newsfirstkannada.com

ಸಾವಿನ ಮನೆಗಳೇ ಈತನ ಟಾರ್ಗೆಟ್​​.. 23 ವರ್ಷದ ಕಳ್ಳನ ಬಳಿ ಸಿಕ್ತು 36 ಲಕ್ಷ ಮೌಲ್ಯದ ವಸ್ತುಗಳು!

Share :

Published January 25, 2024 at 9:20am

    ಶೋಕಿಗಾಗಿ ಕಳ್ಳತನಕ್ಕೆ ಇಳಿದಿದ್ದ 23 ವರ್ಷದ ಯುವಕ

    ಸಾವಿನ ಮನೆ, ಮದುವೆ ಮನೆಯೇ ಈತನ ಟಾರ್ಗೆಟ್​

    ಐನಾತಿ ಕಳ್ಳನನ್ನು ಹೆಡೆಮುರಿ ಕಟ್ಟಿದ ಪೊಲೀಸರು

ಮಂಡ್ಯ: ಸಾವಿನ ಮನೆಗಳನ್ನೇ ಟಾರ್ಗೆಟ್​ ಮಾಡುತ್ತಿದ್ದ ಐನಾತಿ ಕಳ್ಳನೊಬ್ಬ ಇದೀಗ ಪೊಲೀಸರ ವಶವಾದ ಘಟನೆ ಸಕ್ಕರೆ ನಾಡು ಮಂಡ್ಯದಲ್ಲಿ ಬೆಳಕಿಗೆ ಬಂದಿದೆ. ಬಂಧಿತನಿಂದ ಒಟ್ಟು 36 ಲಕ್ಷ ಮೌಲ್ಯದ 521 ಗ್ರಾಂ‌ ಚಿನ್ನಾಭರಣ, ಕ್ಯಾಮರಾ ಮತ್ತು ಲೆನ್ಸ್, ಒಂದು ಬೈಕ್, ಒಂದು ಕಾರು ಜಪ್ತಿ ಮಾಡಲಾಗಿದೆ.

ಅರಳಕುಪ್ಪೆಯ ವಿವೇಕ್ ಎಂಬ ಕಳ್ಳನನ್ನು ಅರಕೆರೆ ಠಾಣಾ ಪೊಲೀಸರು ಬಂಧಿಸಿದ್ದಾರೆ. 23 ವಯಸ್ಸಿಗೆ ಹತ್ತಾರು ಸಾವಿನ ಮನೆಯಲ್ಲಿ ಕಳ್ಳತನ ಮಾಡಿರುವ ಈತ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ.

ಕಳ್ಳ ವಿವೇಕ್ ಶೋಕಿಗಾಗಿಯೇ ಕಳ್ಳತನ ಮಾಡುತ್ತಿದ್ದನು. ಕಳ್ಳತನಕ್ಕಾಗಿ ಸಾವಿನ ಮನೆಗಳನ್ನೇ ಟಾರ್ಗೆಟ್​​ ಮಾಡುತ್ತಿದ್ದನು. ಅತ್ತ ಎಲ್ಲರೂ ಅಂತ್ಯ ಸಂಸ್ಕಾರಕ್ಕೆ ತೆರಳಿದ್ರೆ, ಇತ್ತ ಸಾವಿನ ಮನೆಯಲ್ಲಿ ಕೈ ಚಳಕ ತೋರುತ್ತಿದ್ದನು. ಹೀಗಿರುವಾಗ​ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರದ ಶಿವಕುಮಾರ್ ಎಂಬುವವರ ಮನೆ ಕಳ್ಳತನ ಮಾಡಿದ್ದನು. ಬೀರುವಿನಲ್ಲಿದ್ದ 135 ಗ್ರಾಂ ಚಿನ್ನಾಭರಣ ದೋಚಿದ್ದನು. ಈ ಪ್ರಕರಣ ಸಂಬಂಧ ಆತನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ತನ್ನ ಕಳ್ಳತನದ ಹಿಸ್ಟರಿಯನ್ನು ಬಿಚ್ಚಿಟ್ಟಿದ್ದಾನೆ.

ವಿವೇಕ್

ವಿವೇಕ್  ಕಳೆದ ಮೂರು ವರ್ಷದಿಂದಲೂ ಕಳ್ಳತನವನ್ನೆ ಕಾಯಕ ಮಾಡಿಕೊಂಡಿದ್ದನು.ಕೇವಲ 6 ತಿಂಗಳಲ್ಲೆ ಹತ್ತಕ್ಕು ಹೆಚ್ಚು ಕಳ್ಳತನ ಮಾಡಿದ್ದನು. ಪಾಂಡವಪುರ ತಾಲೂಕಿನ ಹಿರಮರಳ್ಳಿ, ಚಿನಕುರಳಿ, ಆರತಿ ಉಕ್ಕಡ, ಹರವು, ಡಾಮಡಹಳ್ಳಿಯ ಸಾವಿನ ಮನೆಗಳಲ್ಲಿ ಕಳ್ಳತನ ಮಾಡಿದ್ದನು. ಸಾವಿನ ಮನೆಗಳ ಜೊತೆಗೆ ಕಲ್ಯಾಣ ಮಂಟಪಗಳು ಈತನ ಟಾರ್ಗೆಟ್ ಆಗಿತ್ತು. ಬಳಿಕ ಕದ್ದ ಚಿನ್ನಾಭರಣ ಅಡವಿಟ್ಟು ಮೋಜು-ಮಸ್ತಿ ಮಾಡುತ್ತಿದ್ದನು. ಆದರೀಗ ವಿವೇಕ್​ ಪೊಲೀಸರ ವಶವಾಗಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಾವಿನ ಮನೆಗಳೇ ಈತನ ಟಾರ್ಗೆಟ್​​.. 23 ವರ್ಷದ ಕಳ್ಳನ ಬಳಿ ಸಿಕ್ತು 36 ಲಕ್ಷ ಮೌಲ್ಯದ ವಸ್ತುಗಳು!

https://newsfirstlive.com/wp-content/uploads/2024/01/Vivek-1.jpg

Load More