newsfirstkannada.com

ಬಿಗ್​ಬಾಸ್ ಮತ್ತೆ ಶುರು; ದೊಡ್ಮನೆಗೆ ಎಂಟ್ರಿ ಕೊಡಲು ಸಜ್ಜಾದ ಮೊದಲ ಸ್ಪರ್ಧಿ ಹೆಸರು ಲೀಕ್‌! ಯಾರದು?

Share :

Published June 20, 2024 at 6:09am

Update June 21, 2024 at 8:48pm

  ಸಣ್ಣ ಪುಟ್ಟ ವಿಚಾರಕ್ಕೂ ಸಖತ್​ ​ಸುದ್ದಿಯಾಗುತ್ತೆ ಬಿಗ್​ಬಾಸ್

  ಈ ಬಾರಿಯ ಬಿಗ್​ಬಾಸ್​ನಲ್ಲಿ​ ಇರಲಿದೆ ಸಮಥಿಂಗ್ ಸ್ಪೆಷಲ್

  ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಡಲು ಸಜ್ಜಾದ ಕ್ಯೂಟ್​ ಹುಡುಗಿ

ಒಂದಲ್ಲಾ ಒಂದು ವಿಚಾರಕ್ಕೆ ಬಿಗ್​ಬಾಸ್​ ಸ್ಪರ್ಧಿಗಳು ಮತ್ತು ಬಿಗ್​ಬಾಸ್​ ಶೋ ಸುದ್ದಿಯಲ್ಲಿ ಇರುತ್ತದೆ. ಈ ಭಾರೀ ಬಿಗ್​ಬಾಸ್​ ಶುರುವಾಗೋ ಮೊದಲೇ ಸಖತ್​ ಸುದ್ದಿಯಾಗುತ್ತಿದೆ. ಹೌದು, ಹಿಂದಿ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಒಟಿಟಿ ಸೀಸನ್​ 3 ಜೂನ್ 21ರಿಂದ ಶುರುವಾಗಲಿದೆ. ಇನ್ನು, ದಿನ ಕಳೆದಂತೆ ಜನತೆಗೆ ಬಿಗ್​ಬಾಸ್ ಮೇಲಿನ ಕುತೂಹಲ ಹೆಚ್ಚಾಗುತ್ತಿದೆ. ಅದರಲ್ಲೂ ಹಿಂದಿ ಬಿಗ್​ಬಾಸ್​ ಅಂದ್ರೆ ಒಂದು ಗಮ್ಮತ್ತು.

ಇದನ್ನೂ ಓದಿ: ಕಿವಿ ಕತ್ತರಿಸಿ, ಬೆನ್ನಿನ ಮೇಲೆ ಬಾಸುಂಡೆ.. ನಟ ದರ್ಶನ್‌ ಗ್ಯಾಂಗ್‌ ಕ್ರೂರಾತಿಕ್ರೂರ ಹಲ್ಲೆ; ಪಕ್ಕಾ ಸಾಕ್ಷಿಗಳು ಪತ್ತೆ!

ಸಣ್ಣ ಪುಟ್ಟು ವಿಚಾರಕ್ಕೂ ಹಿಂದಿ ಬಿಗ್​ಬಾಸ್​ ಸುದ್ದಿಯಾಗುತ್ತಲೇ ಇರುತ್ತದೆ. ಈ ಬಾರಿಯ ಬಿಗ್​ಬಾಸ್ ಶುರುವಾಗೋ ಮುನ್ನವೇ ಸಾಕಷ್ಟು ವಿಭಿನ್ನತೆಯನ್ನು ಹೊಂದಿದೆ. ಇನ್ನು, ಒಟಿಟಿ ಸೀಸನ್​ 1ಕ್ಕೆ ನಿರೂಪಕರಾಗಿ ಬಾಲಿವುಡ್ ಇಂಡಸ್ಟ್ರಿಯ ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್ ನೇತೃತ್ವ ವಹಿಸಿಕೊಂಡಿದ್ದರು. ಒಟಿಟಿ ಸೀಸನ್​ 2ಗೆ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಅವರು ನಿರೂಪಕರಾಗಿದ್ದರು. ಈ ಬಾರಿ ಹಿಂದಿ ಬಿಗ್​ಬಾಸ್​ ಒಟಿಟಿ​ ನಿರೂಪಕರಾಗಿ ಅನಿಲ್ ಕಪೂರ್ ನೇತೃತ್ವ ವಹಿಸಲಿದ್ದಾರೆ.

ಆದರೆ ಇದರ ಮಧ್ಯೆ ಬಿಗ್​​ಬಾಸ್​ ಒಟಿಟಿಯ ಮೊದಲ ಪ್ರೋಮೋ ಬಿಡುಗಡೆಯಾಗಿದೆ. ಆ ಪ್ರೋಮೋದಲ್ಲಿ ಕಾಣಿಸಿಕೊಂಡಿರುವ ಸ್ಪರ್ಧಿ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಆಕೆಯೇ ವಡಾಪಾವ್ ಹುಡುಗಿ ಚಂದ್ರಿಕಾ ಗೆರಾ ದೀಕ್ಷಿತ್. ಹೌದು. ಈ ಹೆಸರನ್ನು ನೀವೆಲ್ಲಾ ಕೇಳಿರುತ್ತೀರಾ. ಕೆಲ ತಿಂಗಳ ಹಿಂದೆ ವಡಾ ಪಾವ್ ಹುಡುಗಿ ಚಂದ್ರಿಕಾ ಗೆರಾ ದೀಕ್ಷಿತ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಫೇಮಸ್ ಆಗಿದ್ದಳು. ಈಕೆ ರಸ್ತೆ ಬದಿ ಮಾಡಿದ ವಡಾ ಪಾವ್ ಅನ್ನು ತಿನ್ನಲು ದೂರದಿಂದಲೂ ಜನರ ಬರುತ್ತಾರೆ. ದೆಹಲಿಯ ವಡಾ ಪಾವ್ ಹುಡುಗಿ ಎಂದೇ ಖ್ಯಾತಿ ಹೊಂದಿರುವ ಬೀದಿ ಆಹಾರ ಮಾರಾಟ ಮಾಡುವ ಈಕೆ ಇದೀಗ ಬಿಗ್​ಬಾಸ್​ ಒಟಿಟಿ ಸೀಸನ್​ 3ಕ್ಕೆ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಡುತ್ತಿದ್ದಾರೆ.

View this post on Instagram

A post shared by JioCinema (@officialjiocinema)

ಇನ್ನು, ಇದೇ ಫೋಟೋ ನೋಡಿದ ಕೆಲ ನೆಟ್ಟಿಗರು ಈಕೆಯನ್ನು ಏಕೆ ಕರೆಸುತ್ತಿದ್ದೀರಿ, ಈ ಹುಡುಗಿ ಇಂತಹ ದೊಡ್ಡ ವೇದಿಕೆ ಮೇಲೆ ಏನು ಮಾಡುತ್ತಾಳೆ ಅಂತ ಕಾಮೆಂಟ್​ ಮಾಡಿದ್ದಾರೆ. ಇನ್ನೂ ಕೆಲವರು ಈ ವಡಾಪಾವ್ ಹುಡುಗಿ ಬಿಗ್​ಬಾಸ್​ ಮನೆಯಲ್ಲಿ ಏನ್ ಕಮಾಲ್ ಮಾಡುತ್ತಾಳೆ ಅಂತ ನೋಡೋಣ, ಈಕೆ ಫುಲ್​ ಮಸ್ತ್ ಮಜಾ ಮಾಡುತ್ತಾಳೆ ಅಂತ ಕಾಮೆಂಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗ್​ಬಾಸ್ ಮತ್ತೆ ಶುರು; ದೊಡ್ಮನೆಗೆ ಎಂಟ್ರಿ ಕೊಡಲು ಸಜ್ಜಾದ ಮೊದಲ ಸ್ಪರ್ಧಿ ಹೆಸರು ಲೀಕ್‌! ಯಾರದು?

https://newsfirstlive.com/wp-content/uploads/2024/06/bigg-boss-hindi.jpg

Load More