/newsfirstlive-kannada/media/post_attachments/wp-content/uploads/2025/02/hollywood-actor-gene-hackman.jpg)
ಎರಡು ಬಾರಿ ಆಸ್ಕರ್ ಪ್ರಶಸ್ತಿ ವಿಜೇತ ನಟ ಜೀನ್ ಹ್ಯಾಕ್‌ಮನ್ ಗುರುವಾರ ನ್ಯೂ ಮೆಕ್ಸಿಕೋದ ತಮ್ಮ ಮನೆಯಲ್ಲಿ ಅವರ ಪತ್ನಿ ಬೆಟ್ಸಿ ಮತ್ತು ಅವರ ನಾಯಿಯೊಂದಿಗೆ ಶವವಾಗಿ ಪತ್ತೆಯಾಗಿದ್ದಾರೆ.
ಇದನ್ನೂ ಓದಿ:ನಿರ್ದೇಶಕ S.S ರಾಜಮೌಳಿಗೆ ಬಿಗ್ ಶಾಕ್.. ಡೆತ್‌ನೋಟ್ ಬರೆದಿಟ್ಟ 34 ವರ್ಷದ ಸ್ನೇಹಿತ!
'ಬಾನಿ ಅಂಡ್ ಕ್ಲೈಡ್' ಸಿನಿಮಾ ನಟ ಜೀನ್ ಹ್ಯಾಕ್‌ಮನ್ ಅವರ ಪತ್ನಿ ಬೆಟ್ಸಿ ಮತ್ತು ನಾಯಿಯೊಂದಿಗೆ ಬುಧವಾರ ಮಧ್ಯಾಹ್ನ 1:45ರ ಸುಮಾರಿಗೆ ನ್ಯೂ ಮೆಕ್ಸಿಕೋದ ಅವರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ವರದಿ ಪ್ರಕಾರ, ಈ ಕೇಸ್ ಬಗ್ಗೆ ತನಿಖೆ ಮುಂದುವರೆದಿರುವಾಗ ಪೊಲೀಸರು ಪ್ರಕರಣದಲ್ಲಿ ತಕ್ಷಣವೇ ಯಾವುದೇ ಅಕ್ರಮ ನಡೆದಿಲ್ಲ ಎಂದು ಶಂಕಿಸಿದ್ದಾರೆ.
ಎರಡು ಬಾರಿ ಆಸ್ಕರ್ ಪ್ರಶಸ್ತಿ ವಿಜೇತ ನಟ ತನ್ನ ನಾಯಿ ಮತ್ತು ಹೆಂಡತಿಯೊಂದಿಗೆ ಸಾವನ್ನಪ್ಪಿದ್ದಾರೆ ಎಂದು ಸಾಂಟಾ ಫೆ ಕೌಂಟಿ ಶೆರಿಫ್ ಅದಾನ್ ಮೆಂಡೋಜಾ ದೃಢಪಡಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇನ್ನೂ, ಮೃತಪಟ್ಟ ನಟನಿಗೆ 95 ವರ್ಷ, ಅವರ ಪತ್ನಿಗೆ 63 ವರ್ಷ ಆಗಿದೆ. ಈ ಇಬ್ಬರ ಸಾವಿಗೆ ಕಾರಣವೇನೆಂದು ಪೊಲೀಸರು ಇನ್ನೂ ಪ್ರಕಟಿಸಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ