/newsfirstlive-kannada/media/post_attachments/wp-content/uploads/2025/05/deepika3.jpg)
ಹಿಂದಿ ಬಿಗ್ಬಾಸ್ ಸೀಸನ್ 12ರ ವಿನ್ನರ್, ಕಿರುತೆರೆಯ ಜನಪ್ರಿಯ ನಟಿ ದೀಪಿಕಾ ಕಾಕರ್ ಅವರಿಗೆ ಲಿವರ್ ಕ್ಯಾನ್ಸರ್ ಇರುವುದು ಖಚಿತಪಡಿಸಿದ್ದಾರೆ. ಈ ಬಗ್ಗೆ ಖುದ್ದು ನಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಎರಡನೇ ಹಂತದ ಕ್ಯಾನ್ಸರ್‌ನಿಂದ ಬಳಲುತ್ತಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಗೊತ್ತಾಗುತ್ತಿದ್ದಂತೆ ದೀಪಿಕಾ ಕಾಕರ್ ಶೀಘ್ರ ಗುಣಮುಖವಾಗಲಿ ಎಂದು ಅನೇಕ ಕಲಾವಿದರು ಮತ್ತು ಅಭಿಮಾನಿಗಳು ಹಾರೈಸಿದ್ದಾರೆ.
ಇದನ್ನೂ ಓದಿ:ಚಿಕ್ಕೋಡಿ ಮೇಖಳಿ ಮಠ ಧ್ವಂಸ.. ಅಧಿಕಾರಿಗಳ ಇಂಥ ನಿರ್ಧಾರಕ್ಕೆ ಅಸಲಿ ಕಾರಣ ಏನು..?
View this post on Instagram
ತಮ್ಮ ಆರೋಗ್ಯದ ಬಗ್ಗೆ ದೀಪಿಕಾ ಹೇಳಿದ್ದೇನು?
ಕಳೆದ ಕೆಲವು ದಿನಗಳು ನನಗೆ ತುಂಬಾ ಕಷ್ಟಕರವಾಗಿದ್ದವು. ಹೊಟ್ಟೆಯ ಮೇಲ್ಭಾಗದಲ್ಲಿ ಬಹಳ ನೋವು ಕಾಣಿಸಿಕೊಳ್ಳುತ್ತಿತ್ತು. ಹಾಗಾಗಿ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷಿಸಿದೆ. ಆಗ ನನ್ನ ಯಕೃತ್ತಿನಲ್ಲಿ ಟೆನಿಸ್ ಚೆಂಡಿನ ಗಾತ್ರದ ಗೆಡ್ಡೆ ರೂಪುಗೊಂಡಿರುವುದು ಕಂಡುಬಂತು. ಇದು ಎರಡನೇ ಹಂತದ ಲಿವರ್ ಕ್ಯಾನ್ಸರ್‌ನ ಲಕ್ಷಣವಾಗಿದೆ. ನನಗೆ ಮತ್ತು ನನ್ನ ಕುಟುಂಬಕ್ಕೆ ಈಗ ಕಷ್ಟಕರ ಸಮಯವಾಗಿದೆ. ಆದರೆ ನಾನು ಹತಾಶಳಾಗಿಲ್ಲ. ನನಗೆ ಮತ್ತು ನನ್ನ ಕುಟುಂಬಕ್ಕೆ ನಿಮ್ಮ ಪ್ರಾರ್ಥನೆಗಳು ಬೇಕು. ನಾನು ಇದರಿಂದ ಹೊರಬರುತ್ತೇನೆ. ದೇವರಲ್ಲಿ ನನಗೆ ನಂಬಿಕೆ ಇದೆ ಎಂದು ದೀಪಿಕಾ ಕಾಕರ್ ಬರೆದುಕೊಂಡಿದ್ದಾರೆ.
ದೀಪಿಕಾ ಕಾಕರ್ (38) ಮೂಲತಃ ಪುಣೆಯವರು. ಮೊದಲು ವಿಮಾನದಲ್ಲಿ ಅಟೆಡೆಂಟ್ ಆಗಿ ಕೆಲಸ ಆರಂಭಿಸಿದ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. 2010ರಲ್ಲಿ ಪ್ರಸಾರವಾಗುತ್ತಿದ್ದ 'ನೀರ್ ಭರೆ ತೇರೆ ನೈನಾ ದೇವಿ' ಧಾರಾವಾಹಿಯಲ್ಲಿ ನಟಿಸುವ ಮೂಲಕ ನಟನಾ ವೃತ್ತಿ ಆರಂಭಿಸಿದ್ದರು. ಆನಂತರ ಸಾಕಷ್ಟು ಧಾರಾವಾಹಿ ಮತ್ತು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡರು. ಇದಾದ ಬಳಿಕ 2011ರಲ್ಲಿ ಬಿಗ್ ಬಾಸ್ ಹಿಂದಿ 5ರಲ್ಲಿ ಅತಿಥಿಯಾಗಿ ಆಗಮಿಸಿದ್ದರು. ಝಲಕ್ ದಿಖ್ಲಾ ಜಾ, ನಾಚ್ ಬಲಿಯೆ ಮುಂತಾದ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. 2018ರಲ್ಲಿ 'ಬಿಗ್ ಬಾಸ್' ಹಿಂದಿ ಸೀಸನ್ 12ರಲ್ಲಿ ಸ್ಪರ್ಧಿಯಾಗಿದ್ದ ಅವರು, ಆ ಸೀಸನ್‌ನ ವಿನ್ನರ್ ಆಗಿದ್ದರು.
ಇದನ್ನೂ ಓದಿ:ಅಬ್ದುಲ್ ರಹಿಮಾನ್ ಕೇಸ್.. ಕರಾವಳಿ ಮುಸ್ಲಿಂ ಕಾಂಗ್ರೆಸ್ ಮುಖಂಡರಿಂದ ಸಾಮೂಹಿಕ ರಾಜೀನಾಮೆ ಎಚ್ಚರಿಕೆ
2011ರಲ್ಲಿ ರೋನಕ್ ಸ್ಯಾಮ್ಸನ್ ಎಂಬುವವರನ್ನು ಮದುವೆಯಾಗಿದ್ದ ಈ ನಟಿ, 2015ರಲ್ಲಿ ಅವರಿಂದ ವಿಚ್ಛೇದನ ಪಡೆದುಕೊಂಡರು. ಬಳಿಕ 2018ರಲ್ಲಿ ನಟ ಶೋಯೆಬ್ ಇಬ್ರಾಹಿಂ ಅವರ ಜೊತೆಗೆ ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದ್ರೆ ಇದೀಗ ನಟಿ ದೀಪಿಕಾ ಕಾಕರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ