/newsfirstlive-kannada/media/post_attachments/wp-content/uploads/2025/01/CHINA_1.jpg)
ಬೆಂಗಳೂರು: ಸದ್ಯ ಚೀನಾವನ್ನೇ ಬೆಚ್ಚಿ ಬೀಳಿಸಿರುವ ಹೆಚ್ಎಂಪಿವಿ (Human metapneumovirus) ವೈರಸ್ ಡ್ರ್ಯಾಗನ್ ರಾಷ್ಟ್ರದಲ್ಲಿ ಆತಂಕ ಸೃಷ್ಟಿದೆ. ಇದರ ಬೆನ್ನಲ್ಲೇ ಬೆಂಗಳೂರಿನಲ್ಲೂ ಈ ವೈರಸ್ ಪತ್ತೆ ಆಗಿದೆ. ಆದರೆ ಇದು ಚೀನಾ ಮಾದರಿಯ ವೈರಸ್ ಹೌದೋ, ಅಲ್ಲವೋ ಎನ್ನುವುದು ಸ್ಪಷ್ಟತೆ ಇಲ್ಲ. ಹೀಗಾಗಿ ಜನರು ಆತಂಕ ಪಡಬೇಕಾಗಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಸಿಲಿಕಾನ್ ಸಿಟಿಯಲ್ಲಿ 8 ತಿಂಗಳ ಮಗುವಿನಲ್ಲಿ ಹೆಚ್ಎಂಪಿವಿ ವೈರಸ್ ಪತ್ತೆ ಆಗಿದೆ. ಜ್ವರ ಬಂದ ಹಿನ್ನೆಲೆಯಲ್ಲಿ ಮಗುವನ್ನು ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲು ಮಾಡಲಾಗಿತ್ತು. ಈ ವೇಳೆ ಚಿಕಿತ್ಸೆಗೆ ಮುಂದಾಗಿದ್ದ ವೈದ್ಯರು, ಮಗುವಿನ ರಕ್ತದ ಮಾದರಿಯನ್ನು ಪರೀಕ್ಷಿಸಿದ್ದಾರೆ. ಈ ವೇಳೆ ಮಗುವಿನ ರಕ್ತದಲ್ಲಿ ಹೆಚ್ಎಂಪಿವಿ ವೈರಸ್ ಪತ್ತೆ ಆಗಿರುವುದು ಗೊತ್ತಾಗಿದೆ.
ಇದನ್ನೂ ಓದಿ:ಡ್ರ್ಯಾಗನ್ ದೇಶದಲ್ಲಿ HMPV ವೈರಸ್ ಆರ್ಭಟ.. ಕೇಂದ್ರ ಸರ್ಕಾರದಿಂದ ಎಚ್ಚರಿಕೆ ಏನು?
ಹೆಚ್ಎಂಪಿವಿ ವೈರಸ್ ಈಗಾಗಲೇ ಭಾರತದಲ್ಲಿ ಇದೆ. ಇದಕ್ಕೆ ಆತಂಕ ಪಡುವ ಅವಶ್ಯಕತೆ ಇಲ್ಲ. ಆದರೆ ಸದ್ಯ ಚೀನಾದಲ್ಲಿ ಆತಂಕ ಸೃಷ್ಠಸಿರುವ ವೈರಸ್ ಈಗ ಮಗುವಿನಲ್ಲಿ ಕಾಣಿಸಿರುವ ವೈರಸ್ ಎರಡು ಒಂದೇನಾ ಅಥವಾ ಬೇರೆ ಬೇರೆನಾ ಎಂಬುದು ಸ್ಪಷ್ಟತೆ ಇಲ್ಲ ಎಂದು ಆರೋಗ್ಯ ಇಲಾಖೆ ಗೊಂದಲ ಸೃಷ್ಟಿದೆ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಇಲಾಖೆ ಹೇಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ