/newsfirstlive-kannada/media/post_attachments/wp-content/uploads/2024/04/TULSI_2.jpg)
ಭಾರತದಲ್ಲಿ ತುಳಸಿ ಗಿಡಕ್ಕೆ ಎಲ್ಲ ಗಿಡಗಳಿಗಿಂತ ಪವಿತ್ರವಾದ ಸ್ಥಾನ ನೀಡಲಾಗಿದೆ. ನಮ್ಮ ಪೂರ್ವಜರ ಕಾಲದಿಂದ ತುಳಸಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಹೀಗಾಗಿ ಇದನ್ನು ವೃಂದಾ ಎಂದೂ ಪ್ರೀತಿಯಿಂದ ಕರೆಯುತ್ತಾರೆ. ಮನೆಯಂಗಣದಲ್ಲಿ ಒಂದು ಹಸಿರಾದ ತುಳಸಿ ಬೆಳೆದಿದ್ದರೇ, ಪ್ರತಿದಿನ ನೋಡುವ ಕುಟುಂಬಸ್ಥರ ಸಂತಸವೇ ಬೇರೆ ಇರುತ್ತದೆ. ಆದ್ದರಿಂದಲೇ ನಿತ್ಯ ಸ್ನಾನದ ನಂತರ ಸಮೃದ್ಧಿ ಮತ್ತು ಶಾಂತಿಗಾಗಿ ತುಳಸಿಗೆ ಪೂಜೆ ಮಾಡಲಾಗುತ್ತದೆ. ತುಳಸಿ ನೋಡಲು ಚಿಕ್ಕದಿದ್ದರು ಮೈತುಂಬಾ ಔಷಧದ ಗುಣಗಳನ್ನ ಹೊಂದಿದೆ. ಸದ್ಯ ಈ ಅಮೂಲ್ಯ ಗಿಡದಿಂದ ನಮಗೇನು ಪ್ರಯೋಜನಗಳು ಆಗುತ್ತಾವೆ ಎಂಬುದನ್ನು ಒಂದು ಬಾರಿ ಮನನ ಮಾಡಿಕೊಳ್ಳೋಣ.
/newsfirstlive-kannada/media/post_attachments/wp-content/uploads/2024/04/TULSI.jpg)
ತುಳಸಿ ಗಿಡ ಚಿಕ್ಕದಾಗಿದ್ದರು ಅದರಂತೆ ಅಷ್ಟೇ ಔಷಧಿಗುಣಗಳನ್ನ ಮೈಗೂಡಿಸಿಕೊಂಡು ಬೆಳೆಯುತ್ತದೆ. ಹೀಗಾಗಿಯೇ ಇದು ಘಮ್​ ಎಂದು ಸುವಾಸನೆ ಬೀರುತ್ತಿರುತ್ತದೆ. ಜೊತೆಗೆ ಇದು ನಮ್ಮ ಆರೋಗ್ಯಕ್ಕೂ ಉತ್ತಮವಾದ ಮೂಲಿಕೆ ಆಗಿದೆ ಎಂದು ಹೇಳಬಹುದು. ಎಲೆಗಳು ವಿಟಮಿನ್ A, C, K, ಕಬ್ಬಿಣ, ಕ್ಯಾಲ್ಸಿಯಂ, ರಂಜಕ, ಮೆಗ್ನೀಷಿಯಂ ಮತ್ತು ಪೊಟ್ಯಾಷಿಯಂನಂತ ಖನಿಜಗಳ ಉತ್ತಮ ಮೂಲವಾಗಿದೆ.
ಸಣ್ಣ ಸಣ್ಣ ಗಿಡಗಳನ್ನು ಬೆಳೆಸಿದರೆ ಮನಸಿಗೆ ಮುದ
ಫೈಬರ್ ಮತ್ತು ಪ್ರೋಟಿನ್ಸ್​ನಿಂದ ಸಮೃದ್ಧವಾಗಿದ್ದು ತುಳಸಿಯನ್ನು ಹಾಗೇ ತಿನ್ನಬಹುದು ಅಥವಾ ಚಹಾದಲ್ಲಿ ಕುದಿಸಿ ಸೇವನೆ ಮಾಡಬಹುದು. ಇದರಿಂದ ನಮಗೆ ಅನೇಕ ಲಾಭಗಳಿವೆ. ಇಂದಿನ ಕಂಪ್ಯೂಟರ್, ಮೊಬೈಲ್​ ಕಾಲದಲ್ಲಿ ಒತ್ತಡ ನಿವಾರಣೆ ತುಸು ಕಷ್ಟಕರ. ಆದರೆ ಬಹಳ ಹಿಂದಿನಿಂದ ತುಳಸಿ ನಮ್ಮ ಒತ್ತಡ ನಿವಾರಣೆ ಮಾಡುವುದರ ಜೊತೆಗೆ ಮನಸನ್ನು ಶಾಂತಗೊಳಿಸುತ್ತದೆ. ಮನೆಯಲ್ಲಿ ತುಳಸಿ ಜೊತೆ ಇನ್ನಷ್ಟು ಸಣ್ಣ ಸಣ್ಣ ಗಿಡಗಳನ್ನು ಬೆಳೆಸಿದರೆ ಮನಸಿಗೆ ಮುದ ನೀಡುವುದ ಜೊತೆಗೆ ಒತ್ತಡ ನಿವಾರಿಸುತ್ತೆ.
ಹೆದರಿಕೆ, ಭಯ ಕಡಿಮೆ ಮಾಡುವಲ್ಲಿ ತುಳಸಿ ಕೂಡ ಒಂದು
ಇದರಲ್ಲಿ ತುಳಸಿಯು ಮೆದುಳಿನಲ್ಲಿ ಡೋಪಮೈನ್ ಹಾಗೂ ಸಿರೊಟೋನಿನ್ ಮಟ್ಟ ಸಮತೋಲನ ಮಾಡುತ್ತದೆ. ತುಳಸಿ ಎಲೆ ತಿನ್ನುವುದರಿಂದ ಮನಸು ಶಾಂತದಿಂದ ಇರುತ್ತೆ. ಇದು ನಿದ್ರಾಹೀನತೆ, ಖಿನ್ನತೆ ಮತ್ತು ಹೆದರಿಕೆ, ಭಯದಂತವುಗಳನ್ನ ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತೆ. ಇದರಲ್ಲಿ ಸತು, ವಿಟಮಿನ್ ಸಿ ಇರುವುದರಿಂದ ಬ್ಯಾಕ್ಟೀರಿಯಾ, ಶಿಲೀಂಧ್ರ ವಿರೋಧಿಯಾಗಿ ವರ್ತಿಸುತ್ತದೆ. ಈ ಸಸ್ಯದ ಕೆಲವು ಎಲೆಗಳನ್ನು ಕುದಿಸುವುದರಿಂದ ನಮ್ಮಲ್ಲಿ ತ್ವರಿತ ರೋಗನಿರೋಧಕ ಶಕ್ತಿ ಹೆಚ್ಚಿಸಬಹುದು.
ತುಳಸಿಯ ಹೇಗೆ ನಮ್ಮ ದೇಹಕ್ಕೆ ಉಪಯೋಗ?
- ತುಳಸಿ ಕರುಳಿನಲ್ಲಿನ ಉರಿಯೂತವನ್ನು ಶಾಂತಗೊಳಿಸುತ್ತದೆ
- ಕರುಳಿನಲ್ಲಿನ ಉತ್ತಮ ಬ್ಯಾಕ್ಟೀರಿಯಾದ ಪರವಾಗಿ ಇದು ಇರುತ್ತೆ
- ತುಳಸಿಯಲ್ಲಿನ ಫೈಟೊಕೆಮಿಕಲ್ಸ್ ಶ್ವಾಸಕೋಶ, ಚರ್ಮ ಮತ್ತು ಯಕೃತ್ತಿನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತೆ
- ನೀವು ಮೂತ್ರಪಿಂಡದ ಕಲ್ಲುಗಳಿಂದ ಬಳಲುತ್ತಿದ್ದರೆ, ತುಳಸಿ ಸೌಮ್ಯ ಮೂತ್ರವರ್ಧಕವಾಗಿ ಕೆಲಸ ಮಾಡುತ್ತದೆ
- ನಮ್ಮ ರಕ್ತದಲ್ಲಿನ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ
- ಅಸಿಟಿಕ್ ಆಮ್ಲವು ಕಲ್ಲುಗಳನ್ನು ಒಡೆಯಲು ಸಹಾಯ ಮಾಡಿ ದೇಹದಿಂದ ಸುಲಭವಾಗಿ ಹೊರಹಾಕಲು ಸಹಾಯ ಮಾಡುತ್ತದೆ.
/newsfirstlive-kannada/media/post_attachments/wp-content/uploads/2024/04/TULSI_1.jpg)
ಇದನ್ನೂ ಓದಿ: Video- ಮೆಟ್ರೋದಲ್ಲಿ ರೈಫಲ್​ನಿಂದ ಗುಂಡು ಹಾರಿಸಿಕೊಂಡು CISF ಸಿಬ್ಬಂದಿ ಆತ್ಮಹತ್ಯೆ.. ಕಾರಣ?
ತುಳಸಿಯನ್ನು ಪಾಟ್​ಗಳಲ್ಲಿ ಬೆಳೆಸಿ ಮನೆಯಂಗಳದಲ್ಲಿ ಬೆಳೆಸುವುದು ಮೊದಲಿಂದಲೂ ಇದೆ. ಆದರೆ ಈಗಿಗ ಇದನ್ನು ಮನೆ ಮುಂದೆ, ಕಾಂಪೌಡ್​ ಮೇಲೆ, ಟೆರೆಸ್ ಮೇಲೆ ಟೀ ಪಾಯ್ ಮೇಲೆ ಬೆಳೆಸಲಾಗುತ್ತದೆ. ಏಕೆಂದರೆ ಕೆಲಸದ ಒತ್ತಡದಲ್ಲಿ ನಮಗೆ ಉಲ್ಲಾಸ ಭರಿತವಾಗಿ ಕಾಣುತ್ತದೆ. ಕೆಲಸ ಮಾಡುತ್ತಲೇ ತುಳಸಿಯ ಒಂದು ಎಲೆ ಬಾಯಲ್ಲಿ ಹಾಕಿಕೊಂಡರೆ ಮನದಲ್ಲಿ ಮೋಹಕತೆ ವೃದ್ಧಿಸುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us