Advertisment

ಇದೇನಾ ನೀರಿಲ್ಲದ ಜೈಲು! ದರ್ಶನ್​​ ಸೇರುವ ಬಳ್ಳಾರಿ ಜೈಲಿನಲ್ಲಿದೆ ಬ್ರಿಟಿಷರ ಕರಿ ನೆರಳ ಛಾಯೆ!

author-image
AS Harshith
Updated On
ಇದೇನಾ ನೀರಿಲ್ಲದ ಜೈಲು! ದರ್ಶನ್​​ ಸೇರುವ ಬಳ್ಳಾರಿ ಜೈಲಿನಲ್ಲಿದೆ ಬ್ರಿಟಿಷರ ಕರಿ ನೆರಳ ಛಾಯೆ!
Advertisment
  • ದರ್ಶನ್​​ ಶಿಫ್ಟ್​​ ಆಗೋ ಜೈಲಿಗಿದೆ 152 ವರ್ಷಗಳ ಇತಿಹಾಸ
  • ಇಲ್ಲಿದೆ ಗಲ್ಲು ಶಿಕ್ಷೆಯ ವ್ಯವಸ್ಥೆ.. ಅಚ್ಚರಿಯಾಗಿದೆ ಇದರ ಹಿಸ್ಟರಿ
  • ಗಾಂಧಿ, ತಿಲಕರು ಭೇಟಿ ನೀಡಿದ ಕತೆಯನ್ನು ಹೇಳುತ್ತಿದೆ ಈ ಜೈಲು

ಸ್ಯಾಂಡಲ್​​ವುಡ್​ ನಟ ದರ್ಶನ್​​ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಸೆಂಟ್ರಲ್​ ಜೈಲಿಗೆ ಶಿಫ್ಟ್​ ಆಗುತ್ತಿದ್ದಾರೆ. ಜೈಲಿನ ಒಳಕ್ಕೆ ಸಿಗರೇಟು ಸೇದುತ್ತಾ ರಾಜಾತಿಥ್ಯದ ಜೊತೆಗೆ ವಿಡಿಯೋ ಕರೆ ಪ್ರಕರಣಕ್ಕೆ ಸಂಬಂಧಿಸಿ ಅವರನ್ನು ಬಳ್ಳಾರಿ ಜೈಲಿಗೆ ಕರೆದೊಯ್ಯುತ್ತಿದ್ದಾರೆ. ಕೋರ್ಟ್​ ಮತ್ತು ಸಿಎಂ ಸೂಚನೆ ಮೇರೆಗೆ ಬೇರೆ ಜೈಲಿಗೆ ಕರೆದೊಯ್ಯುತ್ತಿದ್ದಾರೆ. ಬೆಂಗಳೂರಿನಿಂದ ಸುಮಾರು 326 ಕಿಲೋ ಮೀಟರ್​​ ದೂರದಲ್ಲಿರುವ ಬಳ್ಳಾರಿ ಸೆಂಟ್ರಲ್ ಜೈಲ್ ಅಂಡಮಾನ್ ಜೈಲಿನಷ್ಟೆ ಕಠಿಣವಾಗಿದ್ದು, ಅದರ ಇತಿಹಾಸವೇ ವಿಭಿನ್ನವಾಗಿದೆ. ಈ ಕುರಿತಾಗಿ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

Advertisment

publive-image

ಬಳ್ಳಾರಿ ಜೈಲಿನ ಇತಿಹಾಸ

173 ಎಕರೆ ಪ್ರದೇಶದಲ್ಲಿ ಬಳ್ಳಾರಿ ಸೆಂಟ್ರಲ್ ಜೈಲು ಇದೆ. ಜೈಲ್‌ನ 09 ಬ್ಯಾಕರ್‌ಗಳನ್ನು 19 ಶತಮಾನದಲ್ಲಿ ನಿರ್ಮಾಣ ಮಾಡಲಾಗಿದೆ. ಬೋಯರ್ ಯುದ್ಧ ಹಾಗೂ ವಿಶ್ವ ಯುದ್ಧಗಳ ಖೈದಿಗಳಿಗೂ ಬಳ್ಳಾರಿಯಲ್ಲಿ ಇರಿಸಿ ಶಿಕ್ಷೆ ನೀಡಿರುವುದನ್ನು ಇತಿಹಾಸ ನೆನಪಿಸುತ್ತದೆ.

publive-image

1800 ರಲ್ಲಿ ಬಳ್ಳಾರಿಯನ್ನ ಮದ್ರಾಸ್ ಪ್ರೆಸಿಡೆನ್ಸಿಯೊಂದಿಗೆ ವಿಲೀನ ಮಾಡಲಾಗುತ್ತದೆ. 1872 ರಲ್ಲಿ ಬಳ್ಳಾರಿ ಸೆಂಟ್ರಲ್ ಜೈಲು ಆರಂಭವಾಗತ್ತದೆ. ಬಳಿಕ ಬ್ರಿಟಿಷ್ ಸರ್ಕಾರ ಅಲ್ಲಿಪುರ ಬಯಲು ಜೈಲ್ ಹಾಗೂ ಆರ್ಥರ್ ವೆಲ್ಲಿಸ್ಲಿ TB ಸ್ಯಾನಿಟೋರಿಯಂ ಜೈಲು ಸೇರಿ ಒಟ್ಟು ಮೂರು ಜೈಲು ಆರಂಭ ಮಾಡುತ್ತಾರೆ.

ಬಳ್ಳಾರಿ ಜೈಲಿನಲ್ಲಿದೆ ಗಲ್ಲು ಶಿಕ್ಷೆ ವ್ಯವಸ್ಥೆ 

ಬಳ್ಳಾರಿ ಜೈಲಿನಲ್ಲಿದೆ ಗಲ್ಲು ಶಿಕ್ಷೆ ವ್ಯವಸ್ಥೆ ಇದೆ. ಬ್ರಿಟಿಷ್​​​ ಸರ್ಕಾರದ ವೇಳೆ ಅಲ್ಲಿಪುರ ಬಯಲು ಜೈಲಿನಲ್ಲಿ 1500 ಖೈದಿಗಳಿದ್ದರು. 1500 ಖೈದಿಗೆ 11 ಸಾವಿರ ಪೊಲೀಸ್ ನಿಯೋಜನೆ ಮಾಡಿದ್ದರು. ಇಲ್ಲಿ ಹೋರಾಟಗಾರನ್ನ ಪೊಲೀಸರ ಮಧ್ಯೆ ಬಯಲು ಪ್ರದೇಶದಲ್ಲಿ ಇರಿಸುವ ವ್ಯವಸ್ಥೆಯಿತ್ತು.

Advertisment

publive-image

ಅನೇಕ ಗಣ್ಯರು ಭೇಟಿ ನೀಡಿದ ಸ್ಥಳವಿದು

ಇಂದಿರಾ ಗಾಂಧಿ ತುರ್ತುಸ್ಥಿತಿಯಲ್ಲೂ ಬಳ್ಳಾರಿ ಜೈಲು ಮುಖ್ಯ ಪಾತ್ರ ವಹಿಸದೆ. ಬಳ್ಳಾರಿಗೆ ಜೈಲಿಗೆ ಭೇಟಿ ನೀಡಿದ್ದ ದೇಶದ ಕೆಲವು ಗಣ್ಯರು ಭೇಟಿ ನೀಡಿದ್ದೂ ಇದೆ. 1905 ಬಾಲ ಗಂಗಾಧರ್ ತಿಲಕ್, 1937 ರಲ್ಲಿ ಮೊದಲ ರಾಷ್ಟಪತಿ ರಾಜೇಂದ್ರ ಪ್ರಸಾದ್ ಭೇಟಿ ನೀಡಿದ್ದನ್ನು ನೆನಪಿಸಬೇಕಿದೆ.

publive-image

ಗಾಂಧೀಜಿ ಈ ಜೈಲಿಗೆ ಭೇಟಿ ನೀಡಿದ ಇತಿಹಾಸವಿದೆ

ಮಹಾತ್ಮ ಗಾಂಧೀಜಿಯವರು ಬಳ್ಳಾರಿ ಜೈಲಿಗೆ ಎರಡು ಬಾರಿ ಭೇಟಿ ನೀಡಿದ್ದರು. ಚಕ್ರವರ್ತಿ ರಾಜಗೋಪಾಲಚಾರಿ, ದ್ರಾವಿಡ್ ಚಳುವಳಿ ನೇತಾರ ಅಣ್ಣಾ ದೊರೈ ಬಳ್ಳಾರಿಯಲ್ಲಿ ಜೈಲಿನಲ್ಲಿದ್ದದ್ದು ಇತಿಹಾಸ. 1942 ಎರಡನೇ ವಿಶ್ವ ಯುದ್ಧ ಸಮಯದಲ್ಲಿ ವಿದೇಶಿ ಬಂಧಿಗಳು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಯಿತು. ಅಂದಹಾಗೆಯೇ ಈ ಜೈಲು ಅಂಡಮಾನ್ ಜೈಲಿನಷ್ಟೆ ಕಠಿಣವಾಗಿದೆ. ಇದನ್ನು ನೀರಿಲ್ಲದ ಜೈಲು ಎಂದು ಕರೆಯುವುದುಂಟು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment