/newsfirstlive-kannada/media/post_attachments/wp-content/uploads/2025/01/CHINA.jpg)
ವೈರಸ್ಗಳ ಮಾತೃ-ಪಿತೃ ಚೀನಾದಲ್ಲಿ ಹೊಸ ವೈರಸ್ HMPV (Human metapneumovirus) ಹಾವಳಿ ಎಬ್ಬಿಸಿದೆ. ಆಸ್ಪತ್ರೆಗಳಲ್ಲಿ ಜನರು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ರೆ ಚೀನಾ ಮಾತ್ರ ಇದು ಸಾಮಾನ್ಯ ಜ್ವರ ಅಂತಿದೆ. ಇತ್ತ ಭಾರತ ಸರ್ಕಾರ ಕೂಡ ಜನರಿಗೆ ಭಯ ಬೇಡ ಅಂತ ಜನರಿಗೆ ಧೈರ್ಯ ನೀಡಿದೆ.
ವೈರಸ್ಗಳ ಪಿತಾಮಹ ಚೀನಾದಲ್ಲಿ HMP ವೈರಸ್ ಅಬ್ಬರಕ್ಕೆ ಅಕ್ಷರಶಃ ತತ್ತರಿಸಿದೆ. ಚೀನಾದ ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿವೆ ಎಂದು ವರದಿಯಾಗಿದೆ. ಅಷ್ಟೇ ಏಕೆ ಹಾಂಕಾಂಗ್, ಜಪಾನ್ ದೇಶಗಳಲ್ಲೂ 8 ಲಕ್ಷಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಇಷ್ಟಾದ್ರೂ ಚೀನಾ ಸರ್ಕಾರ ಮಾತ್ರ ಯಾವುದೇ ಭಯ ಬೇಡ, ನಮ್ಮ ದೇಶಕ್ಕೆ ಸ್ವಾಗತ ಸುಸ್ವಾಗತ ಅಂತ ರತ್ನಗಂಬಳಿ ಹಾಸ್ತಿದೆ.
‘ಚೀನಾಕ್ಕೆ ಪ್ರಯಾಣ ಮಾಡುವುದು ಸುರಕ್ಷಿತ’
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚೀನಾ ವಿದೇಶಾಂಗ ಇಲಾಖೆ ವಕ್ತಾರೆ ಮಾವೋ ನಿಂಗ್, ಉಸಿರಾಟದ ಸಮಸ್ಯೆಯ ಸೋಂಕುಗಳು ಚಳಿಗಾಲದಲ್ಲಿ ಏರಿಕೆಯಾಗುತ್ತೆ. ಚೀನಾ ಸರ್ಕಾರ ದೇಶದ ನಾಗರಿಕರ ಆರೋಗ್ಯದ ಜೊತೆಗೆ ಚೀನಾಕ್ಕೆ ಬರುವ ವಿದೇಶಿಗರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತದೆ. ಹೀಗಾಗಿ ಚೀನಾಕ್ಕೆ ಪ್ರಯಾಣ ಮಾಡುವುದು ಸೇಫ್ ಅಂತ ಹೇಳಿದ್ದಾರೆ.
ವೈರಸ್ ಭೀತಿ ಬೇಡ
- ಚೀನಾದಲ್ಲಿ ವೈರಸ್ ಸ್ಫೋಟ ಸುದ್ದಿ, ಆತಂಕದಲ್ಲಿರುವ ಜಗತ್ತು
- ಇದೆಲ್ಲಾ ಸುಳ್ಳು ವದಂತಿ ಎನ್ನುತ್ತಿರುವ ಚೀನಾದಲ್ಲಿರುವ ಕನ್ನಡಿಗರು
- ಜನ ಆರಾಮಾಗಿದ್ದಾರೆ, ಆಸ್ಪತ್ರೆಗಳು ಭರ್ತಿಯಾಗಿರೋದು ಸುಳ್ಳು
- ಹೊಸ ವೈರಸ್ ಹರಡುವ ಭೀತಿ ಇಲ್ಲಿ ಇಲ್ಲ ಎನ್ನುತ್ತಿರುವ ಕನ್ನಡಿಗರು
- ಜಪಾನ್, ಹಾಂಕಾಂಗ್ನಲ್ಲೂ ಹೆಚ್ಎಂಪಿವಿ ವೈರಸ್ ಹರಡಿಲ್ಲ
- ಚಳಿಗಾಲದಲ್ಲಿ ಬರುವ ಇನ್ಫ್ಲುಯೆಂಜಾ ಕೇಸ್ಗಳು ದಾಖಲು
- HMPV ವೈರಸ್ಗೂ ಇದಕ್ಕೂ ಸಂಬಂಧ ಇಲ್ಲ, ಎರಡೂ ಬೇರೆಬೇರೆ
- ಜಪಾನ್ನ ಟೋಕಿಯೋದಲ್ಲಿ ಯಾವುದೇ ಆತಂಕದ ಸ್ಥಿತಿ ಇಲ್ಲ
- ಜನರು ಮಾಸ್ಕ್ ಧರಿಸುತ್ತಿಲ್ಲ, ಯಾವುದೇ ನಿರ್ಬಂಧಗಳೂ ಇಲ್ಲ
- ಜಪಾನ್ಗಿಂತ ಭಾರತದಲ್ಲೇ ಹೆಚ್ಚು ಇನ್ಫ್ಲುಯೆಂಜಾ ಕೇಸ್ ಇವೆ
ಇದನ್ನೂ ಓದಿ: KSRTC, BMTC ಟಿಕೆಟ್ ದರ ಎಲ್ಲಿಂದ ಎಲ್ಲಿಗೆ ಎಷ್ಟೆಷ್ಟು ಹೆಚ್ಚಳ ಮಾಡಲಾಗಿದೆ?
ಆತಂಕ ಬೇಡ.. ಎಚ್ಚರಿಕೆ ಇರಲಿ ಎಂದ ಕೇಂದ್ರ ಸರ್ಕಾರ
ಇನ್ನು ಚೀನಾದಲ್ಲಿ ಹೆಚ್ಎಂಪಿವಿ ಸೋಂಕು ಹಬ್ಬಿದೆ ಎಂಬ ಸುದ್ದಿ ಬೆನ್ನಲ್ಲೇ ಭಾರತದಲ್ಲೂ ಆತಂಕ ಮನೆ ಮಾಡಿತ್ತು. ಆದ್ರೆ ಸದ್ಯದಲ್ಲಿ ಭಾರತದಲ್ಲಿ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಚಳಿಗಾಲದಲ್ಲಿ ಉಸಿರಾಟ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಭಾರತದ ಆರೋಗ್ಯ ವಿಭಾಗ ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿದೆ. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ, ಆದ್ರೆ ಎಚ್ಚರಿಕೆ ಅಗತ್ಯ ಇದೆ ಅಂತ ಕೇಂದ್ರ ಸರ್ಕಾರ ಹೇಳಿದೆ. ಒಂದು ವೇಳೆ ಸೋಂಕು ಕಾಣಿಸಿಕೊಂಡರೂ ನಾವು ಎಲ್ಲದಕ್ಕೂ ಸಿದ್ಧ ಅಂದಿದೆ.
ವೈರಸ್ ಹಬ್ಬಿ ಆಸ್ಪತ್ರೆಯಲ್ಲಿ ಜನರು ಚಿಕಿತ್ಸೆ ಪಡೆಯುತ್ತಿರುವ ವಿಡಿಯೋಗಳು ಕೂಡ ಜಗತ್ತಿಗೆ ಆತಂಕ ಸೃಷ್ಟಿಸಿವೆ. ಆದ್ರೆ ಚೀನಾ ಯಾವುದೇ ವೈರಸ್ ಇಲ್ಲ. ಇದು ಚಳಿಗಾಲದಲ್ಲಿ ಬರುವ ಸಾಮಾನ್ಯ ಜ್ವರ ಅಂತಿದೆ. ಮೊದಲು ಕೊರೊನಾ ಸಮಯದಲ್ಲೂ ಚೀನಾ ನೈಜ ಸಾವಿನ ಸಂಖ್ಯೆಯನ್ನು ಮರೆಮಾಚಿತ್ತು. ಒಟ್ಟಾರೆ ಈ ಹೊಸ ವೈರಸ್ ಆತಂಕ ಇಲ್ಲದಿದ್ರೂ ಚಳಿಗಾಲ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ