newsfirstkannada.com

ಪ್ರಜ್ವಲ್​​ರನ್ನ ವಿದೇಶದಿಂದ ವಾಪಸ್​ ಕರೆಸಿಕೊಳ್ಳುವ ಬಗ್ಗೆ ಮಾಹಿತಿ ಬಿಚ್ಚಿಟ್ಟ ಗೃಹ ಸಚಿವರು; ಆಮೇಲೆ ಏನ್ಮಾಡ್ತಾರಂತೆ ಗೊತ್ತಾ?

Share :

Published April 29, 2024 at 10:10am

Update April 29, 2024 at 10:12am

  ಹಾಸನ ಅಶ್ಲೀಲ ವಿಡಿಯೋ ಪ್ರಕರಣವನ್ನು ಎಸ್​​ಐಟಿಗೆ ಕೊಟ್ಟಿದ್ದೇವೆ

  ಇದರಲ್ಲಿ ಎಸ್​ಪಿ ಲೆವೆಲ್ ಅಧಿಕಾರಿಗಳು ಇದ್ದಾರೆ ಎಂದ ಗೃಹ ಸಚಿವರು

  ಪೆನ್ ಡ್ರೈವ್, ಸಾಕ್ಷಿ ಎಲ್ಲವನ್ನೂ ಕಲೆ ಹಾಕುತ್ತಿದ್ದಾರೆ ಎಂದ ಜಿ ಪರಮೇಶ್ವರ್​​

ಹಾಸನ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪರಮೇಶ್ವರ್ ಮಾತನಾಡಿದ್ದಾರೆ. ಪ್ರಕರಣ ಎಸ್​​ಐಟಿ ಗೆ ಕೊಟ್ಟಿದ್ದೇವೆ. ಇದರಲ್ಲಿ ಎಸ್​ಪಿ ಲೆವೆಲ್ ಅಧಿಕಾರಿಗಳು ಇದ್ದಾರೆ. ಎಸ್ಐಟಿ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ನಂತರ ಮಾತನಾಡಿದ ಗೃಹ ಸಚಿವರು, ಪೆನ್ ಡ್ರೈವ್, ಸಾಕ್ಷಿ ಎಲ್ಲವನ್ನೂ ಕಲೆ ಹಾಕುತ್ತಿದ್ದಾರೆ. ವಿದೇಶದಿಂದ ಅವರನ್ನ ವಾಪಸ್ ಕರೆಸಿಕೊಳ್ಳುತ್ತೇವೆ. ಎಸ್​ಐಟಿ ಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಕಾನೂನು ಕ್ರಮ ಆಗಲಿದೆ. ಎಲ್ಲಾ ವಿಡಿಯೋಗಳು ಕೂಡ ಹೊರ ಬರುತ್ತೆ. ನಂತರ ಫಾರೆನ್ಸಿಕ್ ಲ್ಯಾಬ್ ಗೆ ಕಳುಹಿಸುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹಾಸನದಲ್ಲಿ ಅಶ್ಲೀಲ ವಿಡಿಯೋ ಕೇಸ್​; ಹೇಗಿರುತ್ತೆ ಬಿ.ಕೆ ಸಿಂಗ್ ನೇತೃತ್ವದ ಎಸ್​ಐಟಿ ತನಿಖೆ?

ದೂರುದಾರರು ಯಾರ ಹೆಸರು ಉಲ್ಲೇಖ ಮಾಡಿದ್ದಾರೆ ಅವರ ವಿರುದ್ಧ ಕ್ರಮ ಆಗಲಿದೆ. ರೇವಣ್ಣ ಇರಲಿ ಯಾರೇ ಇದ್ರು ಕ್ರಮ ಕೈಗೊಳ್ಳುತ್ತೇವೆ. ಮಹಿಳಾ ಆಯೋಗ ಸಿಎಂಗೆ ಡಿಜಿಪಿಗೆ ಪತ್ರ ಬರೆದಿದ್ರು. ಆ ಹಿನ್ನಲೆ ಕ್ರಮ ತೆಗೆದುಕೊಳ್ಳಲಾಗಿದೆ. ಸಂತ್ರಸ್ತರಿಗೆ ಭಯ ಹುಟ್ಟಿಸಿದ್ರೆ ಅವರಿಗೆ ನಾವು ಭದ್ರತೆ ನೀಡುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಜ್ವಲ್​​ರನ್ನ ವಿದೇಶದಿಂದ ವಾಪಸ್​ ಕರೆಸಿಕೊಳ್ಳುವ ಬಗ್ಗೆ ಮಾಹಿತಿ ಬಿಚ್ಚಿಟ್ಟ ಗೃಹ ಸಚಿವರು; ಆಮೇಲೆ ಏನ್ಮಾಡ್ತಾರಂತೆ ಗೊತ್ತಾ?

https://newsfirstlive.com/wp-content/uploads/2024/04/G-Parameshwar.jpg

Load More