newsfirstkannada.com

ಇಂಡಿಯನ್ ಹಾಕಿ ಪ್ಲೇಯರ್ ವಿರುದ್ಧ ಬೆಂಗಳೂರಲ್ಲಿ ಪೋಕ್ಸೋ ಕೇಸ್​.. ದೂರು ದಾಖಲಾಗ್ತಿದ್ದಂತೆ ನಾಪತ್ತೆ

Share :

Published February 9, 2024 at 12:39pm

    ದೂರು ದಾಖಲಾಗುವ ಮುಂಚೆ ನಾಲ್ಕು ರಾಜ್ಯಗಳಲ್ಲಿ ಓಡಾಡಿದ ಆರೋಪ

    ಹಾಕಿ ಪ್ಲೇಯರ್ ಬಳಸುತ್ತಿದ್ದ 3 ಮೊಬೈಲ್​ ನಂಬರ್​​ಗಳೂ ಸ್ವಿಚ್ಆಫ್​

    ಮೂರು ದಿನಗಳಿಂದ ಹುಡುಕಾಡುತ್ತಿರುವ ಬೆಂಗಳೂರು ಪೊಲೀಸರು

ಬೆಂಗಳೂರ: ಭಾರತೀಯ ಹಾಕಿ ಪ್ಲೇಯರ್​ ವರುಣ್ ಕುಮಾರ್ ಮೇಲೆ ಜ್ಞಾನಭಾರತಿ ಪೊಲೀಸ್​ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗುತ್ತಿದ್ದಂತೆಯೇ ಪರಾರಿಯಾಗಿದ್ದಾನೆ. ಈ ಸಂಬಂಧ ಎರಡು ವಿಶೇಷ ತಂಡಗಳ ರಚಿಸಿ 4 ರಾಜ್ಯಗಳಲ್ಲಿ ತಲಾಶ್ ಮಾಡಲಾಗುತ್ತಿದೆ.

ಹಾಕಿ ಪ್ಲೇಯರ್​ ವರುಣ್ ಕುಮಾರ್ ಮೇಲೆ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗುತ್ತಿದ್ದಂತೆ ಎಸ್ಕೇಪ್ ಆಗಿದ್ದಾನೆ. ಈ ಕೇಸ್​ ಅನ್ನು ಗಂಭೀರವಾಗಿ ಪರಿಗಣಿಸಿರುವ ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್ ಅವರು ವರುಣ್ ಪತ್ತೆಗಾಗಿ 2 ವಿಶೇಷ ತಂಡಗಳನ್ನು ರಚನೆ ಮಾಡಿದ್ದು 4 ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಒಡಿಶಾ, ಅಸ್ಸಾಂ, ಹಿಮಾಚಲ ಪ್ರದೇಶ ಹಾಗೂ ಪಂಜಾಬ್​ನಲ್ಲಿ ಪೊಲೀಸರ ತಂಡಗಳು ಮೂರು ದಿನದಿಂದ ಹುಡುಕಾಟ ನಡೆಸುತ್ತಿದ್ದಾರೆ. ಈವರೆಗೂ ವರುಣ್​ ಕುಮಾರ್ ಪತ್ತೆಯಾಗಿಲ್ಲ. ಈ ಸಂಬಂಧ ಯಾವುದೇ ಸುಳಿಳು ಕೂಡ ಪೊಲೀಸರಿಗೆ ಸಿಕ್ಕಿಲ್ಲ. ದೂರು ದಾಖಲಾಗುವ ಮೊದಲೇ ವರುಣ್ 4 ರಾಜ್ಯಗಳಲ್ಲಿ ಓಡಾಡಿರುವುದರ ಬಗ್ಗೆ ಮಾಹಿತಿ ಇದೆ. ಆದರೆ ನಿರ್ಧಿಷ್ಟವಾಗಿ ಯಾವ ಪ್ರದೇಶದಲ್ಲಿ ಇದ್ದಾನೆ ಎಂಬುದು ನಿಗೂಢವಾಗಿದೆ. ಏಕೆಂದರೆ ಆತನ ಬಳಿಯಿದ್ದ 3 ಮೊಬೈಲ್ ನಂಬರ್​​ಗಳು ಸ್ವಿಚ್​ ಆಪ್ ಆಗಿವೆ.

ಹೀಗಾಗಿ ಮೂರು ಮೊಬೈಲ್ ನಂಬರ್​ಗಳ ಸಿಡಿಆರ್ ಮೂಲಕ ಪರಿಶೀಲನೆ ಮಾಡಲಾಗುತ್ತಿದೆ. ಈ ನಂಬರ್​ಗಳಿಂದ ಕೊನೆಯದಾಗಿ ಯಾರಿಗೆ ಫೋನ್ ಮಾಡಿದ್ದ ಎಂಬುದನ್ನು ತಿಳಿದುಕೊಂಡು ಬಳಿಕ ಕೊನೆ ಕಾಲ್ ಮಾತನಾಡಿದವರ ಮೂಲಕ ಹಾಕಿ ಪ್ಲೇಯರ್​ನನ್ನ ಪತ್ತೆ ಮಾಡಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂಡಿಯನ್ ಹಾಕಿ ಪ್ಲೇಯರ್ ವಿರುದ್ಧ ಬೆಂಗಳೂರಲ್ಲಿ ಪೋಕ್ಸೋ ಕೇಸ್​.. ದೂರು ದಾಖಲಾಗ್ತಿದ್ದಂತೆ ನಾಪತ್ತೆ

https://newsfirstlive.com/wp-content/uploads/2024/02/VARUN_KUMAR_HOCKEY.jpg

Load More