BREAKING: ಸುಹಾಸ್ ಶೆಟ್ಟಿ ಪ್ರಕರಣ ಬೇಧಿಸಿದ ಮಂಗಳೂರು ಪೊಲೀಸರು; 8 ಜನರ ಬಂಧನ

author-image
admin
Updated On
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಪ್ರಕರಣದ ತನಿಖೆ NIA ಹೆಗಲಿಗೆ; ಕೇಂದ್ರ ಗೃಹ‌ ಇಲಾಖೆ ಮಹತ್ವದ ಆದೇಶ
Advertisment
  • ಹಿಂದೂ ಕಾರ್ಯಕರ್ತ, ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಕೇಸ್‌
  • ಮಂಗಳೂರಿಗೆ ಭೇಟಿ ಕೊಟ್ಟ ಗೃಹ ಸಚಿವ ಡಾ.ಜಿ ಪರಮೇಶ್ವರ್ ಸಭೆ
  • ಯಾವುದೇ ಸಮುದಾಯ ಆಗಲಿ ಕಾನೂನು ಉಲ್ಲಂಘನೆ ಮಾಡಲು ಬಿಡಲ್ಲ

ಮಂಗಳೂರು: ಹಿಂದೂ ಕಾರ್ಯಕರ್ತ, ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ 8 ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಮಂಗಳೂರಿಗೆ ಭೇಟಿ ಕೊಟ್ಟ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಪೊಲೀಸ್ ಅಧಿಕಾರಿಗಳ ಜೊತೆ ಉನ್ನತ ಮಟ್ಟದ ಸಭೆ ನಡೆಸಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಡಾ.ಜಿ ಪರಮೇಶ್ವರ್ ಅವರು ಮಂಗಳೂರು ಪೊಲೀಸರು ಸುಹಾಸ್ ಹತ್ಯೆ ಪ್ರಕರಣವನ್ನು ಬೇಧಿಸಿದ್ದಾರೆ.

ಬಂಧಿತರು ಯಾರು?
ಅಬ್ದುಲ್ ಸಫ್ವಾನ್, ನಿಯಾಜ್, ಮೊಹಮ್ಮದ್ ಮುಝಮಿಲ್, ಕಲಂದರ್ ಶಾಫಿ, ರಂಜಿತ್, ನಾಗರಾಜ್, ಮೊಹಮ್ಮದ್ ರಿಜ್ವಾನ್, ಆದಿಲ್.

publive-image

ದ್ವೇಷದ ಕಿಚ್ಚು ದಕ್ಷಿಣ ಕನ್ನಡ, ಉಡುಪಿಗೆ ಮತ್ತೆ ಮರುಕಳಿಸಿದೆ ಎನ್ನುವ ಭಾವನೆ ಬಂದಿರಬಹುದು. ಜನ ಸಮುದಾಯ ಇಂತಹ ಘಟನೆ ಇಷ್ಟ ಪಡೋದಿಲ್ಲ. ಪೊಲೀಸ್ ಇಲಾಖೆ ಹಾಗೂ ಸರ್ಕಾರ ಶಾಂತಿಯಿಂದ ಇರಬೇಕು ಅಂತ ಬಯಸುತ್ತಾರೆ. ಇಲ್ಲಿಯೇ ಕಲಿಬೇಕು ಉದ್ಯೋಗ ಸಿಗಬೇಕು ಅಂತ ಎಲ್ಲಾ ರೀತಿಯ ಕ್ರಮ ಕೈಗೊಂಡಿದ್ದೇವೆ.

ಇದನ್ನೂ ಓದಿ: ಸುಹಾಸ್ ಶೆಟ್ಟಿ ಪ್ರಕರಣಕ್ಕೆ ಮಹತ್ವದ ತಿರುವು.. ಪ್ರತೀಕಾರದ ಮಾಸ್ಟರ್ ಮೈಂಡ್ ಹೆಸರು ರಿವೀಲ್..! 

ಈ ಘಟನೆ ಹಾಗೂ ನಾಲ್ಕು ದಿನ ಹಿಂದಿನ ಅಶ್ರಫ್ ಕೊಲೆ ಮತ್ತೆ ಕೋಮು ಸೌಹಾರ್ದಕ್ಕೆ ಸವಾಲಾಗಿದೆ ನಿಂತಿದೆ. ಅಶ್ರಫ್ ಕೇಸ್‌ನಲ್ಲಿ 21 ಮಂದಿ ಅರೆಸ್ಟ್ ಆಗಿದೆ. ಯಾವುದೇ ಕಾರಣಕ್ಕೂ ಜಿಲ್ಲೆಯಲ್ಲಿ ಶಾಂತಿ ಹಾಳು ಮಾಡುವ ದುಷ್ಟ ಶಕ್ತಿಗೆ ಬಿಡೋದಿಲ್ಲ.

publive-image

ಯಾವುದೇ ಸಮುದಾಯದವರಾಗಲಿ ಕಾನೂನು ಉಲ್ಲಂಘನೆ ಮಾಡಲು ಬಿಡಲ್ಲ. ದುಷ್ಟ ಶಕ್ತಿಗಳನ್ನ ಹತ್ತಿಕ್ಕುವ ಕ್ರಮ ತೆಗೆದುಕೊಳ್ಳುತ್ತೇವೆ. ನಮ್ಮ ಉದ್ದೇಶ ಈ ಭಾಗ ಶಾಂತಿಯಿಂದ ಇರಬೇಕು. ಹಿಂದೆ ನಮ್ಮ ಪಕ್ಷದಿಂದ ಶಾಂತಿ ಸೌಹಾರ್ಧ ಪಾದಯಾತ್ರೆ ಮಾಡಿದ್ದೆವು. ಈಗ ಮತ್ತೆ ಈ ರೀತಿಯ ಘಟನೆ ನಡೆದಿದೆ. ಇದರ ಹಿಂದೆ ಅನೇಕ ಶಕ್ತಿಗಳು ಇದೆ ಅದನ್ನು ಹುಟ್ಟಡಗಿಸುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment