ಹಾಲ್ ಟಿಕೆಟ್ ಬಿಡುಗಡೆ ಮಾಡಿದ KPSC.. ಅಭ್ಯರ್ಥಿಗಳು ಅರ್ಜಿ ಹಾಕಿದ್ರೆ ಪ್ರವೇಶ ಪತ್ರ ಪಡೆಯಿರಿ

author-image
Bheemappa
Updated On
KPSC ಮಹತ್ವದ ಸೂಚನೆ.. ಪರೀಕ್ಷೆಯಲ್ಲಿ ಇನ್ಮುಂದೆ ಅಭ್ಯರ್ಥಿಗಳು ಇದನ್ನು ಬಳಸುವಂತಿಲ್ಲ, ಏನದು?
Advertisment
  • ಪ್ರವೇಶ ಪತ್ರ ರಿಲೀಸ್ ಮಾಡಿದ ಕರ್ನಾಟಕ ಲೋಕಸೇವಾ ಆಯೋಗ
  • ಉದ್ಯೋಗಗಳಿಗೆ ಅಪ್ಲೇ ಮಾಡಿದವ್ರು ಹಾಲ್​ಟಿಕೆಟ್ ಪಡೆಯಬಹುದು
  • ಹಾಲ್ ಟಿಕೆಟ್​ ಡೌನ್​ಲೋಡ್ ಮಾಡಿಕೊಳ್ಳುವ ಲಿಂಕ್ ಇಲ್ಲಿ ನೀಡಿದೆ

ಹೈದ್ರಾಬಾದ್ ಕರ್ನಾಟಕ ವೃಂದದಲ್ಲಿ ಖಾಲಿ ಇರುವಂತ ವಿವಿಧ ಹುದ್ದೆಗಳ ನೇಮಕಾತಿಗೆ ಈಗಾಗಲೇ ಅರ್ಜಿಗಳನ್ನು ಆಹ್ವಾನ ಮಾಡಲಾಗಿತ್ತು. ಈ ಉದ್ಯೋಗಗಳಿಗೆ ಅರ್ಜಿ ಸಲ್ಲಿಕೆ ಮಾಡಿರುವಂತ ಅಭ್ಯರ್ಥಿಗಳ ಹಾಲ್ ​ಟಿಕೆಟ್​ ಅನ್ನು ಕರ್ನಾಟಕ ಲೋಕಸೇವಾ ಆಯೋಗ ಇದೀಗ ಬಿಡುಗಡೆ ಮಾಡಿದೆ.

ಕರ್ನಾಟಕ ಲೋಕಸೇವಾ ಆಯೋಗದ ಅಧಿಸೂಚನೆ 20 ಸೆಪ್ಟೆಂಬರ್ 2024 ರನ್ವಯ ಹೈದ್ರಾಬಾದ್ ಕರ್ನಾಟಕ ವೃಂದದಲ್ಲಿ ಅಧಿಸೂಚಿಸಿರುವ ವಿವಿಧ ಹುದ್ದೆಗಳ ನೇಮಕಾತಿ ಸಂಬಂಧ, ಇದೀಗ ಪ್ರವೇಶ ಪತ್ರ ಬಿಡುಗಡೆ ಮಾಡಲಾಗಿದೆ. ಹೀಗಾಗಿ ಅರ್ಜಿ ಸಲ್ಲಿಕೆ ಮಾಡಿರುವಂತ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಲು ಪ್ರವೇಶ ಪತ್ರವನ್ನು ಡೌನ್​ಲೋಡ್ ಮಾಡಿಕೊಳ್ಳಬೇಕು.

2024ರ ಮಾರ್ಚ್‌, ಸೆಪ್ಟೆಂಬರ್‌ನಲ್ಲಿ ರಿಲೀಸ್ ಮಾಡಿದ ಅಧಿಸೂಚನೆಗಳ ಸಂಬಂಧ, ಹೆಚ್‌ಕೆ ವೃಂದದ ಗ್ರೂಪ್‌- ಬಿ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ಪರೀಕ್ಷೆ ನಡೆಸುತ್ತಿದೆ.

ಇದನ್ನೂ ಓದಿ:ಪಶುಸಂಗೋಪನಾ ನಿಗಮದಲ್ಲಿ ಉದ್ಯೋಗಗಳು.. 2,152 ಹುದ್ದೆ, SSLC, PUC, ಪದವಿ ಮುಗಿಸಿದ್ರೆ ಅವಕಾಶ

publive-image

20 ಸೆಪ್ಟೆಂಬರ್ 2024 ರ ಅನ್ವಯ ಹೈದ್ರಾಬಾದ್ ಕರ್ನಾಟಕ ವೃಂದದ ಅಧಿಸೂಚಿಸಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿನ ಪತ್ರಾಂಕಿತ ವ್ಯವಸ್ಥಾಪಕರು/ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಹುದ್ದೆಗಳಿಗೆ ಪತ್ರಿಕೆ-2 ನಿರ್ದಿಷ್ಟ ಪತ್ರಿಕೆಯ ಪರೀಕ್ಷೆಯನ್ನು 02 ಮಾರ್ಚ್​ 2025 ರಂದು ನಡೆಸಲಾಗುತ್ತದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ಸಹಾಯಕ ಇಂಜಿನಿಯರ್ (ಸಿವಿಲ್) (ವಿಭಾಗ-1) ಹುದ್ದೆಗಳಿಗೆ ಪತ್ರಿಕೆ-2 ನಿರ್ದಿಷ್ಟ ಪತ್ರಿಕೆಯ ಪರೀಕ್ಷೆಯನ್ನು 04 ಮಾರ್ಚ್​ 2025 ರಂದು ನಡೆಸಲಾಗುತ್ತದೆ.

ಹೀಗಾಗಿ ಈ ಪರೀಕ್ಷೆಗಳ ಪ್ರವೇಶ ಪತ್ರಗಳನ್ನು ಡೌನ್​ಲೋಡ್​ ಮಾಡಿಕೊಳ್ಳಲು ಈಗಾಗಲೇ ಲಿಂಕ್ ಅನ್ನು ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳು ಹಾಲ್​ಟಿಕೆಟ್​ ಅನ್ನು ಡೌನ್​ಲೋಡ್ ಮಾಡಿಕೊಳ್ಳಬಹುದು.

ಡೌನ್​ಲೋಡ್​ಗಾಗಿhttps://kpsconline.karnataka.gov.in/HomePage/index.html

ಮಾಹಿತಿಗಾಗಿ ಲಿಂಕ್-
https://www.kpsc.kar.nic.in/pressnote21-02-2025.pdf

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment