ಆಟೋ ಡ್ರೈವರ್​ಗೆ ಚಪ್ಪಲಿಯಿಂದ ಥಳಿಸಿದ ಹೊರ ರಾಜ್ಯದ ಮಹಿಳೆ; ಪೊಲೀಸರಿಂದ ತೀವ್ರ ವಿಚಾರಣೆ

author-image
Veena Gangani
Updated On
ಆಟೋ ಡ್ರೈವರ್​ಗೆ ಚಪ್ಪಲಿಯಿಂದ ಥಳಿಸಿದ ಹೊರ ರಾಜ್ಯದ ಮಹಿಳೆ; ಪೊಲೀಸರಿಂದ ತೀವ್ರ ವಿಚಾರಣೆ
Advertisment
  • ಬೆಂಗಳೂರಲ್ಲಿ ಆಟೋ ಚಾಲಕನ ಮೇಲೆ ಹಿಂದಿ ಮಹಿಳೆ ಹಲ್ಲೆ
  • ಯುವತಿಯವನ್ನ ಠಾಣೆಗೆ ಕರೆದುಕೊಂಡು ಬಂದ ಪೊಲೀಸರು
  • ಬೆಳ್ಳಂದೂರು ಪೊಲೀಸರ ವಶದಲ್ಲಿರುವ ಹಲ್ಲೆ ಮಾಡಿದ್ದ ಮಹಿಳೆ

ಬೆಂಗಳೂರು: ದಿನೇ ದಿನೇ ಸಿಲಿಕಾನ್​ ಸಿಟಿಯಲ್ಲಿ ಹೊರ ರಾಜ್ಯದ ಅದರಲ್ಲೂ ಹಿಂದಿವಾಲಿಗಳ ಉಪಟಳ ಹೆಚ್ಚುಗುತ್ತಲೇ ಇದೆ. ಈ ಹಿಂದೆ ಎಸ್​ಬಿಐ ಬ್ಯಾಂಕ್ ಮ್ಯಾನೇಜರ್ ಕನ್ನಡ ಮಾತಾಡಲ್ಲ ಅಂತ ದರ್ಪ ತೋರಿದ್ದಳು.

ಇದನ್ನೂ ಓದಿ:ಸ್ಟಾರ್​ ನಟನ ಹೆಂಡತಿಯ ಬ್ಯುಸಿನೆಸ್​ ಐಡಿಯಾ.. ಕೇವಲ ನಿದ್ದೆ ಮಾಡಲು ಲಕ್ಷ ಲಕ್ಷ ಹಣ, ಭಾರೀ ಟೀಕೆ!

ಈಗ ಇದೀಗ ಅಂಥದ್ದೇ ಮತ್ತೊಂದು ಘಟನೆ ನಡೆದಿದ್ದು ಕನ್ನಡಿಗರನ್ನು ಕೆರಳುವಂತೆ ಮಾಡುವಂತೆ ಮಾಡಿದೆ. ಸ್ಕೂಟಿವೊಂದಕ್ಕೆ ಆಟೋ ಟಚ್ ಆಗಿದ್ದಕ್ಕೆ ಹೊರ ರಾಜ್ಯದ ಮಹಿಳೆ ಪನ್ಪೂರಿ ಮಿಶ್ರಾ,(28) ಎಂಬಾಕೆ ಚಾಲಕನಿಗೆ ಚಪ್ಪಲಿಯಿಂದ ಥಳಿಸಿ ಅಸಭ್ಯವಾಗಿ ವರ್ತಿಸಿದ್ದಳು. ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಹಿಳೆಯ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

publive-image

ಬೆಂಗಳೂರಿನ ಬೆಳ್ಳಂದೂರು ವೃತ್ತದಲ್ಲಿ ಈ ಘಟನೆ ನಡೆದಿತ್ತು. ಟ್ರಾಫಿಕ್​ನಲ್ಲಿ ಸ್ಕೂಟಿಗೆ ಹಿಂಬದಿಯಿಂದ ಆಟೋ ಟಚ್ ಆಗುತ್ತಿದ್ದಂತೆ ಚಾಲಕ ಮತ್ತು ಮಹಿಳೆ ನಡುವೆ ಗಲಾಟೆ ಶುರುವಾಗಿದೆ. ಈ ವೇಳೆ ಇಬ್ಬರ ನಡುವೆ ಜಗಳ ಅತಿರೇಕಕ್ಕೆ ತಿರುಗಿದ್ದು ಮಾತಿಗೆ ಮಾತು ಬೆಳೆದು ಆಟೋ ಚಾಲಕನಿಗೆ ಮಹಿಳೆ ಚಪ್ಪಲಿಯಿಂದ ಹೊಡೆದಿದ್ದಾಳೆ.


">May 31, 2025


ಆಟೋ ಚಾಲಕ ಮೇಲೆ ಹಲ್ಲೆ ಬಗ್ಗೆ ಸಂಜೆ ನ್ಯೂಸ್ ಫಸ್ಟ್​​ನಲ್ಲಿ ವರದಿ ಬಿತ್ತರಿಸಿದ ಬೆನ್ನಲ್ಲೇ ರಾತ್ರಿ ವೇಳೆ ಮಹಿಳೆ ವಿರುದ್ಧ FIR ದಾಖಲಾಗಿತ್ತು. ಈಗ ಮಹಿಳೆಯನ್ನ ಪೊಲೀಸರು ಠಾಣೆಗೆ ಕರೆದುಕೊಂಡು‌ ಬಂದು ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ, ಮಹಿಳೆ ಪನ್ಪೂರಿ ಮಿಶ್ರಾ, ಬಿಹಾರ ಮೂಲದ ಮಹಿಳೆ ಬೆಂಗಳೂರಿನಲ್ಲಿ ಪತಿಯೊಂದಿಗೆ ವಾಸವಾಗಿದ್ದಾಳೆ. ಗರ್ಭಿಣಿ ಆಗಿರುವ ಮಹಿಳೆ ಆಸ್ಪತ್ರೆಗೆ ತೆರಳಿ ಬರುತ್ತಿದ್ದಳು. ಈ ವೇಳೆ ಮಹಿಳೆಯ ದ್ವಿ ಚಕ್ರ ವಾಹನಕ್ಕೆ ಹಿಂದಿನಿಂದ ಆಟೋ ಡಿಕ್ಕಿಯಾಗಿತ್ತು. ಇದನ್ನ ಪ್ರಶ್ನಿಸಿದ್ದಕ್ಕೆ ಆಟೋ ಡ್ರೈವರ್ ಬೈದೆ. ಈ ವೇಳೆ ಕೋಪಗೊಂಡು ಚಪ್ಪಲಿಯಿಂದ ಹಲ್ಲೆ ಮಾಡಿದ್ದೇನೆ ಅಂತ ಬೆಳ್ಳಂದೂರು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment