newsfirstkannada.com

ದೇಗುಲದಲ್ಲಿ 1 ಕೋಟಿ ಆದಾಯವಿದ್ರೆ ಸರ್ಕಾರಕ್ಕೆ 10 ಲಕ್ಷ; ಬಿಜೆಪಿಯಿಂದ ಭಾರೀ ವಿರೋಧ

Share :

Published February 22, 2024 at 11:57am

Update February 22, 2024 at 11:59am

    ದೇವಾಲಯಗಳ ಆದಾಯದಲ್ಲಿ 10% ಕಮೀಷನ್ ಎಂದ ಅಶೋಕ್

    ವಿಧಾನಸೌಧದಲ್ಲಿ ಹುಂಡಿ ನಿರ್ಮಾಣ ಮಾಡಿ ಅಂದು ಬಿವೈ ವಿಜಯೇಂದ್ರ

    ಕಡ್ಲೆ ಪುರಿ ತಿನ್ನುತ್ತಿದ್ರಾ? ಎಂದು ಬಿಜೆಪಿಗೆ ಕೌಂಟರ್ ಕೊಟ್ಟ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಲೂಟಿಕೋರ ಕಾಂಗ್ರೆಸ್​ ಸರ್ಕಾರದ ವಕ್ರದೃಷ್ಟಿ ಈಗ ಹಿಂದೂ ದೇವಾಲಯಗಳ ಹುಂಡಿಯ ಮೇಲೂ ಬಿದ್ದಿದ್ದು, ದೇವಾಲಯಗಳ ಆದಾಯದಲ್ಲಿ 10% ಕಮೀಷನ್ ಪಡೆಯಲು ಮುಂದಾಗಿದೆ ಎಂದು ವಿಪಕ್ಷ ನಾಯಕ ಆರ್​.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ದೇವಸ್ಥಾನ ಕಾಲಕಾಲಕ್ಕೆ ಜೀರ್ಣೋದ್ಧಾರವಾಗಲಿ, ಉತ್ಸವ, ಜಾತ್ರೆಗಳು ವಿಜೃಂಭಣೆಯಿಂದ ನಡೆಯಲಿ, ಭಕ್ತರ ಅನ್ನ ದಾಸೋಹಕ್ಕೆ, ವಸತಿ ನಿಲಯಗಳಿಗೆ ಅನುಕೂಲವಾಗಲಿ ಎಂದು ಭಕ್ತರು ನೀಡುವ ಕಾಣಿಕೆಯ ಹುಂಡಿಗೂ ಕನ್ನ ಹಾಕುತ್ತಿದ್ದೀರಲ್ಲ ಸಿಎಂ ಸಿದ್ದರಾಮಯ್ಯ ಅವರೇ ನಿಮಗೆ ಹಿಂದೂಗಳ ಮೇಲೆ, ಹಿಂದೂ ದೇವಸ್ಥಾನಗಳ ಮೇಲೆ ಯಾಕಿಷ್ಟು ದ್ವೇಷ? ಎಂದು ಅಶೋಕ್ ಪ್ರಶ್ನೆ ಮಾಡಿದ್ದಾರೆ.

ವಿಧಾನಸೌಧದಲ್ಲೇ ಹುಂಡಿ ಮಾಡಿ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ.. ಸರ್ಕಾರಿ ನೌಕರರಿಗೂ ಸಂಬಳ ಕೊಡಲು ಕಷ್ಟವಾಗುವ ಸ್ಥಿತಿ ಬಂದಿದೆ. ಶ್ರೀಮಂತ ದೇವಾಲಯಕ್ಕೆ ಸರ್ಕಾರ ಕನ್ನ ಹಾಕಲು ಮುಂದಾಗಿದೆ. ದೇವಾಲಯಕ್ಕೆ ಕನ್ನ ಹಾಕುವ ಬದಲು ವಿಧಾನಸೌಧದ ಮುಂದೆ ಒಂದು ಹುಂಡಿ ಇಟ್ಟು ಬಿಡಿ. ದಾನಿಗಳು ಅಲ್ಲೆ ಬಂದು ದಾನ ಮಾಡುತ್ತಾರೆ. 224 ಕ್ಷೇತ್ರಕ್ಕೆ ಒಂದೇ ಒಂದು ರೂಪಾಯಿ ಅನುದಾನ ಸರ್ಕಾರ ಕೊಡುತ್ತಿಲ್ಲ. ರಾಜ್ಯದ ಹಣೆಬರಹ ಏನಾಗುತ್ತಿದೆ ನೋಡಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಸರ್ಕಾರದ ಪರ ವಿಧಾನಸೌಧದಲ್ಲಿ ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ.. ಯಾವುದೇ ಕಾಯ್ದೆ ಇದ್ದರೂ ವಿಧಾನಸಭೆಯಲ್ಲಿ ತೀರ್ಮಾನ ಆಗೋದು. ನಿನ್ನೆ ಯಾಕೆ ವಿರೋಧ ಮಾಡಲಿಲ್ಲ? ಇವರು ಕಡ್ಲೆ ಪುರಿ ತಿನ್ನುತ್ತಿದ್ರಾ? ಅಂಜನಾದ್ರಿ ಬೆಟ್ಟಕ್ಕೆ 100 ಕೋಟಿ ಅನುದಾನ ಕೊಡುತ್ತಿದ್ದೇವೆ. ಹನುಮ ಧ್ವಜದ ಬಗ್ಗೆ ಮಾತನಾಡುತ್ತಾರೆ. ನಾನು ಸಮಾಜ‌ ಕಲ್ಯಾಣ ಸಚಿವನಾಗಿದ್ದಾಗ ರಾಮಾಯಣ ಮ್ಯೂಸಿಯಂ ಮಾಡಲು ಭೂಮಿ ಕೊಟ್ಟಿದ್ದೆ. ಬಿಜೆಪಿಯವರು ಯಾಕೆ ಕೊಡಲಿಲ್ಲ? ಎಂದು ಪ್ರಶ್ನೆ ಮಾಡಿದ್ದಾರೆ.

ಏನಿದು ವಿವಾದಿತ ಬಿಲ್..?
ನಿನ್ನೆಯ ವಿಧಾನಸಭೆ ಕಲಾಪದಲ್ಲಿ ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ, ಪೊಲೀಸ್ (ತಿದ್ದುಪಡಿ) ವಿಧೇಯಕ ಸೇರಿ ಹಲವು ವಿಧೇಯಕಗಳ ಮಂಡನೆಯಾಗಿ ಕೆಲವು ಅಂಗೀಕಾರಗೊಂಡಿವೆ. ಅದರಂತೆ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ ವಿಧೇಯಕವನ್ನು (Hindu Religious Institutions and Charitable Endowments Bill) ಮಂಡಿಸಿ ಅಂಗೀಕಾರ ಪಡೆಯಲಾಗಿದೆ.

ನೂತನ ತಿದ್ದುಪಡಿ ಪ್ರಕಾರ, ಇನ್ಮುಂದೆ 1 ಕೋಟಿ ರೂಪಾಯಿಗೂ‌ ಆದಾಯ ಮೀರಿದ ಸರ್ಕಾರಿ ದೇವಸ್ಥಾನಗಳು ಆದಾಯದ ಶೇ.10ರಷ್ಟು ಹಣವನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಬೇಕು. ಒಂದು ದೇವಸ್ಥಾನದ ಆದಾಯ 1 ಕೋಟಿ ರೂಪಾಯಿ ಇದ್ದರೆ ಸರ್ಕಾರಕ್ಕೆ 10 ಲಕ್ಷ ರೂಪಾಯಿ ಕೊಡಬೇಕಿದೆ. ಸಿ ಗ್ರೇಡ್ ದೇಗುಲದ ಅರ್ಚಕರು, ಸಿಬ್ಬಂದಿಗೆ ವಿಮೆ ಸೌಕರ್ಯ ಒದಗಿಸಲು ವಿಧೇಯಕದಲ್ಲಿ ಅವಕಾಶ ನೀಡಲಾಗಿದೆ.

ಅರ್ಚಕರು, ದೇಗುಲ ಸಿಬ್ಬಂದಿ ಮೃತಪಟ್ಟಾಗ ಅವರ ಕುಟುಂಬದವರಿಗೆ 5 ಲಕ್ಷ ರೂಪಾಯಿ ಪರಿಹಾರ ಕೊಡಲಾಗುತ್ತದೆ. ಈ ಮುಂಚೆ ಮೃತಪಟ್ಟರೆ ಅವರ ಕುಟುಂಬದವರಿಗೆ 35 ಸಾವಿರ ರೂಪಾಯಿ ಹಣ ನೀಡಲಾಗುತ್ತಿತ್ತು. ಅರ್ಚಕರು, ದೇಗುಲ ಸಿಬ್ಬಂದಿ ಮಕ್ಕಳ ವಿದ್ಯಾಭ್ಯಾಸಕ್ಕೆ 5 ಸಾವಿರ ರೂ. ನಿಂದ 5೦ ಸಾವಿರ ರೂ. ವರೆಗೆ ಸ್ಕಾಲರ್ ಶಿಪ್ ಕೊಡುವ ಅವಕಾಶವನ್ನು ವಿಧೇಯಕದಲ್ಲಿ ಕಲ್ಪಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೇಗುಲದಲ್ಲಿ 1 ಕೋಟಿ ಆದಾಯವಿದ್ರೆ ಸರ್ಕಾರಕ್ಕೆ 10 ಲಕ್ಷ; ಬಿಜೆಪಿಯಿಂದ ಭಾರೀ ವಿರೋಧ

https://newsfirstlive.com/wp-content/uploads/2024/02/RAMALINGA-REDDY-1.jpg

Load More