/newsfirstlive-kannada/media/post_attachments/wp-content/uploads/2025/06/HK-PATIL-1.jpg)
ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಹಿರಿಯ ಸಚಿವ ಹೆಚ್ಕೆ ಪಾಟೀಲ್ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಕ್ರಮ ಗಣಿಗಾರಿಕೆ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಸುದೀರ್ಘ 7 ಪುಟಗಳ ಪತ್ರವನ್ನು ಮುಖ್ಯಮಂತ್ರಿಗಳಿಗೆ ಬರೆದಿದ್ದಾರೆ. ಅದರಲ್ಲಿ ಸರ್ಕಾರ ನಿರ್ಲಕ್ಷಿಸುತ್ತಿರುವ ಕೆಲವು ವಿಚಾರಗಳನ್ನು ಸೂಕ್ಷ್ಮವಾಗಿ ಹೇಳಿದ್ದಾರೆ.
ಸಚಿವರು ಬರೆದ ಪತ್ರದಲ್ಲಿ ಏನಿದೆ..?
ಸಿದ್ದರಾಮಯ್ಯ ನೇತೃತ್ವದ ಅಕ್ರಮ ಗಣಿಗಾರಿಕೆ ವಿರುದ್ಧ 2010ರಲ್ಲಿ ಕರ್ನಾಟಕ ಕಾಂಗ್ರೆಸ್ ಬಳ್ಳಾರಿಗೆ ಪಾದಯಾತ್ರೆ ನಡೆಸಿತ್ತು. ಅಂದು ನಡೆದಿದ್ದ 320 ಕಿಲೋ ಮೀಟರ್ ದೂರದ ಪಾದಯಾತ್ರೆಯನ್ನು ನೆನಪಿಸಿ 7 ಪುಟಗಳ ಪತ್ರ ಬರೆದಿರುವ ಪಾಟೀಲ್, ಅಕ್ರಮ ಗಣಿಗಾರಿಕೆ ವಿರುದ್ಧ ನೀವು ವಿರೋಧ ಪಕ್ಷದ ನಾಯಕರಾಗಿದ್ದಾಗ 320 ಕಿಲೋ ಮೀಟರ್ ಪಾದಯಾತ್ರೆ ಮಾಡಿತ್ತು. ತದ ನಂತರ ಕೆಲ ಪ್ರಕರಣಗಳನ್ನ ತನಿಖಾ ಸಂಸ್ಥೆಗಳಿಗೆ ವಹಿಸಲಾಗಿತ್ತು. ಒಂದೆರಡು ಪ್ರಕರಣಗಳಲ್ಲಿ ಕೆಲ ಪ್ರಮುಖ ಅಪರಾಧಿಗಳಿಗೆ ಶಿಕ್ಷೆಯಾಗಿದ್ರೆ, ಅನೇಕ ಪ್ರಕರಣಗಳು ಬಹಳ ವರ್ಷಗಳಾದರೂ ಎಸ್‌ಐಟಿ ವಿಚಾರಣೆ ಹಂತದಲ್ಲೇ ಇವೆ.
ಅಕ್ರಮ ಗಣಿಗಾರಿಕೆಯಲ್ಲಿ 7.6% ಪ್ರಕರಣಗಳು ಮಾತ್ರ ತನಿಖೆಗೆ ಒಳಪಟ್ಟಿವೆ. ಆದರೆ ಶೇಕಡಾ 92 ರಷ್ಟು ಪ್ರಕರಣಗಳು ತನಿಖೆಗೆ ಒಳಪಟ್ಟಿಲ್ಲ. ಅಧಿಕಾರಶಾಹಿಯ ರಾಜ್ಯದ್ರೋಹಿ ಮನೋಭಾವದಿಂದ ಕೆಲ ಪ್ರಕರಣಗಳು ತನಿಖೆ ಆಗಲೇ ಇಲ್ಲ. ಎಸ್‌ಐಟಿಗೆ ವಹಿಸಿದ ಪ್ರಕರಣಗಳಲ್ಲಿ ಪ್ರಗತಿಯೂ ಸಾಧಿಸಲಿಲ್ಲ.
ಇದನ್ನೂ ಓದಿ:ಗುತ್ತಿಗೆ ಆಯ್ತು, ಈಗ ವಸತಿ ಯೋಜನೆಯಲ್ಲೂ ಮುಸ್ಲಿಂ ಮೀಸಲಾತಿ -ಏನಿದು ವಿವಾದ..?
ರಾಜಕಾರಣಿಗಳು, ಅಧಿಕಾರಶಾಹಿಗಳ ಅಕ್ರಮಕೂಟದಲ್ಲಿ ಈ ಹಿಂದೆ ಸಂಪತ್ತು ಲೂಟಿ ಆಗಿತ್ತು. ಇದರಿಂದ 1 ಲಕ್ಷದ 50 ಸಾವಿರ ಕೋಟಿ ರೂಪಾಯಿ ನಷ್ಟ ಸಂಭವಿಸಿತ್ತು. ಇದನ್ನು 2017-18ರಲ್ಲಿ ನನ್ನ ಅಧ್ಯಕ್ಷತೆಯ ಸಂಪುಟ ಉಪಸಮಿತಿ ಬಹಿರಂಗಗೊಳಿಸಿತ್ತು. ಹಾಗಾಗಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ವಸೂಲಿ ಆಯುಕ್ತರನ್ನು ಸರ್ಕಾರ ನೇಮಿಸಬೇಕು. ಪೊಲೀಸ್ ಇಲಾಖೆಯಡಿಯಲ್ಲಿ ಬಲಯುತವಾದ ವಿಶೇಷ ತನಿಖಾ ತಂಡ ರಚಿಸಬೇಕು. ವಿಶೇಷ ನ್ಯಾಯಾಲಯ ಸ್ಥಾಪಿಸಿ ತಪ್ಪಿತಸ್ಥರಿಗೆ ಶೀಘ್ರ ಶಿಕ್ಷೆ ಆಗಬೇಕೆಂದು ಒತ್ತಾಯ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯಗೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ‘ನಾನು ಬಾಯಿ ತೆರೆದ್ರೆ ಸರ್ಕಾರ ಅಲ್ಲಾಡುತ್ತೆ..’ ತಮ್ಮದೇ ಸರ್ಕಾರದ ವಿರುದ್ಧ BR ಪಾಟೀಲ್ ಆಕ್ರೋಶ..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ