/newsfirstlive-kannada/media/post_attachments/wp-content/uploads/2024/12/KANTARA.jpg)
2024 ಇತಿಹಾಸದ ಪುಟ ಸೇರಲು ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಇವೆ. 2025ನ್ನು ಬರಮಾಡಿಕೊಳ್ಳಲು ಜನರು ಉತ್ಸುಕರಾಗಿದ್ದಾರೆ. ಇತ್ತ ಮನರಂಜನಾ ಕ್ಷೇತ್ರದಲ್ಲಿಯೂ ಕೂಡ ದೊಡ್ಡ ಮಟ್ಟದ ನಿರೀಕ್ಷೆಗಳನ್ನು ಇಟ್ಟುಕೊಂಡು ಹೊಸ ಹೊಸ ಸಿನಿಮಾಗಳು ಲಾಂಚ್ ಆಗುತ್ತಿವೆ. 2024ರಲ್ಲಿ ಅತಿದೊಡ್ಡ ಹಿಟ್ ಸಿನಿಮಾ ಆಗಿ ಪುಷ್ಪಾ-2 ಕಾಣಿಸಿಕೊಂಡಿದೆ. ಈ ವರ್ಷದ ಬಾಕ್ಸ್ ಆಫೀಸ್​ನ ಎಲ್ಲಾ ದಾಖಲೆಗಳನ್ನು ಮುರಿದು ಸಾವಿರ ಕೋಟಿಗೂ ದಾಟಿ ಕಲೆಕ್ಷನ್ ಮಾಡಿದೆ. ಅಂತಹ ಸಿನಿಮಾದ ದಾಖಲೆಯನ್ನು ಮುಂಬರುವ ದಿನಗಳಲ್ಲಿ ಯಾವ ಸಿನಿಮಾ ಮುರಿಯಲಿದೆ ಎಂದು ನೋಡಿದರೆ ಅತಿಹೆಚ್ಚು ಜನರು ಕನ್ನಡದ ಸಿನಿಮಾ ಕಾಂತಾರ ಚಾಪ್ಟರ್ 1ನತ್ತ ದೃಷ್ಟಿಯನ್ನು ಹೊರಳಿಸುತ್ತಿದ್ದಾರೆ.
ಹೌದು, ಕೆಲವು ಮೂಲಗಳು ಹೇಳುವ ಪ್ರಕಾರ ಕಾಂತಾರಾ ಚಾಪ್ಟರ್-1 2025ರ ಅತಿದೊಡ್ಡ ಹಿಟ್ ಸಿನಿಮಾ ಎಂದೆನಿಸಿಕೊಳ್ಳಲಿದೆಯಂತೆ. 2022ರಲ್ಲಿ ತೆರೆ ಕಂಡಿದ್ದ ಕಾಂತಾರ ಸಿನಿಮಾ ಆಶ್ಚರ್ಯಕರ ರೀತಿಯಲ್ಲಿ ಬಾಕ್ಸ್ ಆಫೀಸ್​ನ್ನು ಕೊಳ್ಳೆ ಹೊಡೆದಿತ್ತು. ಆ ಸಿನಿಮಾವನ್ನು ಕಂಡ ಜನರು ನಿಬ್ಬೆರಗಾಗಿ ಹೋಗಿದ್ದರು. ಒಂದು ಸಾಮಾನ್ಯ ಕಥೆಯೊಂದು ತನ್ನ ನಿರೂಪಣೆಯ ಶೈಲಿಯಿಂದ ಇಡೀ ಭಾರತದಲ್ಲಿ ಸಂಚಲನ ಸೃಷ್ಟಿಸಿತ್ತು. ಹೀಗಾಗಿ ಮುಂದಿನ ವರ್ಷ ರಿಲೀಸ್ ಆಗಲಿರುವ ಕಾಂತಾರ ಚಾಪ್ಟರ್ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಈಗಾಗಲೇ ಸಿನಿ ರಸಿಕರಲ್ಲಿ ಗರಿಗೆದರಿವೆ.
ಇದನ್ನೂ ಓದಿ:ಅಭಿಮಾನಿ ದೇವರುಗಳ ಪೂಜಾ ಫಲ.. ಶಿವಣ್ಣನಿಗೆ ಪುನರ್ಜನ್ಮ! ಏನಾಗಿತ್ತು? ಆಪರೇಷನ್ ಹೇಗಾಯ್ತು?
ಮೊದಲ ಭಾಗ ಸಿಕ್ಕಾಪಟ್ಟೆ ಸೂಪರ್ ಹಿಟ್ ಆಗಿತ್ತು. ವಿಶ್ವದಾದ್ಯಂತ ಸಿನಿಮಾ ಹೆಸರು ಗಳಿಸಿತ್ತು. ಆಸ್ಕರ್ ಪ್ರಶಸ್ತಿಗೆ ಕೂಡ ನಾಮಿನೇಟ್ ಕೂಡ ಆಗಿತ್ತು. ಅದರ ಕಥೆಯ ಎಳೆ ಹಾಗೂ ಅದನ್ನು ಅಸಾಧಾರಣವಾಗಿ ಚಿತ್ರಿಸಿದ ರೀತಿ ಇವೆಲ್ಲವೂ ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ಕೂರಿಸುವಂತೆ ಸೆಳೆದಿತ್ತು. ಈಗ ಎರಡನೇ ಭಾಗ ಬರುತ್ತಿದ್ದು, ಸಿನಿ ರಸಿಕರು ಅಷ್ಟೇ ಕುತೂಹಲದಿಂದ ಕಾಯುತ್ತಿದ್ದಾರೆ. ಕಾಂತಾರದ ಎರಡನೇ ಭಾಗದ ಬಗ್ಗೆ ಈಗಾಗಲೇ ಸಿಕ್ಕಾಪಟ್ಟೆ ನಿರೀಕ್ಷೆಗಳು ಹುಟ್ಟಿಕೊಂಡಿವೆ. ಹೀಗಾಗಿ ಇದು 2025ರಲ್ಲಿ ಅತಿಹೆಚ್ಚು ಹಣಗಳಿಕೆ ಮಾಡುವ ಸಿನಿಮಾ ಆಗಲಿದೆ. ಪುಷ್ಪಾ 2 ಸಿನಿಮಾದ ದಾಖಲೆಯನ್ನು ಪುಡಿಗಟ್ಟಲಿದೆ ಎಂದೇ ಸಿನಿಮಾ ಪಂಡಿತರು ಅಂದಾಜು ಮಾಡಿದ್ದಾರೆ.
ಇದನ್ನೂ ಓದಿ: ಅಮ್ಮನ ಸವಿ ನೆನಪಲ್ಲಿ ಸುದೀಪ.. ಪ್ರತಿದಿನ ತಪ್ಪದೇ ಏನ್ ಮಾಡ್ತಿದ್ದಾರೆ ಗೊತ್ತಾ? ಫೋಟೋ ಇಲ್ಲಿದೆ!
ಈಗಾಗಲೇ ಕಾಂತಾರ 2 ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಇತ್ತೀಚೆಗಷ್ಟೆ ಚಿತ್ರತಂದ ಸಿನಿಮಾ ಅಕ್ಟೋಬರ್ 2, 2025ಕ್ಕೆ ರಿಲೀಸ್ ಮಾಡುವುದಾಗಿಯೂ ಕೂಡ ಹೇಳಿದೆ. ಸಿನಿಮಾ ತಂಡ ಹೇಳುವ ಪ್ರಕಾರ ಇದು ಕದಂಬರ ಕಾಲದ ಕಥೆಯನ್ನು ಹೊಂದಿದೆ ಎಂದು ಹೇಳಲಾಗಿದೆ. ಕರ್ನಾಟಕವನ್ನು ಆಳಿದ ಪ್ರಮುಖ ವಂಶಗಳಲ್ಲಿ ಕದಂಬ ವಂಶವೂ ಕೂಡ ಒಂದು. ಕಲೆ ಹಾಗೂ ಸಂಸ್ಕೃತಿಯ ವಿಚಾರದಲ್ಲಿ ರಾಜ್ಯಕ್ಕೆ ಕದಂಬರ ಕೊಡುಗೆ ಅಪಾರವಿದೆ. ಹೀಗಾಗಿ ಇದು ಒಂದು ನಿರೀಕ್ಷೆಯ ಭಾಗವಾದ್ರೆ, ಸಿನಿಮಾ ರೆಡಿಯಾಗುತ್ತಿರುವುದು ಬರೋಬ್ಬರಿ 100 ಕೋಟಿ ರೂಪಾಯಿ ವೆಚ್ಚದಲ್ಲಿ ಅಂದ್ರೆ ಕಾಂತಾರ ಮೊದಲ ಭಾಗಕ್ಕಿಂತ ಸುಮಾರು 10 ಪಟ್ಟು ಜಾಸ್ತಿ ಬಜೆಟ್​ನಲ್ಲಿ ಈ ಸಿನಿಮಾ ಸಿದ್ಧಗೊಳ್ಳುತ್ತಿದೆ ಇವೆಲ್ಲಾ ವಿಶೇಷತೆಗಳು ಸಿನಿಮಾ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ದ್ವಿಗುಣಗೊಳಿಸಿವೆ.
ಅದೆಲ್ಲದಕ್ಕಿಂತ ಹೆಚ್ಚಾಗಿ ಸಿನಿಮಾದ ನಿರ್ದೇಶಕ ಹಾಗೂ ನಾಯಕ ರಿಶಬ್ ಶೆಟ್ಟಿ ಅತ್ಯಂತ ಪುರಾತನ ಸಮರ ಕಲೆಯಾದ ಕಲಾರಿಪಯಟ್ಟುವನ್ನು ಈ ಸಿನಿಮಾಗಾಗಿ ಕಲಿತಿದ್ದಾರೆ. ಹೀಗಾಗಿ ಸಿನಿಮಾ ಕದಂಬರ ಕಾಲದ ಕಥೆಯನ್ನು ಹೇಗೆ ಹೇಳಲಿದೆ. ಕಲಾರಿಪಯಟ್ಟುವನ್ನು ಈ ಸಿನಿಮಾದಲ್ಲಿ ಹೇಗೆ ಬಳಸಿಕೊಳ್ಳಲಾಗುವುದು ಎಂಬುದರ ಬಗ್ಗೆ ಸಿನಿಮಾ ಪ್ರಿಯರಲ್ಲಿ ತೀರದ ಕುತೂಹಲಗಳು ಸೃಷ್ಟಿಯಾಗಿವೆ. ಈ ಎಲ್ಲಾ ಕಾರಣಗಳಿಂದ 2025ರ ಅತಿದೊಡ್ಡ ಹಿಟ್ ಸಿನಿಮಾ ಕಾಂತಾರ ಆಗಲಿದೆ ಅನ್ನೋದು ಸಿನಿಮಾ ಪಂಡಿತರ ಲೆಕ್ಕಾಚಾರ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us