/newsfirstlive-kannada/media/post_attachments/wp-content/uploads/2024/06/CHENNAI-ACCIDENT.jpg)
ಹಿಟ್ ಅಂಡ್​​ ರನ್​​ಗೆ ಮತ್ತೊಬ್ಬ ಯುವಕ ಬಲಿಯಾಗಿದ್ದಾನೆ. ಚೆನ್ನೈನ ಫುಟ್​ಪಾತ್​ನಲ್ಲಿ ಮಲಗಿದ್ದ ಯುವಕನ ಮೇಲೆ ಬಿಎಂಡಬ್ಲ್ಯು ಕಾರು ಹರಿದು 24 ವರ್ಷದ ಸೂರ್ಯ ಸಾವನ್ನಪ್ಪಿದ್ದಾನೆ.
ಆಂಧ್ರದ ವೈಎಸ್‌ಆರ್ ಪಕ್ಷದ ರಾಜ್ಯಸಭಾ ಸದಸ್ಯ ಬೀಡಾ ಮಸ್ತಾನ್ ರಾವ್ (Beeda Masthan Rao) ಪುತ್ರಿ ಮಾಧುರಿ ಹಿಟ್​ ಅಂಡ್ ರನ್ ಮಾಡಿರುವ ಆರೋಪ ಹೊತ್ತಿದ್ದಾರೆ. ಫುಟ್​ಪಾತ್​ನಲ್ಲಿ ಮಲಗಿದ್ದ 24 ವರ್ಷದ ಸೂರ್ಯನ ಮೇಲೆ ಕಾರು ಹರಿಸಿ ಮಾಧುರಿ ಸಾಯಿಸಿದ್ದಾರೆ ಎನ್ನಲಾಗಿದೆ.
ಚೆನ್ನೈನ ಬೀಸಂತ್ ನಗರದಲ್ಲಿ ಹಿಟ್ ಅಂಡ್ ರನ್ ಕೇಸ್ ದಾಖಲಾಗಿದೆ. ಅಪಘಾತದ ಬಳಿಕ ಸ್ಥಳದಿಂದ ಆರೋಪಿ ಮಾಧುರಿ ಪರಾರಿಯಾಗಿದ್ದಾರೆ. ಅಪಘಾತ ಬಳಿಕ ಕಾರಿನಲ್ಲಿದ್ದ ಮಾಧುರಿಯ ಸ್ನೇಹಿತೆ ಸ್ಥಳೀಯರ ಜೊತೆಗೆ ವಾಗ್ವಾದ ನಡೆಸಿದ್ದರು. ಬಳಿಕ ಮಾಧರಿ ಹಾಗೂ ಸ್ನೇಹಿತೆ ಇಬ್ಬರೂ ಪರಾರಿಯಾಗಿದ್ದಾರೆ.
ಚೆನ್ನೈನ ಶಾಸ್ತ್ರೀ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಕೊನೆಗೆ ಆರೋಪಿ ಮಾಧುರಿಯನ್ನು ಬಂಧಿಸಿ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಮಾಧುರಿಯ ತಂದೆ ಬೀಡಾ ಮಾಸ್ತನ್ ರಾವ್, 2022 ರಲ್ಲಿ ವೈಎಸ್‌ಆರ್ ಪಕ್ಷದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ