ಟ್ರಂಪ್, ಮಸ್ಕ್​ ವಿರುದ್ಧವೇ ಸಿಡಿದೆದ್ದ ಅಮೆರಿಕಾದ ಜನರು.. ಏನಿದು ಹ್ಯಾಂಡ್ಸ್​ ಅಪ್ ಪ್ರತಿಭಟನೆ? ಕಾರಣವೇನು?

author-image
Gopal Kulkarni
Updated On
ಟ್ರಂಪ್, ಮಸ್ಕ್​ ವಿರುದ್ಧವೇ ಸಿಡಿದೆದ್ದ ಅಮೆರಿಕಾದ ಜನರು.. ಏನಿದು ಹ್ಯಾಂಡ್ಸ್​ ಅಪ್ ಪ್ರತಿಭಟನೆ? ಕಾರಣವೇನು?
Advertisment
  • ಡೊನಾಲ್ಡ್ ಟ್ರಂಪ್​ಗೆ ತಿರುಬಾಣವಾದ ಆಮದು ಮೇಲಿನ ಸುಂಕದ ನೀತಿ
  • ಸರ್ಕಾರದ ವಿರುದ್ಧ ತಿರುಗಿ ಬಿದ್ದ ಅಮೆರಿಕಾದ ನಾಗರಿಕರಿಂದ ಪ್ರತಿಭಟನೆ
  • ಹ್ಯಾಂಡ್ಸ್​ ಆಫ್​ ಱಲಿಯೊಂದಿಗೆ ಬೀದಿಗಳಿದ ಸಹಸ್ರಾರು ಜನರಿಂದ ಮುಷ್ಕರ

ಅಮೆರಿಕಾ ಅಧ್ಯಕ್ಷ ಏಕಮುಖಿಯಾಗಿ ತೆಗೆದುಕೊಳ್ಳುತ್ತಿರುವ ಆರ್ಥಿಕ ನಿರ್ಧಾರಗಳು ಮುಂದೊಮ್ಮೆ ಅಮೆರಿಕಾಗೆ ದೊಡ್ಡ ಮಟ್ಟದ ಸಮಸ್ಯೆ ತಂದಿಡಲಿದೆ ಎಂದು ಅರಿತ ಯುಎಸ್ ನಾಗರಿಕರು ಈಗ ಟ್ರಂಪ್ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಟ್ರಂಪ್ ಮತ್ತು ಎಲಾನ್ ಮಸ್ಕ್ ಆಡಳಿತದ ಸರ್ಕಾರ, ದೇಶದ ಆರ್ಥಿಕ ಸ್ಥಿತಿ, ಮಾನವಹಕ್ಕಗಳನ್ನು ಅಧಃಪತನಕ್ಕೆ ತಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಬೀದಿಗೆ ಇಳಿದಿದ್ದಾರೆ.

ಸಹಸ್ರಾರು ಜನ ಹ್ಯಾಂಡ್ಸ್​ ಆಫ್​ ಱಲಿಯನ್ನು ಆಯೋಜನೆ ಮಾಡಿದ್ದು. ಇದರಲ್ಲಿ ಸುಮಾರು 150 ಸಂಘಟನೆಗಳು ಸೇರಿವೆ. ನಾಗರಿಕ ಮಾನವಹಕ್ಕುಗಳ ಸಂಘ, ಕಾರ್ಮಿಕರ ಸಂಘ, ಎಲ್​ಬಿಜಿಟಿಕ್ಯೂ ಮತ್ತು ವಕೀಲರ ಸಂಘ, ಹಿರಿಯ ಮತ್ತು ಚುನಾವಣಾ ಅಧಿಕಾರಿಗಳು ಸೇರಿ ವಾಷಿಂಗ್ಟನ್​ ಡಿಸಿ ನ್ಯಾಷನಲ್ ಮಾಲ್​ ಬಳಿ ಸೇರಿದ್ದಾರೆ. ಕೇವಲ ಅಮೆರಿಕಾದ ರಾಜಧಾನಿ ಮಾತ್ರವಲ್ಲ ದೇಶದ 50 ರಾಜ್ಯಗಳಲ್ಲಿಯೂ ಕೂಡ ಪ್ರತಿಭಟನೆ ಜೋರಾಗಿದೆ.

ಇದನ್ನೂ ಓದಿ: ವಿಶ್ವದ ತಾಮ್ರದ ತವರೂರು ಎಂದು ಯಾವ ದೇಶವನ್ನು ಕರೆಯಲಾಗುತ್ತದೆ? ಇಲ್ಲಿ ಕಾಪರ್ ಭಂಡಾರ ಎಷ್ಟು ಪ್ರಮಾಣದಲ್ಲಿದೆ ಗೊತ್ತಾ?publive-image

ಅಮೆರಿಕಾದಿಂದ ವಿಶ್ವದ ಎಲ್ಲಾ ದೇಶಗಳ ಮೇಲೆ ಪ್ರತಿ ತೆರಿಗೆ ಘೋಷಣೆ ಹಿನ್ನೆಲೆಯಲ್ಲಿ ಅಮೆರಿಕಾದಲ್ಲಿ ಈ ವರ್ಷವೇ ಆರ್ಥಿಕ ಮಹಾಕುಸಿತ ಸಂಭವಿಸಲಿದೆ ಎಂದು ಜಿ.ಪಿ.ಮಾರ್ಗನ್ ಚೆಸ್​​ ಆ್ಯಂಡ್ ಕೋ ಕಂಪನಿ ಹೇಳಿದೆ. ಅದು ಮಾತ್ರವಲ್ಲ ಟ್ರಂಪ್​ರ ತೆರಿಗೆ ನೀತಿಯಿಂದಾಗಿ ಅಮೆರಿಕಾದ ಜಿಡಿಪಿ ಇದೇ ವರ್ಷ ಪಾತಾಳಕ್ಕೆ ಕುಸಿಯಲಿದೆ ಎಂದು ಆರೋಪಿಸಿದ್ದಾರೆ. ಅಮೆರಿಕಾದಲ್ಲಿ ನಿರುದದ್ಯೋಗ ದರವು ಶೇಕಡಾ 5.3ಕ್ಕೆ ಏರಿಕೆಯಾಗಿದೆ ಎಂದು ತಜ್ಞರು ಅಂದಾಜಿಸಿಲಾಗಿದೆ. ಮತ್ತೊಂದೆಡೆ ಆಮದು ಸುಂಕ ಏರಿಕೆಯ ಮೂಲಕ ದೇಶದ ಆದಾಯ ಸಂಗ್ರಹಕ್ಕೆ  ಟ್ರಂಪ್ ಪ್ಲ್ಯಾನ್ ಮಾಡಿದ್ದಾರೆ. ಆದ್ರೆ ಇದು ಮುಂದೆ ಅಮೆರಿಕಾಗೆ ತಿರುಗಬಾಣವಾಗಲಿದ್ದು ಆತಂಕರಿಕವಾಗಿ ದೇಶ ಆರ್ಥಿಕ ಸಂಕಷ್ಟಕ್ಕೆ ಬೀಳಲಿದೆ ಎಂದು ಹೇಳಿದ್ದಾರೆ. ಆರ್ಥಿಕ ಮಹಾಕುಸಿತ, ಜಿಡಿಪಿ ಕುಸಿತ, ನಿರುದ್ಯೋಗದಲ್ಲಿ ಏರಿಕೆ, ಆಮದು ಉತ್ಪನ್ನಗಳ ಬೆಲೆ ಏರಿಕೆ ಸಂಕಷ್ಟ ಇವೆಲ್ಲವನ್ನು ಭವಿಷ್ಯದಲ್ಲಿ ಅಮೆರಿಕಾ ಹಾಗೂ ಇಲ್ಲಿಯ ನಾಗರಿಕರು ಎದುರಿಸಬೇಕಾಗಿ ಬರುತ್ತದೆ.


">April 5, 2025

ಇದನ್ನೂ ಓದಿ:ಅಮೆರಿಕಾಗೇ ತಿರುಗುಬಾಣ ಆಯ್ತು ಟ್ರಂಪ್ ಸುಂಕ.. ಅಗ್ರ 500 ಶ್ರೀಮಂತರ ಜೇಬಿಗೆ ಕತ್ತರಿ..!

ಇದಕ್ಕೆ ನಿದರ್ಶನವಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿ ತೆರಿಗೆ ಘೋಷಣೆ ಮಾಡಿದಾಗಿನಿಂದ ಷೇರು ಪೇಟೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಅಮೆರಿಕಾದ ಆಲ್​ಸ್ಟ್ರೀಟ್​​ನಲ್ಲಿ ಬರೋಬ್ಬರಿ 5 ಟ್ರಿಲಿಯನ್​ ಡಾಲರ್​ನಷ್ಟು ಭಾರೀ ಕುಸಿತ ಕಂಡಿದ. ಕಳೆದ ಎರಡು ದಿನಗಳಿಂದ ಷೇರುಪೇಟೆ ನಿರಂತರವಾಗಿ ಕುಸಿಯುತ್ತಲೇ ಬಂದಿದೆ. ಅಮೆರಿಕಾದ ಎಸ್​ ಅಂಡ್ ಪಿ ಕಂಪನಿಗಳ ಪೈಕಿ 400 ಕಂಪನಿಗಳ ಷೇರುಬೆಲೆ ಕುಸಿತ ಕಂಡಿದೆ ಎಂದು ಆರೋಪಿಸಲಾಗುತ್ತಿದೆ.
ಇನ್ನು ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಮಾನವ ಹಕ್ಕುಗಳ ವಕಾಲತ್ತು ಗುಂಪಿನ ಅಧ್ಯಕ್ಷೆ ಕೆಲ್ಲಿ ರಾಬಿನ್ಸನ್ ಮಾತನಾಡಿದ್ದು. ನಮ್ಮ ಮೇಲೆ ದೊಡ್ಡ ದಾಳಿ ನಡೆಯುತ್ತಿದೆ. ಈ ಸರ್ಕಾರ ನಮ್ಮ ಪುಸ್ತಕಗಳನ್ನು ಬ್ಯಾನ್ ಮಾಡಲು ನಿಂತಿದೆ. ಹೆಚ್​​ಐವಿ ನಿಯಂತ್ರಣದ ನಿಧಿಯನ್ನು ತಡೆ ಹಿಡಿದಿದೆ. ಈ ಸರ್ಕಾರ ವೈದ್ಯರನ್ನು, ಶಿಕ್ಷಕರನ್ನು, ಕುಟುಂಬಗಳನ್ನು ನಮ್ಮ ಜೀವಗಳನ್ನು ಅಪರಾಧಿಗಳನ್ನಾಗಿ ಮಾಡಲು ಹೊರಟಿದ್ದಾರೆ. ನಮಗೆ ಈ ಅಮೆರಿಕಾ ಬೇಕಾಗಿಲ್ಲ. ನಮಗೆ ಅರ್ಹವಾದ ಅಮೆರಿಕಾ ಬೇಕಾಗಿದೆ ಎಂದು ಗುಡುಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment