/newsfirstlive-kannada/media/post_attachments/wp-content/uploads/2025/05/hitler-kalyana-actor.jpg)
ಹಿಟ್ಲರ್​ ಕಲ್ಯಾಣ ಧಾರಾವಾಹಿ ವೀಕ್ಷಕರಿಗೆ ಸಖತ್ ಫೇವರಿಟ್​​. ಈ ಸೀರಿಯಲ್​ ಮುಗಿದರೂ ನಟನೆ ಮಾಡಿದ್ದ ಕಲಾವಿದರನ್ನು ಮರೆತ್ತಿಲ್ಲ ವೀಕ್ಷಕರು. ಪ್ರತಿಯೊಬ್ಬರಿಗೂ ಬ್ರೇಕ್​ ಕೊಟ್ಟಂತ ಸ್ಟೋರಿ ಇದು. ಎಷ್ಟೋ ವರ್ಷದಿಂದ ಸಿಗದ ಸಕ್ಸಸ್​, ಜನಪ್ರಿಯತೆ ಈ ಧಾರಾವಾಹಿ ಮೂಲಕ ಕಲಾವಿದರಿಗೆ ಸಿಕ್ಕಿದೆ.
/newsfirstlive-kannada/media/post_attachments/wp-content/uploads/2025/05/hitler-kalyana-actor2.jpg)
ಸದ್ಯ ಹಿಟ್ಲರ್​ ಕಲ್ಯಾಣ ನೆನಪಿಸಿಕೊಳ್ಳೋಕೆ ಕಾರಣ ದೇವ್​ ಪಾತ್ರ ಮಾಡಿದ್ದ ನಟ ಶೌರ್ಯ ಶಶಾಂಕ್​. ಸೀರಿಯಲ್​ ಅರ್ಧ ಜರ್ನಿ ಕಂಪ್ಲೀಟ್​ ಮಾಡಿತ್ತು. ಆಗ ಲೀಲಾಳ ತಂಗಿಯನ್ನ ಬಲೆಗೆ ಹಾಕಿಕೊಂಡು ಎಜೆಯನ್ನ ಮುಗಿಸೋಕೆ ಬಂದಿದ್ದ ಈ ದೇವ್​.
/newsfirstlive-kannada/media/post_attachments/wp-content/uploads/2025/05/hitler-kalyana-actor3.jpg)
ನೆಗಿಟಿವ್​ ಪೊಲೀಸ್​ ಪಾತ್ರ ಮಾಡಿದ್ರು. ಕನ್ನಡ ಸೇರಿದಂತೆ ಶೌರ್ಯ ತಮಿಳು ಕಿರುತೆರೆಯಲ್ಲೂ ಚಿರಪರಿಚಿತರು. ನಟನೆ ಜೊತೆ ಜೊತೆಗೆ ಫೋಟೋಗ್ರಾಫಿ ಕೆಲಸ ಕೂಡ ಮಾಡ್ತಾರೆ. ಇಷ್ಟು ದಿನ ಬೇರೆಯವರ ವೆಡ್ಡಿಂಗ್​ ಫೋಟೋಶೂಟ್​ ಮಾಡುತ್ತಿದ್ದ ಶೌರ್ಯ ಈಗ ತಾವೇ ಫೋಟೋಗೆ ಪೋಸ್​ ಕೊಡೋಕೆ ಸಜ್ಜಾಗಿದ್ದಾರೆ.
/newsfirstlive-kannada/media/post_attachments/wp-content/uploads/2025/05/hitler-kalyana-actor4.jpg)
ಅರ್ಥಾತ್​ ಸದ್ಯದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಬೆಂಗಳೂರಿನ ದಿಶಾ ಜಾಧವ್​ ಎಂಬುವವರ ಜೊತೆ ಶೌರ್ಯ ನಿಶ್ಚಿತಾರ್ಥ ಜರುಗಿದ್ದು, ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ ಜೋಡಿ.
/newsfirstlive-kannada/media/post_attachments/wp-content/uploads/2025/05/hitler-kalyana-actor1.jpg)
ಇನ್ನೂ, ದಿಶಾ ಕೂಡ ಫೋಟೋಗ್ರಾಫಿನ ಇಷ್ಟ ಪಡ್ತಾರೆ. ಶೌರ್ಯ ಕೂಡ ಕ್ಯಾಮೆರಾ ಲವ್ವರ್​. ಇಬ್ಬರ ಹವ್ಯಾಸ, ಗುಣಗಳು ಮ್ಯಾಚ್​ ಆದ್ಮೇಲೆ ಮನಸ್ಸು ಒಂದಾಗೋಕೆ ಟೈಮ್​ ತಗೊಳ್ಳಿಲಿಲ್ಲ. ಕೆಲವೇ ದಿನಗಳಲ್ಲಿ ಜೋಡಿ ವಿವಾಹ ಜರುಗಲಿದೆ. ಈ ವಿಚಾರ ತಿಳಿದ ಕೂಡಲೇ ಅಭಿಮಾನಿಗಳು ಕೂಡ ಮುದ್ದಾದ ಜೋಡಿಗೆ ಶುಭ ಹಾರೈಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us