/newsfirstlive-kannada/media/post_attachments/wp-content/uploads/2025/02/GOLD-CONSUMPTION-INDINA.jpg)
ಭಾರತ ಮತ್ತು ಚೀನಾ ಈ ಎರಡು ದೇಶಗಳು ಈಗ ಏಷ್ಯಾದ ಅತ್ಯಂತ ಬಲಿಷ್ಠ ದೇಶಗಳು. ಹಲವು ವಲಯಗಳಲ್ಲಿ ಈ ಉಭಯ ರಾಷ್ಟ್ರಗಳ ಮಧ್ಯೆ ದೊಡ್ಡ ಮಟ್ಟದ ಸ್ಪರ್ಧೆಯಿದೆ. ಆರ್ಥಿಕ ಬೆಳವಣಿಗೆಯಿಂದ ಹಿಡಿದು. ಉತ್ಪಾದನಾ ವಲಯದವರೆಗೂ ಕೂಡ ದೊಡ್ಡ ಸ್ಪರ್ಧೆಯಿದೆ. ಆರ್ಥಿಕ ವಿಚಾರದಲ್ಲಿ ಈಗಾಗಲೇ ಭಾರತ ಚೀನಾವನ್ನು ಹಲವು ವಿಚಾರಗಳಲ್ಲಿ ಮೀರಿಸಿದೆ ಎಂದು ಹೇಳಲಾಗುತ್ತದೆ. ಈಗ ಮತ್ತೊಂದು ವಿಚಾರದಲ್ಲಿ ಚೀನಾವನ್ನು ಎರಡನೇ ಸ್ಥಾನಕ್ಕೆ ಇಳಿಸಿ ಭಾರತ ಮೊದಲನೇ ಸ್ಥಾನಕ್ಕೆ ಏರಿದೆ ಎಂದು ಹೇಳಲಾಗಿದೆ.
ಚಿನ್ನದ ಬಳಕೆ ವಿಚಾರದಲ್ಲಿ ಭಾರತ ಚೀನಾವನ್ನು ಹಿಂದಿಕ್ಕಿದೆ. 2024ರಲ್ಲಿ ಭಾರತ ಸುಮಾರು 563.4 ಟನ್ ಚಿನ್ನಾಭರಗಳನ್ನು ಉಪಯೋಗಿಸಿದ್ದು. ಚೀನಾ ಭಾರತಕ್ಕಿಂತ ಕೊಂಚ ಹಿಂದೆ ಉಳಿದಿದೆ 2024ರಲ್ಲಿ ಚೀನಾದಲ್ಲಿ ಉಪಯೋಗಿಸಲಾಗಿರುವ ಚಿನ್ನಾಭರಣಗಳ ಅಂಕಿ ಅಂಶ 511.4 ಟನ್ ಎಂದು ಹೇಳಲಾಗಿದೆ. ವಿಶ್ವದ ಚಿನ್ನಾಭರಣ ಮಾರುಕಟ್ಟೆಯಲ್ಲಿ ಅತಿಹೆಚ್ಚು ಚಿನ್ನಾಭರಣಗಳನ್ನು ಉಪಯೋಗಿಸಿದ್ದು ಭಾರತ ಎಂದು ಅಂಕಿ ಅಂಶಗಳು ತೆರೆದಿಡುತ್ತಿವೆ.
ಚಿನ್ನದ ಬೆಲೆ ಏರಿಕೆಯ ನಡುವೆಯೇ ಮತ್ತು ಅವುಗಳ ಹೂಡಿಕೆಗಳ ನಡುವೆಯೇ ಭಾರತದ ಒಟ್ಟು ಚಿನ್ನದ ಬೇಡಿಕೆ 2023ರಲ್ಲಿ 761 ಟನ್ನಷ್ಟಿತ್ತು ಅದು 2024ರಕ್ಕೆ 802.8 ಟನ್ಗೆ ತಲುಪಿತು. ಅಂದ್ರೆ ಒಂದು ವರ್ಷದಲ್ಲಿ ಶೇಕಡಾ 5 ರಷ್ಟು ಬೇಡಿಕೆ ಹೆಚ್ಚಾಯಿತು. ಬೆಲೆ ಏರಿಕೆಯನ್ನೇ ಪ್ರಯೋಜನವಾಗಿ ಪಡೆದುಕೊಂಡ ಹೂಡಿಕೆದಾರರು. 2023ರಲ್ಲಿಲ 185 ಟನ್ ಚಿನ್ನದ ಮೇಲೆ ಹೂಡಿಕೆ ನಿರೀಕ್ಷಿಸಿದ್ದರು ಅದು 2024ಕ್ಕೆ 240 ಟನ್ಗೆ ತಲುಪಿತ್ತು. ಇದರ ನಡುವೆ ಇನ್ನೊಂದು ವಿಚಾರ ಅಂದ್ರೆ ಭಾರತ ಚಿನ್ನವನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳುವುದರಲ್ಲಿಯೂ ಕುಸಿತ ಕಂಡಿದೆ. 2023ರಲ್ಲಿ ಸುಮಾರು 744 ಟನ್ ಚಿನ್ನವನ್ನು ಭಾರತ ಆಮದು ಮಾಡಿಕೊಂಡಿತ್ತು. 2024ಕ್ಕೆ ಅದರ ಗಾತ್ರ 712.1ಟನ್ಗೆ ಕುಸಿದಿದೆ.
ಇದನ್ನೂ ಓದಿ: ಚಿನ್ನ ಖರೀದಿ ಮಾಡೋರಿಗೆ ಗುಡ್ನ್ಯೂಸ್.. ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ
2024ರಲ್ಲಿ ಬಂಗಾರದ ಬೆಲೆ ಶೇಕಡಾ 27ರಷ್ಟು ಏರಿಕೆಯಾಗಿತ್ತು. 2025ರಲ್ಲಿ ಈಗಾಗಲೇ ಮತ್ತೆ 11 ಪರ್ಸೆಂಟ್ನಷ್ಟು ಏರಿಕೆ ಕಂಡಿದೆ. ಈ ಒಂದು ಟ್ರೆಂಡ್ ಬಂಗಾರದ ಮೇಲಿನ ಹೂಡಿಕೆಯನ್ನು ಹೆಚ್ಚು ಮಾಡಿದೆ. ಇದರ ನಡುವೆ ಯುಎಸ್ ಮತ್ತು ಚೀನಾ ನಡುವೆ ಈಗಾಗಲೇ ಸುಂಕಗಳ ಸಮರ ನಡೆಯುತ್ತಿದೆ. ಯುಎಸ್ನ ಅನೇಕ ಸರಕುಗಳ ಆಮದಿನ ಮೇಲೆ ಚೀನಾ ಬೇಕಾಬಿಟ್ಟಿಯಾಗಿ ಸುಂಕವನ್ನು ವಿಧಿಸಿದೆ. ಇದರಿಂದ ಚಿನ್ನದ ಬೇಡಿಕೆಯಲ್ಲಿ ಸಿಕ್ಕಾಪಟ್ಟೆ ಏರಿಕೆಯಾಗಿದ ಪರಿಣಾಮ ಅದು ಬುಧವರಾದಂದು ಈ ಹಿಂದೆಂದಿಗಿಂತಲೂ ಬೆಲೆಯಲ್ಲಿ ಅತಿಹೆಚ್ಚು ಏರಿಕೆ ಕಂಡುಕೊಂಡಿದೆ.
ಸದ್ಯ ಭಾರತ ವಿಶ್ವದಲ್ಲಿಯೇ ಅತಿಹೆಚ್ಚು ಬಂಗಾರ ಬಳಕೆ ಮಾಡುವ ದೇಶವಾಗಿ ಗುರುತಿಸಿಕೊಂಡಿದೆ. ಚಿನ್ನಾಭರಣಗಳ ಬೇಡಿಕೆ ಮತ್ತು ಅದರ ಮೇಲಿನ ಹೂಡಿಕೆ ಒಟ್ಟು ಬಂಗಾರದ ಬಳಕೆಯನ್ನು ಏರಿಕೆಗೆ ತೆಗೆದುಕೊಂಡು ಹೋಗಿದೆ. ಬಂಗಾರದ ಬೆಲೆಯಲ್ಲಿ ಆಗುತ್ತಿರುವ ವಿಪರೀತ ಏರಿಕೆ ಹೂಡಿಕೆದಾರರನ್ನು ಮತ್ತಷ್ಟು ಆಕರ್ಷಿಸುತ್ತಿದೆ. ಅದರ ಜೊತಗೆ ಬಂಗಾರದ ಆಮದುವಿನಲ್ಲೂ ಕುಸಿತ ಕಂಡಿದ್ದು. ಇದು ಸ್ಥಳೀಯ ಪೂರೈಕೆಗೆ ಮತ್ತಷ್ಟು ಪುಷ್ಠಿಯನ್ನು ನೀಡಿದೆ. ಬಂಗಾರದ ಬೆಲೆಯಲ್ಲಿ ನಡೆಯುತ್ತಿರುವ ಜಾಗತಿಕ ಅನಿಶ್ಚಿತತೆ ಅದರ ಮೇಲಿನ ಹೂಡಿಕೆಯನ್ನು ಮತ್ತಷ್ಟು ಸುರಕ್ಷಿತವನ್ನಾಗಿ ಮಾಡಿದೆ.
ಇದನ್ನೂ ಓದಿ: ಬದ್ರಿನಾಥ್ ಮಂದಿರ ಬಾಗಿಲು ಸದ್ಯದಲ್ಲಿಯೇ ತೆರೆಯಲಿದೆ: ಭಕ್ತಾದಿಗಳಿಗೆ ದರ್ಶನ ಸಿಗುವುದು ಯಾವಾಗ?
ಮಾರುಕಟ್ಟೆ ವಿಶ್ಲೇಷಕರು ಹೇಳುವ ಪ್ರಕಾರ ಬಂಗಾರದ ಬೆಲೆಯಲ್ಲಾಗುತ್ತಿರುವ ಏರಿಳಿತದ ಬಗ್ಗೆ ಗಮನವಿರಲಿ. ಭೌಗೋಳಿಕ ರಾಜಕೀಯ ಬೆಳವಣಿಗೆ ಹಾಗೂ ಆರ್ಥಿಕ ನೀತಿಗಳು ಬಂಗಾರದ ಬೆಲೆಯ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಹೂಡಿಕೆದಾರರು ಮಾರುಕಟ್ಟೆಯ ಟ್ರೆಂಡ್ನ್ನು ಸರಿಯಾಗಿ ಗಮನಿಸಿ ಹೂಡಿಕೆ ಮಾಡಬೇಕು ಮತ್ತು ತಜ್ಞರ ಸಲಹೆಯನ್ನು ಪಡೆದು ಬಂಗಾರದ ಮೇಲೆ ಹೂಡಿಕೆ ಮಾಡುವುದು ಉತ್ತಮ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ