ಹಿಂದೂಗಳ ಹಕ್ಕಿಗಾಗಿ ಹೋರಾಟ ಮಾಡಿದ್ದೇ ತಪ್ಪಾಯ್ತಾ? ಬಾಂಗ್ಲಾದೇಶದಲ್ಲಿ ಸ್ವಾಮಿ ಚಿನ್ಮೋಯ್​ ಬಂಧನ!

author-image
Gopal Kulkarni
Updated On
ISKCON ನಿಷೇಧಕ್ಕೆ ನಿರ್ಧಾರ..! ಬಾಂಗ್ಲಾದೇಶದಲ್ಲಿ ಮುಂದುವರಿದ ದಬ್ಬಾಳಿಕೆ.. ಖಂಡಿಸಿದ ಭಾರತ!
Advertisment
  • ಬಾಂಗ್ಲಾದಲ್ಲಿ ಹಿಂದೂ ಸನ್ಯಾಸಿ ಚಿನ್ಮೋಯ್​ ಕೃಷ್ಣದಾಸ್ ಬ್ರಹ್ಮಚಾರಿ ಬಂಧನ!
  • ಅಲ್ಪಸಂಖ್ಯಾತರಿಗೆ ಸಂರಕ್ಷಣೆ ಬೇಕು ಆಗ್ರಹಿಸಿ ಪ್ರತಿಭಟನೆ ಮಾಡಿದ್ದಕ್ಕೆ ಅರೆಸ್ಟ್​!
  • ಢಾಕಾ ಏರ್​ಪೋರ್ಟ್​ನಲ್ಲಿ ಚಿನ್ಮೋಯ್​ ಕೃಷ್ಣದಾಸ್​ ಪೊಲೀಸರಿಂದ ಬಂಧನ

ಬಾಂಗ್ಲಾದೇಶದ ಹಿಂದೂ ಸನ್ಯಾಸಿ ಹಾಗೂ ಅಲ್ಪಸಂಖ್ಯಾತ ಸಮುದಾಯದ ಮುಖಂಡ ಸ್ವಾಮಿ ಚಿನ್ಮೋಯ್​ ಕೃಷ್ಣದಾಸ್ ಬ್ರಹ್ಮಚಾರಿ ಅವರ ಬಂಧನವಾಗಿದೆ. ಶೇಖ್ ಹಸೀನಾ ಬಾಂಗ್ಲಾದೇಶದಿಂದ ನಿರ್ಗಮಿಸಿದ ಬಳಿಕ ದೊಡ್ಡ ಮಟ್ಟದ ಹಿಂಸಾಚಾರ ನಡೆದಿತ್ತು. ಈ ವೇಳೆ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಚಿನ್ಮೋಯ್ ಅವರು ಹೋರಾಟ ಮಾಡಿದ್ದರು ಇದೇ ಕಾರಣವಿಟ್ಟುಕೊಂಡು ಈಗ ಚಿನ್ಮೋಯ್ ಕೃಷ್ಣದಾಸ್ ಬ್ರಹ್ಮಚಾರಿ ಅವರನ್ನು ಬಂಧಿಸಲಾಗಿದೆ.

ಢಾಕಾದಿಂದ 300 ಕಿಲೋ ಮೀಟರ್ ದೂರದ ರಂಗಪುರ್​ನಲ್ಲಿ ಹಿಂದೂ ಸಮುದಾಯದಿಂದ ದೊಡ್ಡ ಪ್ರತಿಭಟನೆ ನಡೆದಿತ್ತು. ಬಲಿಷ್ಠವಾದ ಕಾನೂನು ರಕ್ಷಣೆ ಹಿಂದೂ ಸಮುದಾಯಕ್ಕೆ ಬೇಕು ಎಂದು ಆಗ್ರಹಿಸಲಾಗಿತ್ತು. ಇದನ್ನು ನೆಪವಾಗಿಟ್ಟುಕೊಂಡು ಈಗ ಹಿಂದೂ ಸನ್ಯಾಸಿ ಚಿನ್ಮೋಯ್ ಅವರನ್ನು ಬಂಧಿಸಲಾಗಿದೆ.

ಇದನ್ನೂ ಓದಿ:ಹೆಜ್ಬುಲ್ಲಾ ಜೊತೆ ಕದನ ವಿರಾಮಕ್ಕೆ ಮುಂದಾದ ಇಸ್ರೇಲ್.. ಯುದ್ಧ ಮುಗಿಸಿದ್ರಾ ನೆತನ್ಯಾಹು..?

ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಆಕ್ರೋಶ ಹೊರಹಾಕಿರುವ ಇಸ್ಕಾನ್​ನ ವಕ್ತಾರ ರಾಧರ್ಮನ್ ದಾಸ್ ನಾನು ಈಗಷ್ಟೇ ಚಿನ್ಮೋಯ್ ಕೃಷ್ಣದಾಸ್ ಬ್ರಹ್ಮಚಾರಿ ಅವರ ಬಗ್ಗೆ ಶಾಕಿಂಗ್ ಸುದ್ದಿಯನ್ನು ಕೇಳಿದ್ದೇನೆ. ಒಬ್ಬ ಹಿಂದೂ ಸನ್ಯಾಸಿ ಹಾಗೂ ಬಾಂಗ್ಲಾದೇಶದ ಅಲ್ಪಸಂಖ್ಯಾತರ ಮುಖಂಡ ತುಂಬಾ ಕಠಿಣ ಕಾಲದಲ್ಲಿದ್ದಾರೆ. ಢಾಕಾ ಪೊಲೀಸರಿಂದ ಅವರ ಬಂಧನವಾಗಿದೆ. ಅಜ್ಞಾತ ಸ್ಥಳಕ್ಕೆ ಅವರನ್ನನು ಕರೆದುಕೊಂಡು ಹೋಗಿ ಇಡಲಾಗಿದೆ. ದಯವಿಟ್ಟು ಗಮನಿಸಿ ಎಂದು ಪೋಸ್ಟ್ ಮಾಡಿದ್ದಾರೆ.


">November 25, 2024


ಇಷ್ಟೆಲ್ಲಾ ಆದರು ಕೂಡ ಬಾಂಗ್ಲಾದೇಶದ ಯಾವುದೇ ಅಧಿಕಾರಿಗಳು, ಸಚಿವಾಲಯಗಳು ಇಲ್ಲಿಯವರೆಗೂ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಇದೇ ವಾರದಲ್ಲಿ ಢಾಕಾ ಏರ್​ಪೋರ್ಟ್​ನಲ್ಲಿ ಚಿನ್ಮೋಯ್​ ಕೃಷ್ಣದಾಸ್ ಬ್ರಹ್ಮಚಾರಿಯವರನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಆಚೆ ಬರುತ್ತಿದೆ. ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಹೇಳಿಕೆ ನೀಡಿದ್ದಕ್ಕೆ ಕಳೆದ ತಿಂಗಳು ಅವರ ಮೇಲೆ ದೇಶದ್ರೋಹಿ ಕೇಸ್ ದಾಖಲಾಗಿತ್ತು.

ಬಾಂಗ್ಲಾದೇಶದಲ್ಲಿ ಒಟ್ಟು ಶೇಕಡಾ 8 ರಷ್ಟು ಹಿಂದೂ ಅಲ್ಪಸಂಖ್ಯಾತರಿದ್ದಾರೆ. ಶೇಖಾ ಹಸೀನಾ ತಮ್ಮ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶ ಬಿಟ್ಟು ಆಚೆ ಬಂದ ಬಳಿಕ ಬಾಂಗ್ಲಾದೇಶದಲ್ಲಿ ಮಧ್ಯಂತರ ಮಿಲಿಟರಿ ಆಡಳಿತ ಬಂದಿತ್ತು. ಬಳಿಕ ಮೊಹಮ್ಮದ್ ಯೂನಿಸ್ ಪ್ರಧಾನಿಯಾಗಿ ನೇಮಕಾವಾದರು ಅಂದಿನಿಂದಲೂ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿರುವ ಬಗ್ಗೆ ಯೂನಸ್ ಸರ್ಕಾರದ ಮೇಲೆ ಹಲವು ಆರೋಪಗಳನ್ನು ಮಾಡಲಾಗಿತ್ತು.

ಇದನ್ನೂ ಓದಿ:ಭಾರತದ ಚುನಾವಣಾ ಪ್ರಕ್ರಿಯೆ ಹೊಗಳಿದ ಎಲಾನ್ ಮಸ್ಕ್​; ಅಮೆರಿಕಾಗಿಂತ ಇಂಡಿಯಾ ಉತ್ತಮ ಎಂದಿದ್ದೇಕೆ?

ಕೆಲವು ತಿಂಗಳುಗಳ ಹಿಂದೆ ಬಾಂಗ್ಲಾದೇಶದಲ್ಲಿ ಹಿಂದೂ ವ್ಯಾಪಾರ ಕೇಂದ್ರಗಳು, ಮನೆಗಳು ಹಾಗೂ ಮಂದಿರಗಳನ್ನು ಗುರಿಯಾಗಿಟ್ಟುಕೊಂಡು ಹಿಂಸಾಚಾರ ನಡೆಸಿದ್ದರು. ಮಂದಿರ ಮನೆ ಹಾಗೂ ಅಂಗಡಿಗಳನ್ನು ಧ್ವಂಸಗೊಳಿಸಲಾಗಿತ್ತು. ಇದೇ ವಿಚಾರವಾಗಿ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ಕುರಿತು ಆಗ್ರಹಿಸಿದ ನಡೆಸಿದ ಪ್ರತಿಭಟನೆಯಲ್ಲಿ ನಿರತರಾಗಿದ್ದ 19 ಜನರ ಮೇಲೆ ದೇಶದ್ರೋಹದ ಕೇಸ್​ ಹಾಕಿ ಬಂಧಿಸಲಾಗಿತ್ತು. ಈಗ ಚಿನ್ಮೋಯ್ ಕೃಷ್ಣದಾಸ್ ಬ್ರಹ್ಮಚಾರಿಯವರ ಬಂಧನವಾಗಿದೆ


">November 25, 2024

ಈ ಬಗ್ಗೆ ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಕೂಡ ಎಕ್ಸ್ ಖಾತೆಯಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಬಾಂಗ್ಲಾದೇಶದ ಸನಾತನಿಗಳು ಭಯದಲ್ಲಿ ಬದುಕುತ್ತಿದ್ದಾರೆ ಎಂದು ಆಕ್ರೊಶ ಹೊರಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment