/newsfirstlive-kannada/media/post_attachments/wp-content/uploads/2025/03/PAMELA-BACH.jpg)
ಪಮೇಲಾ ಬಾಚ್, ಬೇವಾಚ್ ಹಾಗೂ ನೈಟ್ರೈಡರ್ಸ್ ಟಿವಿ ಶೋಗಳಿಂದ ಖ್ಯಾತಿ ಗಳಿಸಿದ್ದ 62ನೇ ವಯಸ್ಸಿನ ಹಾಲಿವುಡ್ ನಟಿ ತಮ್ಮ ಜೀವವನ್ನು ತಾವೇ ಕಳೆದುಕೊಂಡಿದ್ದಾರೆ. ಮಾರ್ಚ್ 5 ರಂದು ಡೇವಿಡ್ ಹಸ್ಸೆಲಾಫ್ ಅವರ ಮಾಜಿ ಪತ್ನಿ ಪಮೇಲಾ, ಲಾಸ್ ಏಂಜಲೀಸ್ನ ತಮ್ಮ ಮನೆಯಲ್ಲಿ ಹೆಣವಾಗಿ ಪತ್ತೆಯಾಗಿದ್ದಾರೆ. ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ ಹಾಗೂ ವೈದ್ಯಕೀಯ ಪರೀಕ್ಷಕರು ಹೇಳುವ ಪ್ರಕಾರ ತನ್ನ ತಲೆಗೆ ಗುಂಡು ಹೊಡೆದುಕೊಂಡು ಪಮೇಲಾ ಮೃತಪಟ್ಟಿದ್ದಾರೆ ಎಂದು ಘೋಷಿಸಿವೆ.
ಕಳೆದ ಕೆಲವು ದಿನಗಳಿಂದ ಪಮೇಲಾ ತನ್ನ ಕುಟುಂಬದೊಂದಿಗೆ ದೂರವಿದ್ದರು. ಅವರು ಕಾಲ್ ಮಾಡಿದರು ತೆಗೆಯಲಿಲ್ಲ. ಕೊನೆಗೆ ಮನೆಗೆ ಬಂದು ನೋಡಿದಾಗ ಅವರು ಮೃತಪಟ್ಟಿದ್ದು ಕಂಡುಬಂದಿತ್ತು. ಪಮೇಲಾ ಅವರ ಮಾಜಿ ಪತಿ ಡೇವಿಡ್ ಹಸೆಲ್ಲಾಫ್ ಪಮೇಲಾ ಅಗಲಿಕೆಯಿಂದಾಗಿ ನಮ್ಮ ಕುಟುಂಬ ತುಂಬಾ ದುಃಖದಲ್ಲಿದೆ. ಇಂತಹ ಸಮಯದಲ್ಲಿ ನೀವು ನೀಡಿದ ಪ್ರೀತಿ ಮತ್ತು ಬೆಂಬಲ ನಾವು ಎಂದಿಗೂ ಮರೆಯುವುದಿಲ್ಲ ಎಂದು ಜನರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಡೇವಿಡ್ ಮತ್ತು ಪಮೇಲಾ ನೈಟ್ ರೈಡರ್ಸ್ ಎಂಬ ಟಿವಿ ಶೋನಲ್ಲಿ ಮೊದಲ ಬಾರಿ ಭೇಟಿಯಾಗಿದ್ದರು. 1989ರಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ನಂತರ 2006ರಲ್ಲಿ ಬಂದ ಮತ್ತೊಂದು ಜನಪ್ರಸಿದ್ಧ ಟಿವಿ ಶೋ ಆದ ಬೇವಾಚ್ನಲ್ಲಿಯೂ ಕೂಡ ಒಟ್ಟಿಗೆ ಕಾಣಿಸಿಕೊಂಡಿದ್ದರು. ಕೊನೆಗೆ 2006ರಲ್ಲಿ ಈ ಜೋಡಿ ವಿಚ್ಛೇಧನ ಪಡೆದುಕೊಂಡು ಪ್ರತ್ಯೇಕವಾಗಿದ್ದರು.
ಇದನ್ನೂ ಓದಿ:ಮಾಧುರಿ ಸೌಂದರ್ಯದ ಸೆಳೆತಕ್ಕೆ ಮೈಮರೆತಿದ್ದ ಸ್ಟಾರ್ ನಟ.. ತುಟಿಯಲ್ಲಿ ರಕ್ತ ಬರುವಂತೆ ಕಚ್ಚಿದ್ದ! ಯಾರು ಗೊತ್ತಾ?
ಪಮೇಲಾ ಬಾಚ್ ಅವರಿಗೆ 34 ವರ್ಷದ ಡೇವಿಡ್ ಟೇಲರ್ ಮತ್ತು 32 ವರ್ಷದ ಹೈಲೆ ಸೇರಿ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಒಕ್ಲಹೊಮದ ಟುಲ್ಸಾದಲ್ಲಿ ಜನಿಸಿದ ಪಮೇಲಾ ಬಾಚ್ 1970ರಲ್ಲಿ ತಮ್ಮ ನಟನಾ ವೃತ್ತಿಯನ್ನು ಆರಂಭ ಮಾಡಿದರು. ಟಿವಿ ಶೋಗಳೊಂದಿಗೆ ಅವರ ನಟನೆಯ ಕರಿಯರ್ ಶುರುವಾಯ್ತು ಅದರಲ್ಲಿ ಅವರಿಗೆ ದೊಡ್ಡ ಹೆಸರು ತಂದು ಕೊಟ್ಟಿದ್ದು ಬೇವಾಚ್ ಎಂಬ ಟಿವಿ ಶೋ
ಬೇವಾಚ್ ಎನ್ನುವುದು ಒಂದು ನಾಟಕದ ಟೆಲಿವಿಜನ್ ಸಿರೀಜ್. ಒಟ್ಟು 11 ಸೀಸನ್ಗಳನ್ನು ಪೂರೈಸಿದ ಈ ಟಿವಿ ಶೋ ಆಧರಿಸಿಯೇ 2017ರಲ್ಲಿ ಬೇವಾಚ್ ಎಂಬ ಸಿನಿಮಾವನ್ನು ಕೂಡ ತಯಾರುಮಾಡಲಾಯ್ತು. ಈ ಬೇವಾಚ್ ಟಿವಿ ಸಿರೀಸ್ನಿಂದ ದೊಡ್ಡ ಖ್ಯಾತಿಯನ್ನು ಗಳಿಸಿದರು ಪಮೇಲಾ ಬಾಚ್. ಆ ಕಾಲದಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದ ಜಾಗತಿಕವಾಗಿ ಪ್ರಸಿದ್ಧಿ ಪಡೆದ ಟಿವಿ ಸಿರೀಜ್ ಆಗಿ ಬೇವಾಚ್ ಗುರುತಿಸಿಕೊಂಡಿತ್ತು. ಸೆಪ್ಟಂಬರ್ 22, 1989ರಂದು ಮೊದಲ ಸಿರೀಜ್ ಬಿಡುಗಡೆಯಾದ ಈ ಟಿವಿ ಶೋ ನಿರಂತರವಾಗಿ 11 ವರ್ಷಗಳ ಕಾಲ ಪ್ರಸಾರವಾಗಿತ್ತು. ಅಕ್ಟೋಬರ್ 2, 2000ದಂದು 11ನೇ ಸಿರೀಜ್ ಬಿಡುಗಡೆಯಾಗುವ ಮೂಲಕ ಬೇವಾಚ್ ಟಿವಿ ಸರಣಿ ಮುಕ್ತಾಯಗೊಂಡಿತು. ಇದಾದ ನಂತರ ಪಮೇಲಾಗೆ ಮತ್ತಷ್ಟು ಹೆಸರು ತಂದುಕೊಟ್ಟ ಟಿವಿ ಶೋ ನೈಟ್ ರೈರಡ್ಸ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ