newsfirstkannada.com

ಪಾಕ್ ಪರ ಘೋಷಣೆ ವಿರುದ್ಧ ಕೇಸ್ ದಾಖಲಾಗಿದೆ, ಕೂಗಿದ್ರೆ ಕ್ರಮ- ಡಾ.ಜಿ.ಪರಮೇಶ್ವರ್ ಹೇಳಿಕೆ

Share :

Published February 28, 2024 at 9:58am

Update February 28, 2024 at 10:04am

    ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ಆರೋಪ

    ಬಿಜೆಪಿ ಕೊಟ್ಟಿರೋ ದೂರನ್ನೂ ಅದಕ್ಕೆ ಸೇರಿಸಿದ್ದೇವೆ ಎಂದ ಗೃಹ ಸಚಿವ

    ನಿನ್ನೆ ನಡೆದಿದೆ ಎನ್ನಲಾಗಿರುವ ಘಟನೆಗೆ ಪರಮೇಶ್ವರ್ ಪ್ರತಿಕ್ರಿಯೆ

ಬೆಂಗಳೂರು: ನಿನ್ನೆ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ ಎನ್ನಲಾಗಿರುವ ವಿಚಾರಕ್ಕೆ ಸಂಬಂಧಿಸಿ ಗೃಹ ಸಚಿವ ಡಾ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ಘಟನೆ ಸಂಬಂಧ ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಿದ್ದಾರೆ. ಆ ವಿಡಿಯೋ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ ಎಂದಿದ್ದಾರೆ.

ಅಧಿಕೃತವಾಗಿ ಟೆಲಿಕಾಸ್ಟ್ ಆಗಿರೋ ಕ್ಲಿಪಿಂಗ್ ಪಡೆದು ತನಿಖೆಗೆ ಒಳಪಡಿಸುತ್ತೇವೆ. ಈಗಾಗಲೇ ಸುಮೋಟೋ ಕೇಸ್ ದಾಖಲಾಗಿದೆ. ಬಿಜೆಪಿ ಕೊಟ್ಟಿರೋ ದೂರನ್ನೂ ಅದಕ್ಕೆ ಸೇರಿಸಿದ್ದೇವೆ. ಯಾರು ಮೊದಲು ಟೆಲಿಕಾಸ್ಟ್ ಮಾಡಿದ್ದಾರೆ, ಅವರ ವಿಡಿಯೋ ಪಡೆದು ತನಿಖೆ ಮಾಡ್ತೇವೆ. ಎಫ್​ಎಸ್​ಎಲ್ ಕಳುಹಿಸಿವ ಪ್ರಕಿಯೆಗಳು ಆರಂಭವಾಗಿವೆ. ಕೂಗಿದ್ರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಪೊಲೀಸರ ಮಾಡಿರೋ ಚಿತ್ರೀಕರಣ, ವಿಧಾನಸೌಧ ಸಿಸಿ ಕ್ಯಾಮರಾ ಎಲ್ಲವನ್ನೂ ಪಡೆದು ತನಿಖೆ ಮಾಡ್ತೇವೆ. ಕೆಲವರು ನಾಸಿರ್ ಸಾಬ್ ಅಂತಾರೆ, ಕೆಲವರು ಪಾಕಿಸ್ತಾನ ಅಂತಾರೆ. ಇದರ ಸತ್ಯಾಸತ್ಯತೆ ವೈಜ್ಞಾನಿಕವಾಗಿ ತಿಳಿಯಬೇಕು ಎಂದು ಎಫ್ಎಸ್​ಎಲ್​ಗೆ ಕಳುಹಿಸುತ್ತಿದ್ದೇವೆ. ಒಂದು ವೇಳೆ ಕೂಗಿದ್ರೆ ಕಾನೂನು ಕ್ರಮ ಆಗಿಯೇ ಆಗುತ್ತದೆ ಎಂದು ತಿಳಿಸಿದ್ದಾರೆ.

ಸದನ ಒಳಗೆ ಹೊರಗೆ ಬಿಜೆಪಿ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿ.. ಅವರು ಮಾಡಲಿ, ನಾವು ತಪ್ಪು ಅಂತ ಹೇಳಲ್ಲ. ಕಾನೂನು ಚೌಕಟ್ಟಿನಲ್ಲಿ ಮಾಡಲಿ. ಇದರಲ್ಲಿ ಕಾಂಗ್ರೆಸ್ ತಪ್ಪೇನಿದೆ? ಮುಸ್ಲಿ‌ಂ ತುಷ್ಠೀಕರಣ ಮಾಡ್ತಾರೆ ಅಂತ ಹೇಳ್ತಾನೆ ಬಂದಿದ್ದಾರೆ, ಹೋಸದೇನಲ್ವಲ್ಲ. ನಾಸೀರ್ ಹುಸೇನ್ ಪತ್ರಕರ್ತರ ಮೇಲೆ ದೂಂಡಾ ವರ್ತನೆ ಆರೋಪಕ್ಕೆ ಪ್ರತಿಕ್ರಿಯಿಸಿ.. ಅವರು ಏನ್ ಹೇಳಿದ್ದಾರೆ ಅಂತ ನೋಡಿಲ್ಲ. ನೋಡಿದ ಆಮೇಲೆ ಹೇಳ್ತೀನಿ ಎಂದರು.

ಏನಿದು ಆರೋಪ ಪ್ರಕರಣ..?

ಕರ್ನಾಟಕದಿಂದ ರಾಜ್ಯಸಭೆಗೆ ಖಾಲಿಯಾಗಿದ್ದ 4 ಸ್ಥಾನಗಳಿಗೆ ನಿನ್ನೆ ವಿಧಾನಸೌಧದಲ್ಲಿ ಚುನಾವಣೆ ನಡೆದಿತ್ತು. ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಇಬ್ಬರು, ಕಾಂಗ್ರೆಸ್​ನಿಂದ ಮೂವರು ರಾಜ್ಯಸಭಾ ಚುನಾವಣಾ ಕಣದಲ್ಲಿದ್ದರು. ಈ ಚುನಾವಣೆಯಲ್ಲಿ ಕಾಂಗ್ರೆಸ್​ನ ಮೂವರು ಅಭ್ಯರ್ಥಿಗಳು ಹಾಗೂ ದೋಸ್ತಿಯಿಂದ ಒಂದು ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್​​ನ ನಾಸೀರ್ ಹುಸೇನ್ ರಾಜ್ಯಸಭೆಗೆ ಆಯ್ಕೆ ಬೆನ್ನಲ್ಲೆ ವಿಧಾನಸೌಧದಲ್ಲಿ ಸೆಲೆಬ್ರೇಷನ್ ನಡೆದಿತ್ತು. ಈ ​ ವೇಳೆ ‘ಪಾಕಿಸ್ತಾನ್​ ಜಿಂದಾಬಾದ್’​ ಎಂಬ ಘೋಷಣೆ ಕೂಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಇದು ಭಾರೀ ವಿವಾದಕ್ಕೀಡಾಗಿದೆ. ಪಾಕ್ ಪರ ಘೋಷಣೆ ಕೂಗಿದ್ದಾರೆ ಎನ್ನಲಾಗಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಾಕ್ ಪರ ಘೋಷಣೆ ವಿರುದ್ಧ ಕೇಸ್ ದಾಖಲಾಗಿದೆ, ಕೂಗಿದ್ರೆ ಕ್ರಮ- ಡಾ.ಜಿ.ಪರಮೇಶ್ವರ್ ಹೇಳಿಕೆ

https://newsfirstlive.com/wp-content/uploads/2024/02/PARAMESHWAR-2.jpg

Load More