ಲಾಸ್ ಎಂಜೆಲ್ಸ್ ಬೆಂಕಿಗೆ ಸೆಲೆಬ್ರೆಟಿಗಳ ಭವ್ಯ ಬಂಗಲೆಗಳು ಭಸ್ಮ; ಐಷಾರಾಮಿ ಮನೆಗಳು ಸುಟ್ಟು ಕರಕಲು

author-image
Gopal Kulkarni
Updated On
ಲಾಸ್ ಎಂಜೆಲ್ಸ್ ಬೆಂಕಿಗೆ ಸೆಲೆಬ್ರೆಟಿಗಳ ಭವ್ಯ ಬಂಗಲೆಗಳು ಭಸ್ಮ; ಐಷಾರಾಮಿ ಮನೆಗಳು ಸುಟ್ಟು ಕರಕಲು
Advertisment
  • ಲಾಸ್ ಎಂಜೆಲ್ಸ್​ನಲ್ಲಿ ಹೊತ್ತಿಕೊಂಡ ಭೀಕರ ಬೆಂಕಿಯ ಅನಾಹುತ
  • ಹಾಲಿವುಡ್​ ಹಿಲ್ಸ್​ನಲ್ಲಿ ಅನೇಕ ಸೆಲೆಬ್ರೆಟಿಗಳ ಮನೆ ಸುಟ್ಟು ಕರಕಲು
  • 45 ವರ್ಷ ಜೀವನ ನಡೆಸಿದ ಮನೆ ಕಳೆದುಕೊಂಡು ಜಾನಿಸ್ ಕಣ್ಣೀರು

ಲಾಸ್ ಏಂಜಲೀಸ್‌ ಫೆಸಿಫಿಕ್ ಪ್ಯಾಲಿಸೈಡ್ಸ್ ನ ಹಾಲಿವುಡ್‌ ಹಿಲ್ಸ್ ಗೆ ಬೆಂಕಿ ಹೊತ್ತಿಕೊಂಡ ಕಾರಣ ಅನೇಕ ಹಾಲಿವುಡ್​ ನಟ ನಟಿಯರ ಮನೆಗಳು ಸುಟ್ಟು ಭಸ್ಮವಾಗಿವೆ. ಲಾಸ್​ ಎಂಜಲ್ಸ್​ನ ಹಾಲಿವುಡ್ ಹಿಲ್ಸ್​ನಲ್ಲಿಯೇ ಅನೇಕ ನಟ ನಟಿಯರು ಮನೆಯನ್ನು ಮಾಡಿಕೊಂಡಿದ್ದಾರೆ. ಫೆಸಿಫಿಕ್ ಪ್ಯಾಲಿಸೈಡ್ಸ್​ನ ಬೆಂಕಿ ಈಗ ಅನೇಕ ನಟ ನಟಿಯರು ಮನೆಗಳನ್ನು ಸುಟ್ಟು ಭಸ್ಮ ಮಾಡಿದೆ.

ಬಿಲ್ಲಿ ಕ್ರಿಸ್ಟಲ್, ಮ್ಯಾಂಡಿ ಮೂರೆ ಮತ್ತು ಪಾರಿಸ್ ಹಿಲ್ಟರ್ ಅವರ ಮನೆಗಳು ಸುಟ್ಟು ಕರಕಲಾಗಿವೆ. ಹಾಲಿವುಡ್ ಹಿಲ್ಸ್​ನಲ್ಲಿ ಆಯೋಜನೆ ಮಾಡಲಾಗಿದ್ದ ಒಟ್ಟು ಮೂರು ಪ್ರಶಸ್ತಿ ಪ್ರಧಾನ ಕಾರ್ಯಕ್ರಮಗಳನ್ನ ಮುಂದೂಡಲಾಗಿದೆ. ಮುಂದಿನ ವಾರ ನಡೆಯಬೇಕಿದ್ದ ಆಸ್ಕರ್ ಪ್ರಶಸ್ತಿ ನಾಮಿನೇಷನ್ ಕೂಡ ಮುಂದಕ್ಕೆ ಹಾಕಲಾಗಿದೆ. ಸಾವಿರಾರು ಜನರು ಸದ್ಯ ಲಾಸ್ ಎಂಜಲ್ಸ್​ನಿಂದ ಸ್ಥಳಾಂತರಿಸಲಾಗಿದ್ದು ಹೀಗೆ ಸ್ಥಳಾಂತರಗೊಂಡವರು ತಮ್ಮ ಮನೆ ಉಳಿದಿದೆಯೋ? ಇಲ್ಲವೇ ಸುಟ್ಟು ಕರಕಲಾಗಿದೆಯೋ? ಎಂಬ ಚಿಂತೆಯಲ್ಲಿ ಇದ್ದಾರೆ.

ಇದನ್ನೂ ಓದಿ: ಟಿಬೆಟ್ ಗಡಿಯಲ್ಲಿ ಸಂಕಷ್ಟಗಳ ಕೋಡಿ.. ಭೂಮಿ ಕೋಪಕ್ಕೆ ಪ್ರಾಣ ಕಳೆದುಕೊಂಡವರ ಸಂಖ್ಯೆ 126ಕ್ಕೆ ಏರಿಕೆ..

ಸುಮಾರು 1900 ಕಟ್ಟಡಗಳು ಬೆಂಕಿಯಲ್ಲಿ ಸರ್ವನಾಶವಾಗಿ ಹೋಗಿವೆ. ಅವುಗಳ ಸಂಖ್ಯೆ ಇನ್ನು ಏರುವ ಸಾಧ್ಯತೆ ಇದೆ ಎಂದು ಸ್ಥಳೀಯರ ವರದಿಗಳು ಹೇಳುತ್ತಿವೆ. 13 ಸಾವಿರಕ್ಕಿಂತಲೂ ಹೆಚ್ಚು ಜನರನ್ನು ಈಗಾಗಲೇ ಲಾಸ್ಎಂಜೆಲ್ಸ್​ನಿಂದ ಸ್ಥಳಾಂತರ ಮಾಡಲಾಗಿದೆ.
ಬುಧವಾರ ತಡರಾತ್ರಿ ಹಾಲಿವುಡ್ ಹಿಲ್ಸ್​ನಲ್ಲಿ ಹೊತ್ತಿಕೊಂಡ ಬೆಂಕಿ ಹತ್ತಿರದಲ್ಲಿಯೇ ಇರುವ ಹಾಲಿವುಡ್ ಬಾವ್ಲ್​ ಹಾಗೂ ಡಾಲ್ಬಿ ಥಿಯೇಟರ್​ಗೂ ವ್ಯಾಪಿಸಿದೆ. ಇದನ್ನು ಅಕಾಡಮೆಕ್ ಅವಾರ್ಡ್​​ನ ಮನೆಯೆಂದೇ ಕರೆಯಲಾಗುತ್ತಿತ್ತು.

ಇದನ್ನೂ ಓದಿ:ಹೆರಿಗೆಗೆ 4 ಗಂಟೆ ಬಾಕಿ ಇದ್ದಾಗ ಗೊತ್ತಾಯ್ತು ತಾನು ಗರ್ಭಿಣಿ ಅಂತಾ.. ನವಮಾಸದ ಗರ್ಭದಲ್ಲಿ ಅಚ್ಚರಿ ಬೆಳವಣಿಗೆ

ಸೆಲೆಬ್ರೆಟಿಗಳಾದ ಕ್ರಿಸ್ಟಲ್ ಮತ್ತು ಆತನ ಪತ್ನಿ ಜಾನಿಸ್​ ತಾವು ಮನೆ ಕಳೆದುಕೊಂಡಿದ್ದನ್ನು ನೆನಪಿಸಿಕೊಂಡು ಕಣ್ಣೀರಿಟ್ಟಿದ್ದಾರೆ. ಪೆಸಿಫಿಕ್ ಪಾಲಿಸೇಡ್​ನ ನೆರೆಯಲ್ಲಿಯೇ ಇದ್ದ ಅವರ ಮನೆಯಲ್ಲಿ ಈ ದಂಪತಿ 45 ವರ್ಷಗಳಿಂದ ವಾಸವಿದ್ದರು 1979ರಿಂದಲೂ ಜಾನಿಸ್​ ಈ ಮನೆಯಲ್ಲಿ ವಾಸಿಸುತ್ತಿದ್ದರು. ಇದೇ ಮನೆಯಲ್ಲಿ ಮಕ್ಕಳು ಮೊಮ್ಮಕ್ಕಳು ಬೆಳೆದಿದ್ದರು. ನನ್ನ ಮನೆಯ ಒಂದೊಂದು ಇಂಚು ಕೂಡ ಪ್ರೀತಿಯ ಗುರುತುಗಳನ್ನು ಹೊಂದಿತ್ತು ಎಂದು ಜಾನಿಸ್ ಕಣ್ಣಿರಿಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment