newsfirstkannada.com

ಕೊನೆ ಕ್ಷಣದಲ್ಲಿ ಕೈಕೊಟ್ಟ ತಮ್ಮದೇ ಪಕ್ಷದ ಪರಿಷತ್‌ ಸದಸ್ಯರು; ಸಿದ್ದರಾಮಯ್ಯ ಸರ್ಕಾರಕ್ಕೆ ಭಾರೀ ಮುಖಭಂಗ..!

Share :

Published February 24, 2024 at 7:57am

    ದೇವಸ್ಥಾನದ ಒಟ್ಟು ಆದಾಯದಿಂದ ಶೇ.10 ರಷ್ಟು ನಿಧಿ ಸಂಗ್ರಹ

    ಪರಿಷತ್​ನಲ್ಲಿ ವಿಧೇಯಕ ಮಂಡಿಸಿದ್ದ ಸಚಿವ ರಾಮಲಿಂಗಾ ರೆಡ್ಡಿ

    ತನ್ನದೇ ಸದಸ್ಯರ ಹಾಜರಾತಿ ನಿರ್ಲಕ್ಷ್ಯದಿಂದ ವಿಧೇಯಕ ತಿರಸ್ಕೃತ

ಕಳೆದ 2 ದಿನಗಳಿಂದ ಭಾರೀ ಚರ್ಚೆಗೆ ಕಾರಣವಾಗಿದ್ದ ಹಿಂದೂ ಧಾರ್ಮಿಕ ದತ್ತಿ ತಿದ್ದುಪಡಿ ವಿಧೇಯಕ ಪರಿಷತ್ತಿನಲ್ಲಿ ತಿರಸ್ಕೃತಗೊಂಡಿದೆ. ಈ ಮೂಲಕ ಸರ್ಕಾರಕ್ಕೆ ಭಾರೀ ಮುಂಗಭಂಗವಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ.

ತೀವ್ರ ಕುತೂಹಲ ಮೂಡಿಸಿದ್ದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ತಿದ್ದುಪಡಿ ಮಸೂದೆ ಬಿದ್ದೋಗಿದೆ. ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದ ಹಿಂದೂ ಧಾರ್ಮಿಕ ವಿಧೇಯಕ, ಪರಿಷತ್​ನಲ್ಲಿ ತಿರಸ್ಕೃತಗೊಂಡಿದೆ. ಹುಂಡಿ ಹಣಕ್ಕೆ ಸರ್ಕಾರ ಕೈ ಹಾಕಿದೆ ಎಂಬ ವಿವಾದಕ್ಕೆ ಕಾರಣವಾಗಿದ್ದ ಹಿಂದೂ ಧಾರ್ಮಿಕ ದೇವಸ್ಥಾನಗಳ ತಿದ್ದುಪಡಿ ಬಿಲ್​ಗೆ ಭಾರಿ ಹಿನ್ನಡೆಯಾಗಿದೆ.

ಹಿಂದೂ ಧಾರ್ಮಿಕ ದತ್ತಿ ತಿದ್ದುಪಡಿ ತಿರಸ್ಕೃತ

ಹೌದು, ರಾಜ್ಯ ಸರ್ಕಾರಕ್ಕೆ ಭಾರೀ ಮುಖಭಂಗವಾಗಿದೆ.. ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಮೊದಲು ಪರಿಷತ್​ನಲ್ಲಿ ವಿಧೇಯಕ ಮಂಡಿಸಿದ್ರು..

ಪರಿಷತ್​ನಲ್ಲಿ ಸರ್ಕಾರ ಪಲ್ಟಿ!

  • ಒಂದು ಕೋಟಿಗಿಂತ ಹೆಚ್ಚು ಆದಾಯ ಇರುವ ದೇವಸ್ಥಾನಗಳು
  • ದೇವಸ್ಥಾನದ ಒಟ್ಟು ಆದಾಯದಿಂದ ಶೇ.10 ರಷ್ಟು ನಿಧಿ ಸಂಗ್ರಹ
  • ಸರ್ಕಾರ ತನ್ನ ನಿರ್ಧಾರ ಕೈಬಿಡುವಂತೆ ಬಿಜೆಪಿ ಸದಸ್ಯರು ಆಗ್ರಹ
  • ಸೋಮವಾರ ಮತ್ತೆ ಬಿಲ್​​ ಮಂಡನೆ ಪ್ರಸ್ತಾಪವಿಟ್ಟ ಸಚಿವ ರೆಡ್ಡಿ
  • ಇದಕ್ಕೆ ನಿಯಮಗಳಲ್ಲಿ ಅವಕಾಶ ಇಲ್ಲ ಎಂದ ಉಪ ಸಭಾಪತಿ
  • ಪರ್ಯಾಲೋಚನೆಗೆ ತೆಗೆದುಕೊಂಡ ಬಿಲ್​​, ಮತಕ್ಕೆ ಹಾಕಬೇಕು
  • ಸಿಎಂ ಜೊತೆ ಚರ್ಚೆಗೆ ಕಾಲಾವಕಾಶ ಕೇಳಿದ ರಾಮಲಿಂಗಾ ರೆಡ್ಡಿ
  • ಆಡಳಿತ ಪಕ್ಷದ ಸದಸ್ಯರ ಜತೆ ಫಲಪ್ರದವಾಗದ ಸುದೀರ್ಘ ಚರ್ಚೆ
  • ವಿಧೇಯಕವನ್ನ ಧ್ವನಿ ಮತಕ್ಕೆ ಹಾಕಿದ ಸಭಾಪತಿ ಎಂ.ಕೆ.ಪ್ರಾಣೇಶ್
  • ಬಿಜೆಪಿಯ 18 ಸದಸ್ಯರು ಹಾಜರಿದ್ರೆ ಕಾಂಗ್ರೆಸ್ ಕೇವಲ 7 ಸದಸ್ಯರು
  • ತನ್ನದೇ ಸದಸ್ಯರ ಹಾಜರಾತಿ ನಿರ್ಲಕ್ಷ್ಯದಿಂದ ವಿಧೇಯಕ ತಿರಸ್ಕೃತ

ಹೀಗೆ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ವಿಧೇಯಕ ತಿರಸ್ಕೃತ ಆಗುತ್ತಲೇ ಪರಿಷತ್​​ನಲ್ಲಿ ಘೋಷಣೆಗಳು ಮೊಳಗಿದ್ವು. ಬಿಜೆಪಿ ಸದಸ್ಯರು ಜೈ ಶ್ರೀರಾಂ ಘೋಷಣೆ ಕೂಗಿದ್ರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್​ ಸದಸ್ಯರು ಜೈ ಭೀಮ್​ ಅಂತ ಘೋಷಣೆ ಮೊಳಗಿಸಿದ್ರು.

ಆದ್ರೆ, ಸರ್ಕಾರದ ಈ ತಿದ್ದುಪಡಿಗೆ ನಾವು ಸ್ವಾಗತಿಸುತ್ತೇವೆ ಅಂತ ರಾಜ್ಯ ಅರ್ಚಕರ ಸಂಘದ ಅಧ್ಯಕ್ಷ ಶ್ರೀವತ್ಸ ಹೇಳಿದ್ದಾರೆ. ರಾಮಲಿಂಗಾ ರೆಡ್ಡಿ ಬಂದ ಮೇಲೆ ಸಿ- ವರ್ಗದ ದೇವಸ್ಥಾನದ ಅರ್ಚಕರಿಗೆ ಅನುಕೂಲ‌ ಆಗಿದೆ. ಹುಂಡಿ ಹಣ ಚರ್ಚ್ ಮಸೀದಿಗೆ ಹೋಗ್ತಿಲ್ಲ ಅಂತ ತಿಳಿಸಿದ್ದಾರೆ.

ಕಾಂಗ್ರೆಸ್​ನ ಆತುರ ಮತ್ತು ಸದಸ್ಯರ ನಿರ್ಲಕ್ಷ್ಯದಿಂದ ಸರ್ಕಾರಕ್ಕೆ ಮುಜುಗರವಾಗಿದೆ. ಈ ತಿದ್ದುಪಡಿ ಮಸೂದೆ ಮುಂದಿನ ಅಧಿವೇಶನದಲ್ಲೇ ಮತ್ತೆ ಮರು ಮಂಡನೆಗೆ ಚಿಂತನೆ ನಡೆಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊನೆ ಕ್ಷಣದಲ್ಲಿ ಕೈಕೊಟ್ಟ ತಮ್ಮದೇ ಪಕ್ಷದ ಪರಿಷತ್‌ ಸದಸ್ಯರು; ಸಿದ್ದರಾಮಯ್ಯ ಸರ್ಕಾರಕ್ಕೆ ಭಾರೀ ಮುಖಭಂಗ..!

https://newsfirstlive.com/wp-content/uploads/2024/02/SIDDARAMAIH.jpg

Load More