Advertisment

‘ನನ್ನದೊಂದು ಕನಸು’.. ಫ್ಯಾನ್ಸ್​ಗೆ ಕಾಂತಾರ -1 ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ರಿಷಬ್​ ಶೆಟ್ಟಿ

author-image
Veena Gangani
Updated On
‘ನನ್ನದೊಂದು ಕನಸು’.. ಫ್ಯಾನ್ಸ್​ಗೆ ಕಾಂತಾರ -1 ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ರಿಷಬ್​ ಶೆಟ್ಟಿ
Advertisment
  • ಕಾಂತಾರ ಮೇಕಿಂಗ್ ಗ್ಲಿಂಪ್ಸ್ ಹಂಚಿಕೊಂಡ ಹೊಂಬಾಳೆ ಫಿಲ್ಮ್ಸ್
  • ಅಕ್ಟೋಬರ್ 2ರಂದು ಬಿಡುಗಡೆ ಆಗಲಿರೋ ಕಾಂತಾರ ಸಿನಿಮಾ
  • ಸುಮಾರು 250 ದಿನಗಳ ಶೂಟಿಂಗ್ ಮುಗಿಸಿರೋ‌ ಕಾಂತಾರ ಟೀಂ

ಸ್ಯಾಂಡಲ್‌ವುಡ್ ನಟ, ನಿರ್ದೇಶಕ ರಿಷಬ್ ಶೆಟ್ಟಿ ಸಖತ್​ ಖುಷಿಯಲ್ಲಿದ್ದಾರೆ. ಇಷ್ಟು ದಿನ ಕಾಂತಾರ 1 ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದ ನಟ ರಿಷಬ್ ಶೆಟ್ಟಿ ಸಿನಿಮಾ ರಿಲೀಸ್​ಗೆ ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ.

Advertisment

ಇದನ್ನೂ ಓದಿ:Breaking: ಧರ್ಮಸ್ಥಳ ಪ್ರಕರಣವನ್ನು SIT ತನಿಖೆಗೆ ವಹಿಸಿದ ರಾಜ್ಯ ಸರ್ಕಾರ

publive-image

ಇದೀಗ ಕಾಂತಾರ-1 ಬಗ್ಗೆ ಬಿಗ್ ಅಪ್ಡೇಟ್​ವೊಂದನ್ನು ಕೊಟ್ಟಿದ್ದಾರೆ. ಇಂದು ಕಾಂತಾರ ಚಾಪ್ಟರ್ 1 ಗ್ಲಿಂಪ್ಸ್ ಬಿಡುಗಡೆಯಾಗಿದೆ. ಇಂದು ಬೆಳಗ್ಗೆ 10.35ಕ್ಕೆ ದಿ ವರ್ಲ್ಡ್ ಆಫ್ ಕಾಂತಾರ ಗ್ಲಿಂಪ್ಸ್​ ರಿಲೀಸ್​ ಆಗಿದೆ. ಈಗಾಗಲೇ ಕಾಂತಾರ ಚಾಪ್ಟರ್ 1 ಶೂಟಿಂಗ್ ಕಂಪ್ಲೀಟ್ ಆಗಿದ್ದು, ಅದೇ ಖುಷಿಯಲ್ಲಿ ತಂಡ ಕಾಂತಾರ ಮೇಕಿಂಗ್ ಗ್ಲಿಂಪ್ಸ್​​ ಬಿಡುಗಡೆ ಮಾಡಿದೆ.

ಸುಮಾರು 250 ದಿನಗಳ ಶೂಟಿಂಗ್ ಮುಗಿಸಿರೋ‌ ಕಾಂತಾರ ಟೀಂ, ಸಾವಿರಾರು ಕಾರ್ಮಿಕರ ನಡುವೆ ವರ್ಲ್ಡ್ ಆಫ್ ಕಾಂತಾರ ಮೇಕಿಂಗ್ ಗ್ಲಿಂಪ್ಸ್ ವಿಡಿಯೋವನ್ನು ಹೊಂಬಾಳೆ ತನ್ನ ಯೂಟ್ಯೂಬ್ ಚಾನೆಲ್​ನಲ್ಲಿ ಹಂಚಿಕೊಂಡಿದೆ. ಮೇಕಿಂಗ್ ಗ್ಲಿಂಪ್ಸ್​ನಲ್ಲಿ ನಟ ರಿಷಬ್​ ಶೆಟ್ಟಿ, ‘‘ನನ್ನದೊಂದು ಕನಸು.. ನಮ್ಮ ಮಣ್ಣಿನ ಕಥೆಯನ್ನು ಇಡೀ ಪ್ರಪಂಚಕ್ಕೆ ಹೇಳಬೇಕು ಅಂತ. ನಮ್ಮ ಊರು, ನಮ್ಮ ಜನ, ನಮ್ಮ ನಂಬಿಕೆಗಳು. ನಾನು ಆ ಕನಸಿನ ಬೆನ್ನ ಹತ್ತುವುದಕ್ಕೆ ಶುರು ಮಾಡಿದಾಗ ಸಾವಿರಾರು ಜನ ನನ್ನ ಬೆನ್ನ ಹಿಂದೆ ನಿಂತರು. ಮೂರು ವರ್ಷಗಳ ಪರಿಶ್ರಮ, 250 ದಿನಗಳ ಚಿತ್ರೀಕರಣ. ಎಷ್ಟೆ ಕಷ್ಟ ಬಂದರು ನಾನು ನಂಬಿದ ದೈವ ನನ್ನ ಕೈ ಬಿಡಲಿಲ್ಲ. ನನ್ನ ಇಡೀ ತಂಡ, ನನ್ನ ನಿರ್ಮಾಪಕರು ನನ್ನ ಬೆನ್ನ ಹಿಂದೆ ನಿಂತಿದ್ದರು. ಪ್ರತಿದಿನ ಸೆಟ್​ನಲ್ಲಿ ಸಾವಿರಾರು ಜನರನ್ನು ನೋಡುತ್ತಿದ್ದಾಗ ನನಗೆ ಕಾಡುತ್ತಿದ್ದ ವಿಷಯ ಒಂದೇ. ಇದು ಕೇವಲ ಸಿನಿಮಾ ಅಲ್ಲ, ಇದೊಂದು ಶಕ್ತಿ. ಕಾಂತರದ ಪ್ರಪಂಚಕ್ಕೆ ನಿಮ್ಮೆಲ್ಲರಿಗೂ ಸ್ವಾಗತ’’ ಎಂದು ಹೇಳಿದ್ದಾರೆ. ಸದ್ಯಕ್ಕೆ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೀತಿವೆ. ಅಕ್ಟೋಬರ್ 2ರಂದು ಬಹುನಿರೀಕ್ಷಿತ ಕಾಂತಾರಾ 1 ಸಿನಿಮಾ ಬಿಡುಗಡೆ ಆಗಲಿದೆ.

Advertisment

publive-image

ಇನ್ನೂ, ಕಾಂತಾರ ಚಾಪ್ಟರ್ 1 ಸಿನಿಮಾ ಸೆಟ್​ನಲ್ಲಿ ಆಗಾಗ ಸರಣಿ ಅವಘಡಗಳು ನಡೆಯುತ್ತಲೇ ಇದ್ದವು. ಮೊದಲಿಗೆ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ಜೂನಿಯರ್ ಆರ್ಟಿಸ್ಟ್ ಒಬ್ಬರು ಈಜಲು ಹೋಗಿ ಮುಳುಗಿ ಪ್ರಾಣಬಿಟ್ಟರು. ಅದಾದ ಮೇಲೆ ಸಿನಿಮಾನಲ್ಲಿ ನಟಿಸಿದ್ದ ಕನ್ನಡದ ಹಾಸ್ಯ ಕಲಾವಿದ ರಾಕೇಶ್ ಪೂಜಾರಿ ಹೃದಯಾಘಾತದಿಂದ ಮೃತಪಟ್ಟರು. ಕೆಲ ದಿನಗಳ ಹಿಂದಷ್ಟೆ ವಿಜು ವಿಕೆ ಎಂಬ ಕೇರಳದ ಕಲಾವಿದ ಮೃತಪಟ್ಟರು. ಅವರು ಸಹ ‘ಕಾಂತಾರ’ ಸಿನಿಮಾನಲ್ಲಿ ನಟಿಸುತ್ತಿದ್ದರು.

publive-image

ಇದೆಲ್ಲದರ ಬಳಿಕ ದೋಣಿಯೇ ಮುಗಿಚಿತ್ತು. ಈ ಸಾಲು ಸಾಲು ಅವಘಡಗಳ ಮಧ್ಯೆ ಸಿನಿಮಾ ಶೂಟಿಂಗ್​ ಕಂಪ್ಲೀಟ್​ ಆಗಿದೆ. ಸಿನಿಮಾವನ್ನು ರಿಷಬ್ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಕ್ಕೆ ಹಾಲಿವುಡ್​ನ ಪ್ರತಿಷ್ಠಿತ ತಂತ್ರಜ್ಞರಿಂದ ವಿಎಫ್​ಎಕ್ಸ್, ಆಕ್ಷನ್ ದೃಶ್ಯಗಳ ಸಂಯೋಜನೆಯನ್ನು ಮಾಡಿಸಲಾಗಿದೆ. ಸಿನಿಮಾಕ್ಕೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿದ್ದಾರೆ.

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment