/newsfirstlive-kannada/media/post_attachments/wp-content/uploads/2024/03/CKM-HOMA.jpg)
ಚಿಕ್ಕಮಗಳೂರು: ರಾಜ್ಯದ ಏಳನೇ ಅತಿ ಎತ್ತರ ಶಿಖರದಲ್ಲಿ ಮಳೆಗಾಗಿ ಹೋಮ-ಹವನ ಮಾಡಲಾಗ್ತಿದೆ. ಜಯಪುರ ಸಮೀಪದ ಮೇರುತಿ ಪರ್ವತದಲ್ಲಿ ಮಳೆಗಾಗಿ ಹೋಮ ನಡೆಯುತ್ತಿದೆ.
ಮೇರುತಿ ಪರ್ವತದ ತಪಾಸಣೆಯಲ್ಲಿ ಪೂಜಾಕೈಂಕಾರ್ಯಗಳು ನಡೆಯುತ್ತಿದ್ದು, ಈ ಹಿಂದೆ ಋಷಿಮುನಿಗಳು ತಪಸ್ಸು ಮಾಡಿದ ಸ್ಥಳ ಎಂಬ ಪ್ರತಿಥಿ ಇದೆ. ಇಲ್ಲಿ ಹೋಮ ನಡೆಸಿದ್ರೆ ಮಳೆಯಾಗುತ್ತದೆ ಎಂಬ ನಂಬಿಕೆ ಇದೆ.
ಇದನ್ನೂ ಓದಿ:‘ಗೋಬಿ’ ಅಂದ್ರೆ ಗಾಬರಿ ಬಿದ್ದ ರಾಜ್ಯದ ಜನ.. ಫಸ್ಟ್ ಟೈಮ್ ವ್ಯಾಪಾರದಲ್ಲಿ ದಾಖಲೆಯ ಕುಸಿತ!
ಮೇರುತಿ ಪರ್ವತದಲ್ಲಿ ಕೆಲ ಜಲಮೂಲಗಳು ಇವೆ. ಈ ವರ್ಷ ಮಲೆನಾಡು ಬರದಿಂದ ತತ್ತರಿಸಿದೆ. ಈ ಹಿನ್ನೆಲೆಯಲ್ಲಿ ಋತ್ವಿಜರು ನೇತೃತ್ವದಲ್ಲಿ ಪೂಜಾಕಾರ್ಯಗಳು ನಡೆಯುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಜಯಪುರ ಸಮೀಪದಲ್ಲಿ ಮೇರುತಿ ಪರ್ವತ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ