Home Guards; ಅರ್ಜಿ ವಿತರಣೆ ಮಾಡುವುದು ಯಾವಾಗ.. ಗೃಹರಕ್ಷಕ ದಳ ಸೇರಲು ಅರ್ಹತೆಗಳೇನು?

author-image
Bheemappa
Updated On
Home Guards; ಅರ್ಜಿ ವಿತರಣೆ ಮಾಡುವುದು ಯಾವಾಗ.. ಗೃಹರಕ್ಷಕ ದಳ ಸೇರಲು ಅರ್ಹತೆಗಳೇನು?
Advertisment
  • ಸರ್ಕಾರಿ ನೌಕರರು ಸ್ವಯಂ ಸೇವಕ ಸದಸ್ಯರಾಗಬಹುದು
  • ಹೋಂ ಗಾರ್ಡ್ ಕೆಲಸಕ್ಕೆ ದಿನಕ್ಕೆ ಎಷ್ಟು ಹಣ ಕೊಡುತ್ತಾರೆ?
  • 10ನೇ ತರಗತಿಯನ್ನು ಕಡ್ಡಾಯವಾಗಿ ಪಾಸ್ ಆಗಿರಬೇಕು

ಕರ್ನಾಟಕದಲ್ಲಿ ಪೊಲೀಸ್ ಇಲಾಖೆ ಹೊರತುಪಡಿಸಿ ಹೋಂ ಗಾರ್ಡ್ ಅಥವಾ​ ಗೃಹರಕ್ಷಕ ದಳವೂ ಕರ್ತವ್ಯ ನಿರ್ವಹಿಸುತ್ತಿದೆ. ಗೃಹರಕ್ಷಕ ದಳ ಪೊಲೀಸ್ ಇಲಾಖೆಗೆ ಪೂರಕ ಪಡೆಯಾಗಿ ಕೆಲಸ ಮಾಡುತ್ತಿದೆ. ಸದ್ಯ ಇದೀಗ ಅರ್ಹ ಹಾಗೂ ಆಸಕ್ತಿ ಹೊಂದಿದ ಅಭ್ಯರ್ಥಿಗಳಿಂದ ಕರ್ನಾಟಕ ಸರ್ಕಾರ ಅರ್ಜಿಗಳನ್ನ ಆಹ್ವಾನ ಮಾಡಿದೆ.

ಗೃಹರಕ್ಷಕ ದಳದ ಅರ್ಜಿಗಳನ್ನು ಆನ್​ಲೈನ್​ನಲ್ಲಿ ಅಪ್ಲೇ ಮಾಡುವುದು ಬೇಕಿಲ್ಲ. ಇದು ಸಂಪೂರ್ಣ ಆಫ್​ಲೈನ್ ಆಗಿದೆ. ಹೀಗಾಗಿ ಅಭ್ಯರ್ಥಿಗಳು ಅರ್ಜಿಯನ್ನು ಈ ಕೆಳಗೆ ನೀಡಲಾಗಿರುವ ವಿಳಾಸದಿಂದ ಪಡೆಯಬೇಕು. ಇನ್ನು ಈ ಹುದ್ದೆಗೆ ಸಂಬಂಧಿಸಿದ ಇತರೆ ಮಾಹಿತಿ ಈ ಕೆಳಗೆ ನೀಡಲಾಗಿದೆ. ಆಸಕ್ತಿ ಇರುವವರು ಇದನ್ನು ಕೊನೆವರೆಗೂ ಗಮನಿಸಿ.

ಗೃಹರಕ್ಷಕ ದಳ ಒಂದು ಸ್ವಯಂ ಸೇವಾ ಸಂಸ್ಥೆಯಾಗಿದೆ. ಈ ಸಂಸ್ಥೆಯ ಉದ್ಯೋಗಕ್ಕೆ ಸೇರುವ ಅಭ್ಯರ್ಥಿಗಳಿಗೆ ವೇತನ ಇರುವುದಿಲ್ಲ. ಆದರೆ ಘಟನ ಸರ್ಕಾರ ಕರ್ತವ್ಯ ನಿರ್ವಹಿಸುವ ವೇಳೆ ಕಾನೂನು ಸುವ್ಯವಸ್ಥೆ ಕರ್ತವ್ಯಕ್ಕಾಗಿ ದಿನಕ್ಕೆ 800 ರೂಪಾಯಿಗಳಂತೆ ನೀಡಲಾಗುತ್ತದೆ. ಬೆಂಗಳೂರಿನ ಇತರೆ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿದ ದಿನಕ್ಕೆ 600 ರೂ.ಗಳಂತೆ ಹಾಗೂ ಗ್ರಮಾಂತರ ಪ್ರದೇಶದಲ್ಲಿ ಕೆಲಸ ಮಾಡುವವರಿಗೆ 500 ರೂ.ಗಳಂತೆ ಗೌರವ ಧನವಾಗಿ ನೀಡಲಾಗುತ್ತದೆ.

ಇದನ್ನೂ ಓದಿ: 2,847 ಹುದ್ದೆಗಳಿಗೆ ನೇರ ನೇಮಕಾತಿ.. ಬೆಳಗಾವಿಯ 2 ಹಂತದ Rallyಯಲ್ಲಿ ನೀವೂ ಭಾಗಿಯಾಗಿ

publive-image

ಬೆಂಗಳೂರು ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ನಾಗರಿಕರು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೌಕರರು ಈ ಸಂಸ್ಥೆಯಲ್ಲಿ ಸ್ವಯಂ ಸೇವಕ ಸದಸ್ಯರಾಗಿ ಸೇರಿಕೊಳ್ಳಬಹುದು. ವೃತ್ತಿ ಕೌಶಲ್ಯತೆ ಹೊಂದಿರುವವರಿಗೆ ಮೊದಲ ಆದ್ಯತೆ ನೀಡಲಾಗುವುದು.

ಗೃಹರಕ್ಷಕ ದಳಕ್ಕೆ ಅರ್ಜಿ ಸಲ್ಲಿಸಲು ಅರ್ಹತೆಗಳೇನು..?

  • 10ನೇ ತರಗತಿಯನ್ನು ಕಡ್ಡಾಯವಾಗಿ ಪಾಸ್ ಆಗಿರಬೇಕು
  • ಯಾವುದೇ ರಾಜಕೀಯ ಪಕ್ಕಕ್ಕೆ ಸೇರಿರಬಾರದು
  • 19 ವರ್ಷದಿಂದ 40 ವರ್ಷದ ಒಳಗಿನವರು ಆಗಿರಬೇಕು
  • ಶಾರೀರಿಕ ಧೃಡತೆಯುಳ್ಳವರಾಗಿರಬೇಕು
  • ಮಾನಸಿಕ ಅಸ್ವಸ್ಥರಾಗಿರಬಾರದು

ಅರ್ಜಿಗಳನ್ನ ಎಲ್ಲಿ ನೀಡಲಾಗುತ್ತದೆ..?

ಸಮಾದೇಷ್ಟರು,
ಗೃಹರಕ್ಷಕ ದಳ, ಬೆಂಗಳೂರು ಗ್ರಾಮಾಂತರ ಜಿಲ್ಲೆ
ಶೇಷಾದ್ರಿ ರಸ್ತೆ, ಬೆಂಗಳೂರು- 560009
ದೂರವಾಣಿ ಸಂಖ್ಯೆ- 080-22263447

ಅರ್ಜಿ ವಿತರಿಸುವ ದಿನಾಂಕ
15 ಅಕ್ಟೋಬರ್​ನಿಂದ ನವೆಂಬರ್ 3ರ​​ವರೆಗೆ

ಅರ್ಜಿ ಸಲ್ಲಿಕೆ ಮಾಡಲು ಕೊನೆ ದಿನಾಂಕ..?
15 ನವೆಂಬರ್ 2024

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment