newsfirstkannada.com

ಕಾಶಿಯ ಜ್ಞಾನವಾಪಿ ಮಸೀದಿ ಕೇಸ್‌ನಲ್ಲಿ ಹಿಂದೂಗಳಿಗೆ ಮತ್ತೆ ಜಯ; ಹೈಕೋರ್ಟ್ ಮಹತ್ವದ ಆದೇಶ

Share :

Published February 2, 2024 at 5:59pm

    ಹಿಂದೂಗಳಿಗೆ ಅಲಹಾಬಾದ್‌ ಹೈಕೋರ್ಟ್​ನಲ್ಲೂ ಪ್ರಾಥಮಿಕ ಜಯ

    ಇಂತೇಜಮಿಯಾ ಮಸೀದಿ ಪರ ವಕೀಲರು ಸಲ್ಲಿಸಿದ್ದ ಅರ್ಜಿ

    31 ವರ್ಷಗಳ ಬಳಿಕ ಮಹದೇವನ ದರ್ಶನ ಪಡೆಯುತ್ತಿರುವ ಭಕ್ತರು

ವಾರಾಣಸಿ: ಜ್ಞಾನವಾಪಿ ಮಸೀದಿಯ ವಿವಾದಿತ ಜಾಗದಲ್ಲಿ ಪೂಜೆಗೆ ಅವಕಾಶ ಕೊಟ್ಟ ಬಳಿಕ ಹಿಂದೂಗಳಿಗೆ ಮತ್ತೊಂದು ಜಯ ಸಿಕ್ಕಿದೆ. ಮಸೀದಿಯಲ್ಲಿ ಹಿಂದೂಗಳ ಪೂಜೆಗೆ ತಡೆಯಾಜ್ಞೆ ಕೋರಿ ಮಸೀದಿ ಪರ ವಕೀಲರು ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಮುಸ್ಲಿಂ ಕಮಿಟಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಜ್ಞಾನವಾಪಿ ಮಸೀದಿಯಲ್ಲಿ ಪೂಜೆ ಸಲ್ಲಿಸಲು ಹಿಂದೂಗಳಿಗೆ ಜಿಲ್ಲಾ ನ್ಯಾಯಾಲಯ ಅನುಮತಿ ನೀಡಿತ್ತು. ಇದನ್ನು ಪ್ರಶ್ನಿಸಿ ಇಂತೇಜಮಿಯಾ ಮಸೀದಿ ಪರ ವಕೀಲರು ಅಲಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಹೈಕೋರ್ಟ್ ಮಸೀದಿಯಲ್ಲಿ ಪೂಜೆಗೆ ತಡೆಯಾಜ್ಞೆ ಇಲ್ಲ ಎಂದಿದೆ. ಈ ಮೂಲಕ ಹಿಂದೂಗಳಿಗೆ ಹೈಕೋರ್ಟ್​ನಲ್ಲೂ ಪ್ರಾಥಮಿಕ ಜಯ ಸಿಕ್ಕಿದೆ.

ಇದನ್ನೂ ಓದಿ: BREAKING: ಅಯೋಧ್ಯೆ ಬೆನ್ನಲ್ಲೇ ಜ್ಞಾನವಾಪಿ ಮಸೀದಿ ಕೇಸಲ್ಲೂ ಹಿಂದೂಗಳಿಗೆ ಜಯ; ಪೂಜೆಗೆ ಅವಕಾಶ

ಕಳೆದ 2 ದಿನದ ಹಿಂದಷ್ಟೇ ಬಿಗಿ ಭದ್ರತೆಯಲ್ಲಿ ಹಿಂದೂಗಳು ಜ್ಞಾನವಾಪಿ ಮಸೀದಿಯಲ್ಲಿ ಪೂಜೆ ಸಲ್ಲಿಸಿದ್ದರು. 31 ವರ್ಷಗಳ ಬಳಿಕ ಮಹದೇವನ ದರ್ಶನ ಪಡೆದ ಭಕ್ತರು ಧನ್ಯರಾಗಿದ್ದರು. ಮಸೀದಿಯಲ್ಲಿ ಪೂಜೆ ಶುರುವಾದ ಬಳಿಕ ಜ್ಞಾನವಾಪಿ ಮಸೀದಿಯಲ್ಲಿ ಮುಸ್ಲಿಂ ಸಮುದಾಯ ಇಂದು ನಮಾಜ್ ಕೂಡ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಶಿಯ ಜ್ಞಾನವಾಪಿ ಮಸೀದಿ ಕೇಸ್‌ನಲ್ಲಿ ಹಿಂದೂಗಳಿಗೆ ಮತ್ತೆ ಜಯ; ಹೈಕೋರ್ಟ್ ಮಹತ್ವದ ಆದೇಶ

https://newsfirstlive.com/wp-content/uploads/2024/02/Varanasi-Temple.jpg

Load More