newsfirstkannada.com

ಭೀಕರ ರಸ್ತೆ ಅಪಘಾತ.. ಸ್ಟಾರ್​ ನಟಿ ನಿಧನ

Share :

24-05-2023

    ಭೀಕರ ರಸ್ತೆ ಅಪಘಾತದಲ್ಲಿ ಖ್ಯಾತ ನಟಿ ನಿಧನ

    ನಟಿ ವೈಭವಿ ಉಪಾಧ್ಯಾಯ ಕಾರು ಅಪಘಾತದಲ್ಲಿ ಸಾವು

    ಜನಪ್ರಿಯ ಟಿವಿ ಶೋ ‘Sarabhai vs Sarabhai’ ಖ್ಯಾತ ನಟಿ

ಖ್ಯಾತ ಕಿರುತೆರೆ ನಟಿ ವೈಭವಿ ಉಪಾಧ್ಯಾಯ ಭೀಕರ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿ ಅಪಘಾತ ಸಂಭವಿಸಿದೆ. 32 ವರ್ಷದ ವೈಭವಿ ಉಪಾಧ್ಯಾಯ ಜನಪ್ರಿಯ ಟಿವಿ ಶೋ ‘Sarabhai vs Sarabhai’ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದ್ದರು.

ವೈಭವಿ ಉಪಾಧ್ಯಾಯ, ತಮ್ಮ ಭಾವಿ ಪತಿಯೊಂದಿಗೆ ಹಿಮಾಚಲ ಪ್ರದೇಶಕ್ಕೆ ಹೋಗುತ್ತಿದ್ದರು. ಈ ವೇಳೆ ಕಾರು ನಿಯಂತ್ರಣ ತಪ್ಪಿ ಕಣಿವೆಗೆ ಉರುಳಿ ಬಿದ್ದ ಪರಿಣಾಮ ಮೃತಪಟ್ಟಿದ್ದಾರೆ. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸ್​​ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಟಿ ವೈಭವಿ ನಿಧನಕ್ಕೆ ಹಿಂದಿ ಕಿರುತೆರೆ ನಟ ಹಾಗೂ ನಟಿಯರು ಜೊತೆಗೆ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಇತ್ತೀಚೆಗಷ್ಟೇ ಅವರು ಬಾಲಿವುಡ್​​ ಖ್ಯಾತ ನಟಿ ದೀಪಿಕಾ ಪಡುಕೋಣೆ ನಟನೆ ಛಪಾಕ್ ಹಾಗೂ ತಿಮಿರ್ ಎನ್ನುವ ಚಿತ್ರದಲ್ಲೂ ನಟಿಸಿದ್ದರು.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಭೀಕರ ರಸ್ತೆ ಅಪಘಾತ.. ಸ್ಟಾರ್​ ನಟಿ ನಿಧನ

https://newsfirstlive.com/wp-content/uploads/2023/05/vaibhavi-3.jpg

Load More