/newsfirstlive-kannada/media/post_attachments/wp-content/uploads/2024/08/PSI.jpg)
ಬೆಂಗಳೂರು: ಯಾದಗಿರಿ ಪಿಎಸ್ಐ ಪರಶುರಾಮ ಅನುಮನಾಸ್ಪದ ಸಾವಿನ ಬಗ್ಗೆ ಈಗಾಗಲೇ ತನಿಖೆಗೆ ಸೂಚನೆ ಕೊಟ್ಟಿದ್ದೇನಿ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.
ಅವರು ನ್ಯಾಚುರಲ್ ಆಗಿ ಮೃತಪಟ್ಟಿದ್ದಾಗಿ ಸುದ್ದಿ ಬರ್ತಿದೆ. ಅವರು ಸೂಸೈಡ್ ಮಾಡಿಲ್ಲ, ಡೆತ್ ನೋಟ್ ಬರೆದಿಟ್ಟಿಲ್ಲ. ಕುಟುಂಬಸ್ಥರು ವರ್ಗಾವಣೆ ಮಾಡಿದ್ದಾರೆ ಅನ್ನೋ ಕಾರಣ ಕೊಟ್ಟಿದ್ದಾರೆ. ಇದನ್ನೆಲ್ಲಾ ತನಿಖೆ ಮಾಡಿ ಅಂತ ನಾನು ಸೂಚನೆ ಕೊಟ್ಟಿದ್ದೇನಿ. ವರದಿ ಬಂದ ಮೇಲೆ ನೋಡೋಣ. ಅವರ ಪತ್ನಿ ಆರೋಪವನ್ನೂ ನಾನು ಪರಿಗಣಿಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ:‘ಮಗು ಅಪ್ಪ ಎಲ್ಲಿ ಎಂದು ಕೇಳಿದ್ರೆ ನಾನು ಏನ್ ಹೇಳಲಿ..’ ಪಿಎಸ್ಐ ಪರಶುರಾಮ್ ಪತ್ನಿ ಕಣ್ಣೀರು
ಪ್ರಾಥಮಿಕವಾಗಿ ಕೆಲವೊಂದಿಷ್ಟು ಮಾಹಿತಿ ಕಲೆ ಹಾಕಬೇಕು ಅಲ್ವಾ? ಶೀಘ್ರದಲ್ಲೇ ಎಫ್ಐಆರ್ ಹಾಕ್ತಾರೆ. ನಾನು ಕೂಡ ಸೂಚನೆ ಕೊಟ್ಟಿದ್ದೀನಿ. ಆರೋಪವು ಆರೋಪ ಅಷ್ಟೇ ಇರುತ್ತದೆ, ಅದೇ ಕರೆಕ್ಟ್ ಅಥವಾ ಇಲ್ಲ ಅಂತಾನೂ ಹೇಳೋಕಾಗಲ್ಲ. ತನಿಖೆ ಮಾಡಿದ್ಮೇಲೆ ಎಲ್ಲವೂ ಹೊರಬರುತ್ತದೆ. ಪೊಲೀಸ್ ಅಧಿಕಾರಿಗಳು ಪರಿಶೀಲನೆ ಮಾಡಿ ಎಫ್ಐಆರ್ ಹಾಕ್ತಾರೆ. ಅವರು ಶಾಸಕರಿದ್ದರೂ ಅಥವಾ ಬೇರೆಯವರಿದ್ದರೂ ಎಫ್ಐಆರ್ ಹಾಕ್ತಾರೆ ಎಂದಿದ್ದಾರೆ.
ಇದನ್ನೂ ಓದಿ:ಪಂದ್ಯಕ್ಕೆ ಅನಿರೀಕ್ಷಿತ ಟ್ವಿಸ್ಟ್ ಕೊಟ್ಟ ಅಸಲಂಕಾ.. ಸ್ವಯಂಕೃತ ಅಪರಾಧಗಳಿಗೆ ಬೆಲೆ ತೆತ್ತ ಟೀಂ ಇಂಡಿಯಾ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ