ಹಿಮಾಚಲ ಪ್ರದೇಶದಲ್ಲಿ ಅಪಾಯಕ್ಕೆ ಸಿಲುಕಿದ ಸಾವಿರಾರು ಕಾರು; ಒಂದೊಂದು ದೃಶ್ಯವೂ ಎದೆ ಝಲ್‌ ಎನಿಸುತ್ತೆ!

author-image
admin
Updated On
ಹಿಮಾಚಲ ಪ್ರದೇಶದಲ್ಲಿ ಅಪಾಯಕ್ಕೆ ಸಿಲುಕಿದ ಸಾವಿರಾರು ಕಾರು; ಒಂದೊಂದು ದೃಶ್ಯವೂ ಎದೆ ಝಲ್‌ ಎನಿಸುತ್ತೆ!
Advertisment
  • ಕ್ರಿಸ್ಮಸ್‌, ಹೊಸ ವರ್ಷಾಚರಣೆಗಾಗಿ ಶಿಮ್ಲಾಗೆ ಬಂದ ಪ್ರವಾಸಿಗರು
  • 10 ಸಾವಿರಕ್ಕೂ ಹೆಚ್ಚು ಪ್ರವಾಸಿಗರನ್ನು ರಕ್ಷಣೆ ಮಾಡಿದ ಸ್ಥಳೀಯರು
  • ನೋಡ ನೋಡುತ್ತಿದ್ದಂತೆ ಜಾರಿಕೊಂಡು ಪ್ರಪಾತಕ್ಕೆ ಬೀಳುವ ವಾಹನ

ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತ ಉಂಟಾಗಿದೆ. ಕ್ರಿಸ್ಮಸ್‌, ಹೊಸ ವರ್ಷಾಚರಣೆಗಾಗಿ ಶಿಮ್ಲಾ ಸೇರಿದಂತೆ ಹಿಮಾಚಲ ಪ್ರದೇಶದ ಹಲವೆಡೆ ಪ್ರವಾಸಕ್ಕೆ ತೆರಳಿದ್ದ ಸಾವಿರಾರು ಪ್ರವಾಸಿಗರು ಅಪಾಯದಲ್ಲಿ ಸಿಲುಕಿದ್ದಾರೆ.

ಹಿಮಪಾತದಿಂದಾಗಿ ರಸ್ತೆಗಳಲ್ಲಿ ವಾಹನ ಸಂಚಾರ ಕಷ್ಟವಾಗಿದೆ. ಕಿಲೋ ಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್ ಆಗಿದ್ರೆ ಪ್ರವಾಸಿಗರು ಸಂಕಷ್ಟದಲ್ಲಿದ್ದಾರೆ.


">December 28, 2024

ಹಿಮಾಚಲ ಪ್ರದೇಶದ ಪೊಲೀಸರು, ಸ್ಥಳೀಯರು ಇದುವರೆಗೂ 10 ಸಾವಿರ ಪ್ರವಾಸಿಗರನ್ನು ರಕ್ಷಣೆ ಮಾಡಿದ್ದಾರೆ. ಆದರೆ ಇನ್ನೂ ಸಾವಿರಕ್ಕೂ ಹೆಚ್ಚು ಕಾರುಗಳಲ್ಲಿ ಪ್ರವಾಸಿಗರು ಸಿಲುಕಿರುವ ಸಾಧ್ಯತೆ ಇದೆ.

ಇದನ್ನೂ ಓದಿ: ಹಿಮಪಾತದಲ್ಲಿ ಕರುಣಾಜನಕ ಕಥೆ.. 2 ದಿನಗಳಾದ್ರೂ ಮಾಲೀಕನ ಶವ ಬಿಟ್ಟು ಹೋಗದೆ ಕಾಯುತ್ತಿದ್ದ ಶ್ವಾನ 

ಕ್ರಿಸ್ಮಸ್, ಹೊಸ ವರ್ಷಾಚರಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರ ದಂಡು ಹಿಮಾಚಲ ಪ್ರದೇಶಕ್ಕೆ ಆಗಮಿಸಿದೆ. ಆದರೆ ಭಾರೀ ಹಿಮಪಾತದಿಂದ ರಸ್ತೆಗಳು ಬಂದ್ ಆಗಿದೆ.


">December 27, 2024

ಅನೇಕ ರಸ್ತೆಗಳಲ್ಲಿ ವಾಹನಗಳು ನೋಡ ನೋಡುತ್ತಿದ್ದಂತೆ ಜಾರಿಕೊಂಡು ಪ್ರಪಾತಕ್ಕೆ ಬೀಳುತ್ತಿವೆ. ವಾಹನ ಸಂಚಾರರು ಜೀವ ಪಣಕ್ಕಿಟ್ಟು ಸಂಚರಿಸಬಹುದಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಮಾಚಲ ಸರ್ಕಾರ, ಪೊಲೀಸರು, ಸ್ಥಳೀಯರ ಸೂಚನೆಗಳನ್ನು ಪಾಲಿಸುವಂತೆ ಪ್ರವಾಸಿಗರಿಗೆ ಸೂಚನೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment