newsfirstkannada.com

‘ಅದು ಪೊಲೀಸರ ದೌರ್ಬಲ್ಯ ಅಲ್ಲ, ಅದನ್ನೇ ವೀಕ್​​ನೆಸ್ ಅನ್ಕೊಂಡ್ರೆ..’-ಹೆಗಡೆಗೆ ಪರಮೇಶ್ವರ್ ವಾರ್ನ್

Share :

Published January 18, 2024 at 2:36pm

    ಅನಂತ್ ಕುಮಾರ್ ಹೆಗಡೆ ಆಕ್ಷೇಪಾರ್ಹ ಹೇಳಿಕೆಗಳನ್ನು ನಿಲ್ಲಿಸಬೇಕು

    ಹೆಗಡೆ ವಿಚಾರದಲ್ಲಿ ಸಂಯಮದಿಂದ ವರ್ತಿಸಬೇಕಾಗುತ್ತದೆ

    ಮಾತು ಮುಂದುವರೆಸಿದರೆ ಕ್ರಮ ತೆಗೆದುಕೊಳ್ಳಲೇಬೇಕಾಗುತ್ತೆ

ಬೆಂಗಳೂರು: ಸಂಸದರು ಇಂತಹ ಮಾತುಗಳು ಮುಂದುವರೆಸಿದರೆ ಕ್ರಮ ತೆಗೆದುಕೊಳ್ಳುತ್ತೇವೆ. ಕೂಡಲೇ ಆಕ್ರೋಶಕಾರಿ, ಪ್ರಚೋದನಾಕಾರಿ ಹೇಳಿಕೆಗಳನ್ನು ನಿಲ್ಲಿಸಬೇಕು ಎಂದು ಸಂಸದ ಅನಂತಕುಮಾರ್ ಹೆಗಡೆಗೆ ಗೃಹ ಸಚಿವ ಡಾ.ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿರುವ ಅವರು.. ಅನಂತಕುಮಾರ್ ಹೆಗಡೆ ಓರ್ವ ಸಂಸತ್ ಸದಸ್ಯರು. ರಾಜಕೀಯ ಅನುಭವ ಇರೋರು. ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಅನ್ನೋದ್ರಲ್ಲಿ ಎರಡು ಅನುಮಾನ ಇಲ್ಲ. ಕಾನೂನು ಎಲ್ಲರಿಗೂ ಒಂದೇ ಇರುತ್ತದೆ.

ಅವರೊಬ್ಬ ನಾಯಕ ಅನ್ನೋ ಕಾರಣಕ್ಕೆ ಪೊಲೀಸರು ಸಂಯಮದಿಂದ ವರ್ತಿಸಿದ್ದಾರೆ. ಅದನ್ನೇ ವೀಕ್​ನೆಸ್​ ಎಂದು ತಿಳಿದುಕೊಳ್ಳೋದು ಬೇಡ. ಅವರ ಸ್ಥಾನಕ್ಕೆ ಗೌರವ ಕೊಡಬೇಕು ಅನ್ನೋ ಕಾರಣಕ್ಕೆ ಪೊಲೀಸರು, ಇಲಾಖೆಯವರು ಹೆಜಿಟೇಟ್ ಮಾಡ್ತಾರೆ. ಅನಿವಾರ್ಯ ಎದುರಾದರೆ ಪೊಲೀಸರು ಕ್ರಮಕ್ಕೆ ತೆದುಕೊಳ್ತಾರೆ. ಅದು ದೌರ್ಬಲ್ಯ ಅಲ್ಲ, ಪೊಲೀಸರು ಅವರಿಗೆ ಸಮಯ ಕೊಟ್ಟಿದ್ದಾರೆ. ಮಾತು ಮುಂದುವರೆಸಿದರೆ ಕ್ರಮ ತೆಗೆದುಕೊಳ್ಳಲೇಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಅದು ಪೊಲೀಸರ ದೌರ್ಬಲ್ಯ ಅಲ್ಲ, ಅದನ್ನೇ ವೀಕ್​​ನೆಸ್ ಅನ್ಕೊಂಡ್ರೆ..’-ಹೆಗಡೆಗೆ ಪರಮೇಶ್ವರ್ ವಾರ್ನ್

https://newsfirstlive.com/wp-content/uploads/2024/01/PARAM-ANANT.jpg

Load More