ಹೋಂ ಗಾರ್ಡ್​​ ಉದ್ಯೋಗಕ್ಕೆ ಅರ್ಜಿ ವಿತರಣೆ ಆರಂಭ.. SSLC ಪಾಸ್ ಆಗಿದ್ರೆ ಸಾಕು

author-image
Bheemappa
Updated On
ಇನ್ಸ್‌ಪೆಕ್ಟರ್, ಹೆಡ್​ಕಾನ್​ಸ್ಟೆಬಲ್, ಕಾನ್​ಸ್ಟೆಬಲ್ ಹುದ್ದೆಗಳ ನೇಮಕಾತಿ.. ಅರ್ಜಿ ಯಾವಾಗ ಆರಂಭ?
Advertisment
  • ಗೃಹ ರಕ್ಷಕ ಉದ್ಯೋಗದ ಅರ್ಜಿಯನ್ನು ಎಲ್ಲಿ ನೀಡಲಾಗುತ್ತದೆ?
  • ಈ ಕೆಲಸಕ್ಕೆ ಪುರುಷ ಹಾಗೂ ಮಹಿಳೆ ಇಬ್ಬರಿಗೂ ಅವಕಾಶವಿದೆ
  • ಹೋಂ ಗಾರ್ಡ್​​ ಉದ್ಯೋಗಕ್ಕೆ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ?

ಕಾರವಾರ: ಹೋಂ ಗಾರ್ಡ್​​ ಉದ್ಯೋಗ​ ಅಥವಾ ಗೃಹ ರಕ್ಷಕ ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಗುಡ್​ನ್ಯೂಸ್ ಒಂದು ಇದೆ. ಜಸ್ಟ್ 10ನೇ ತರಗತಿ ಪಾಸ್ ಆಗಿದ್ದರೇ ಸಾಕು ನೀವು ಈ ಕೆಲಸಕ್ಕೆ ಅರ್ಜಿ ಸಲ್ಲಿಕೆ ಮಾಡಬಹುದು. ಪುರುಷ ಹಾಗೂ ಮಹಿಳೆ ಇಬ್ಬರಿಗೂ ಅವಕಾಶವಿದೆ. ಅರ್ಜಿ ನೀಡುವ ಕುರಿತಂತೆ ಇತರೆ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.

ಉತ್ತರ ಕನ್ನಡ ಜಿಲ್ಲಾ ಗೃಹ ರಕ್ಷಕ ದಳವು 140 ಹೋಂ ಗಾರ್ಡ್​​​ ಹುದ್ದೆಗಳನ್ನು ನೇಮಕ ಮಾಡುತ್ತಿದೆ. ಇದಕ್ಕೆ ಬೇಕಾದ ಅರ್ಜಿಗಳನ್ನು ಈಗಾಗಲೇ ನೀಡಲಾಗುತ್ತಿದೆ. ಯಾರಿಗೆ ಆಸಕ್ತಿ ಇದೆಯೋ ಅಂತವರು ಇಲ್ಲಿ ನೀಡಲಾದ ವಿಳಾಸಕ್ಕೆ ತೆರಳಿ ಅರ್ಜಿ ಪ್ರತಿಯನ್ನು ಉಚಿತವಾಗಿ ಪಡೆದುಕೊಂಡು ಪೂರ್ಣವಾಗಿ ಭರ್ತಿ ಮಾಡಿದ ನಂತರ ಮತ್ತೆ ಇಲಾಖೆಗೆ ಸಲ್ಲಿಸಬೇಕು.

ತಾಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯರು ನೀಡಿದ ಮೆಡಿಕಲ್ ಫಿಟ್ನೆಸ್ ಪ್ರಮಾಣ ಪತ್ರದ ಜೊತೆಗೆ ಆಧಾರ ಕಾರ್ಡ್​, ಎಸ್​​ಎಸ್​ಎಲ್​ಸಿ ಅಂಕ ಪಟ್ಟಿ​ ಅನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕೃತ ಮಾಡಿಕೊಂಡು ಅರ್ಜಿ ಜೊತೆಗೆ ಸಲ್ಲಿಸಬೇಕು. ಭರ್ತಿ ಮಾಡಿದ ಅರ್ಜಿ ನೀಡಲು ಕೊನೆ ದಿನಾಂಕ ಮಾರ್ಚ್ 07 ಆಗಿದೆ.

ಅರ್ಹತೆ ಏನೇನು?

  • 10ನೇ ತರಗತಿ ಪಾಸ್ ಆಗಿರಬೇಕು
  • 19 ವರ್ಷದಿಂದ 50 ವರ್ಷದ ಒಳಗಿರಬೇಕು
  • ಪುರುಷರು 163 ಸೆ.ಮೀ ಎತ್ತರ
  • ಮಹಿಳೆಯರು 150 ಸೆ.ಮೀ ಎತ್ತರ
  • ಯಾವುದೇ ಅಪರಾಧಿಕ/ರಾಜಕೀಯ ಹಿನ್ನೆಲೆ ಇರಬಾರದು

ಇದನ್ನೂ ಓದಿ:CDSCO; ಉದ್ಯೋಗದಲ್ಲಿ ಅನುಭವ ಇರುವವರಿಗೆ ಇಲ್ಲಿದೆ ಕೆಲಸ.. ಆರಂಭದಲ್ಲೇ ಸಂಬಳ 67,700 ರೂ

publive-image

ಮೊದಲ ಆದ್ಯತೆ ಯಾರಿಗೆ?.
ಹೆವಿ ಡ್ರೈವಿಂಗ್ ಲೈಸೆನ್ಸ್, ಅಡುಗೆ ಭಟ್ಟರು, ಮೆಕಾನಿಕ್, ಪೈಂಟರ್, ಪ್ಲಂಬರ್, ಕಂಪ್ಯೂಟರ್ ಜ್ಞಾನ, ಎನ್​ಸಿಸಿ ಹಾಗೂ ಕ್ರೀಡಾಕೂಟದಲ್ಲಿ ಉತ್ತಮ ಸಾಮರ್ಥ್ಯ ಇದ್ದವರಿಗೆ ಮೊದಲ ಆದ್ಯತೆ ಕೊಟ್ಟು ನೇಮಕ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ನೀಡುವ ವಿಳಾಸ

ಗೃಹ ರಕ್ಷಕ ದಳದ ಜಿಲ್ಲಾ ಕಚೇರಿ,
ಸರ್ವೋದಯ ನಗರ,
ದಿವಕರ್ ಕಾಮರ್ಸ್ ಕಾಲೇಜ್ ಎದುರು,
ಕೊಡಿಭಾಗ, ಕಾರವಾರ.

ಇಲ್ಲಿ ಅರ್ಜಿಯನ್ನು ಉಚಿತವಾಗಿ ಪಡೆಯಬಹುದು.

ಸೂಚನೆ: ಗೃಹರಕ್ಷಕ ದಳ ಸಂಸ್ಥೆ ಸ್ವಯಂ ಸೇವಕ ಸಂಸ್ಥೆ ಆಗಿದೆ. ಈ ಕೆಲಸವೂ ಖಾಯಂ ಸರ್ಕಾರಿ ನೌಕರಿ ಅಲ್ಲ. ಯಾವುದೇ ರೀತಿಯ ಮಾಸಿಕ ಸಂಬಳ ಅಥವಾ ವಿಶೇಷ ಭತ್ಯೆ ನೀಡಲ್ಲ. ಸರ್ಕಾರ ನಿಗದಿ ಪಡಿಸಿದ ಗೌರವ ಧನವನ್ನು ಕರ್ತವ್ಯ ನಿರ್ವಹಿಸುವ ಅವಧಿಗೆ ಮಾತ್ರ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗೆ- 08382 -200137/ 226361 ಅಥವಾ 9480898775 ಸಂಪರ್ಕಿಸಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment