗೊಂಡಿದೆ. ಬಹುತೇಕ ಪಂಚಾಯಿತಿಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಕಳೆದ ಮೂರು ದಿನದಲ್ಲಿ ಹಿಮಪಾತ ಸುರಿಯುತ್ತಿರೋದ್ರಿಂದ ಹಿಮಾಚಲ ಪ್ರದೇಶದಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಹಿಮಪಾತಕ್ಕೆ ಮುಳುಗಿ ಹೋದ ಹಿಮಾಚಲ ಪ್ರದೇಶ; ರಸ್ತೆ ಸಂಚಾರ ಬಂದ್‌; ಜನಜೀವನ ಅಸ್ತವ್ಯಸ್ತ!

https://newsfirstlive.com/wp-content/uploads/2024/02/Himachala-Pradesh-Snowfall.jpg

Load More