/newsfirstlive-kannada/media/post_attachments/wp-content/uploads/2024/08/Bangalore-Accident-CCTV-2.jpg)
ಬೆಂಗಳೂರಲ್ಲಿ ಮಕ್ಕಳನ್ನು ರಸ್ತೆಗೆ ಆಟ ಆಡಲು ಬಿಡುವ ಮುನ್ನ ಪೋಷಕರು ಸ್ವಲ್ಪ ಎಚ್ಚರದಿಂದ ಇರಬೇಕು. ಯಮವೇಗದಲ್ಲಿ ಬರುವ ಬೈಕ್​ಗಳು ನಿಮ್ಮ ಮಗುವನ್ನು ಸಾವಿನ ದವಡೆಗೆ ತಳ್ಳಬಲ್ಲದು. ಪಡ್ಡೆ ಹುಡುಗರು ಬಿಸಿರಕ್ತದ ಉತ್ಸಾಹದಲ್ಲಿ ಹೇಗೆಂದರೇ ಹಾಗೆ ಬೈಕ್ ಓಡಿಸುತ್ತಿರುತ್ತಾರೆ. ಅದು ನಿಮ್ಮ ಮುದ್ದು ಮಕ್ಕಳಿಗೆ ಅಪಾಯವನ್ನು ತಂದಿಡುವ ಸಾಧ್ಯತೆ ಇದೆ. ಅದಕ್ಕೆ ಸ್ಪಷ್ಟ ಉದಾಹರಣೆಯಂತಿದೆ ತಲಘಟ್ಟಪುರದ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಈ ಘಟನೆ.
/newsfirstlive-kannada/media/post_attachments/wp-content/uploads/2024/08/CHILD-HIT-AND-RUN-BNG.jpg)
View this post on Instagram
ಇದನ್ನೂ ಓದಿ: ಕ್ಲಾಸ್​ಮೇಟ್‌ಗಳಿಂದ ಅಶ್ಲೀಲ ಮೆಸೇಜ್.. ಬೆಂಗಳೂರಲ್ಲಿ ವಿವಾಹಿತ ಮಹಿಳೆ ಸಾವಿಗೆ ಶರಣು; ಆಗಿದ್ದೇನು?
ಕಳೆದ ರಾತ್ರಿ, ಅಂದ್ರೆ ಆಗಸ್ಟ್​ 1 ರ ರಾತ್ರಿ ಸುಮಾರು 8 ಗಂಟೆಯ ವೇಳೆಗೆ ಒಂದು ಭೀಕರ ಘಟನೆ ನಡೆದಿದೆ. ಬನಶಂಕರಿ ಎರಡನೇ ಹಂತದಲ್ಲಿ ರಸ್ತೆಯಲ್ಲಿ ಸೈಕಲ್ ತುಳಿಯುತ್ತಾ ಆಟವಾಡುತ್ತಿದ್ದ ಬಾಲಕನಿಗೆ ಎದುರಿಗೆ ಯಮವೇಗದಲ್ಲಿ ಬಂದ RX 100 ಬೈಕ್​ ಗುದ್ದಿಕೊಂಡು ಹೋಗಿದೆ. ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದ ಬಾಲಕನಿಗೆ ನಂಬರೇ ಇಲ್ಲದ ಆರ್​​ಎಕ್ಸ್​ 100 ಬೈಕ್​ನಲ್ಲಿ ಬಂದ ಆಗಂತುಕ ಮಗುವಿಗೆ ಗುದ್ದಿಕೊಂಡು ಓಡಿ ಹೋಗಿದ್ದಾನೆ. ಈ ಹಿಟ್​ ರನ್ ವಿಡಿಯೋ ಎಂಥವರನ್ನು ಕೂಡ ಬೆಚ್ಚಿ ಬೀಳಿಸುತ್ತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us